ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಹಣಗೆರೆಕಟ್ಟೆ ರಸ್ತೆಯಲ್ಲಿ ತೆರಳುತ್ತಿದ್ದ ಎರಡು ಕಾರುಗಳಿಗೆ ಎದುರಿನಿಂದ ಬಂದ ಮತ್ತೊಂದು ಕಾರು ಡಿಕ್ಕಿ (Collision) ಹೊಡೆದಿದೆ. ಎರಡು ಕಾರುಗಳು ಎಡಬದಿಯ ಚರಂಡಿಗೆ ಉರುಳಿವೆ. ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ.

ಶಿವಮೊಗ್ಗದಲ್ಲಿ ಗೃಹಪ್ರವೇಶ ಸಮಾರಂಭಕ್ಕೆ ತೆರಳಿದ್ದ ಎರಡು ಕುಟುಂಬದವರು ಓಮ್ನಿ ಮತ್ತು ಎಕ್ಸ್‌ಟರ್ ಕಾರುಗಳಲ್ಲಿ ತೀರ್ಥಹಳ್ಳಿಯ ತಮ್ಮೂರಿಗೆ ತೆರಳುತ್ತಿದ್ದರು. ಕರಕುಚ್ಚಿ ಬಳಿ ಎದುರಿನಿಂದ ಬಂದ ಕಾರೊಂದು ಓಮ್ನಿ ಮತ್ತು ಎಕ್ಸ್‌ಟರ್ ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಎರಡು ಕಾರುಗಳು ರಸ್ತೆಯ ಎಡ ಬದಿಯ ಚರಂಡಿಗೆ ಉರುಳಿವೆ.
ಎರಡು ಕಾರುಗಳಲ್ಲಿ ಇದ್ದ ಅರ್ಜುನ ಡಿ.ರಾವ್, ಶಾರದಮ್ಮ, ಶೇಷಾಚಲ, ನಾಗಭೂಷಣ ರಾವ್, ಎದುರಿನಿಂದ ಬಂದು ಡಿಕ್ಕಿ ಹೊಡೆದ ಕಾರಿನಲ್ಲಿದ್ದ ಇಬ್ಬರು ಗಾಯಗೊಂಡಿದ್ದರು. ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಘಟನೆ ಸಂಬಂಧ ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ಪಾಕ್ ಮೇಲೆ ದಾಳಿ, ಪಹಲ್ಗಾಮ್‌ನಲ್ಲಿ ಮೃತರಾದ ರಿಯಲ್ ಎಸ್ಟೇಟ್ ಉದ್ಯಮಿ ತಾಯಿಯ ಮೊದಲ ರಿಯಾಕ್ಷನ್, ಏನಂದ್ರು?


LATEST NEWS
- ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ವ್ಯಕ್ತಿಗೆ ಬಿಸಿ ಮುಟ್ಟಿಸಿದ ಅಕ್ಕ ಪಡೆ, ಆಗಿದ್ದೇನು?

- ದುರ್ಗಿಗುಡಿಯಲ್ಲಿ ವೈಭವದ ರಥೋತ್ಸವ, ಈ ಬಾರಿ ಉತ್ಸವ ಬೆಳಗ್ಗೆ ನಡೆದಿದ್ದೇಕೆ?

- ₹1,00,000 ಲಂಚದ ಹಣದೊಂದಿಗೆ ಲೋಕಾಯುಕ್ತರಿಗೆ ಸಿಕ್ಕಿಬಿದ್ದ ಅಧಿಕಾರಿ, ಮಧ್ಯವರ್ತಿ

- ಸರಕು ರೇಟ್ ಕುಸಿತ, ಉಳಿದ ಮಾದರಿ ಅಡಿಕೆ ರೇಟ್ ಎಷ್ಟಿದೆ? | 2 ಮಾರ್ಚ್ 2026

- ಮಾರಿಕಾಂಬ ಜಾತ್ರೆಯಲ್ಲಿ ಕಳೆದು ಹೋದ ವೃದ್ಧೆ, ಪತ್ತೆ ಮಾಡಿ ಮನೆಗೆ ಬಿಟ್ಟು ಬಂದ ಪೊಲೀಸ್, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು






