ಮಾಲೀಕನ ಮನೆಗೆ ಹೋಗಿದ್ದ ಕೆಲಸದ ಹುಡುಗ ಹಿಂತಿರುಗಲೇ ಇಲ್ಲ, ಪರಿಶೀಲಿಸಿದಾಗ ಮಾಲೀಕನಿಗೆ ಬಿಗ್‌ ಶಾಕ್‌

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿಕಾರಿಪುರ: ಅಂಗಡಿಯಲ್ಲಿ ಕೆಲಸಕ್ಕಿದ್ದ ಯುವಕನೊಬ್ಬ ಮಾಲೀಕರು ತಮ್ಮ ಮನೆಯಲ್ಲಿಟ್ಟಿದ್ದ 11 ಲಕ್ಷ ರೂ. ಹಣ (Money) ಕಳ್ಳತನ ಮಾಡಿ ಪರಾರಿಯಾಗಿದ್ದಾನೆ. ಆತನ ಸುಳಿವು ಸಿಗದ ಹಿನ್ನೆಲೆ ಅಂಗಡಿ ಮಾಲೀಕ ದೂರು ನೀಡಿದ್ದಾರೆ.

ರಾಜಸ್ಥಾನ ಮೂಲದ ಸೆಯನ್‌ ಸಿಂಗ್‌ ಶಿಕಾರಿಪುರದಲ್ಲಿ ಚಪ್ಪಲಿಗಳ ಹೋಲ್‌ಸೇಲ್‌ ವ್ಯಾಪಾರ ಮಾಡುತ್ತಿದ್ದಾರೆ. ವ್ಯಾಪಾರದ ಹಣವನ್ನು ತಮ್ಮ ಮನೆಯ ಡಬ್ಬಿಯಲ್ಲಿ ಇಡುತ್ತಿದ್ದರು. ಕಳೆದ ವಾರ ಮೂರು ದಿನ ಬ್ಯಾಂಕ್‌ ರಜೆ ಇದ್ದಿದ್ದರಿಂದ 11 ಲಕ್ಷ ರೂ. ಹಣವನ್ನು ಮನೆಯಲ್ಲಿ ಇಟ್ಟಿದ್ದರು. (ಮತ್ತಷ್ಟು ಸುದ್ದಿ ಈ ಜಾಹೀರಾತಿನ ಕೆಳಗಿದೆ)

SLV-BOOK-SHOP-SHIMOGA

JNNCE-ADMISSION-2025-26

ಅಡುಗೆ ಮಾಡಲು ಹೋದವನು ನಾಪತ್ತೆ

ಮೇ 2ರಂದು ಮಧ್ಯಾಹ್ನದ ಅಡುಗೆ ಮಾಡುವಂತೆ ಸೂಚಿಸಿ ಸೆಯನ್‌ ಸಿಂಗ್‌ ತಮ್ಮ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹೇಂದ್ರ ಎಂಬಾತನಿಗೆ ಮನೆ ಬೀಗ ಕೊಟ್ಟು ಕಳುಹಿಸಿದ್ದರು. ಸಂಜೆ 4 ಗಂಟೆಯಾದರು ಮಹೇಂದ್ರ ಅಂಗಡಿಗೆ ಹಿಂತಿರುಗಿರಲಿಲ್ಲ. ಕರೆ ಮಾಡಿದಾಗ ಮೊಬೈಲ್‌ ಸ್ವಿಚ್‌ ಆಫ್‌ ಆಗಿತ್ತು. ಅನುಮಾನಗೊಂಡ ಸೆಯನ್‌ ಸಿಂಗ್‌ ಮನೆ ಬಳಿ ಪರಿಶೀಲಿಸಿದಾಗ ಬೀಗ ಹಾಕಲಾಗಿತ್ತು. (ಮತ್ತಷ್ಟು ಸುದ್ದಿ ಈ ಜಾಹೀರಾತಿನ ಕೆಳಗಿದೆ)

The-Team-PU-College-scaled

ಲಕ್ಷ ಲಕ್ಷದ ಜೊತೆಗೆ ನಾಪತ್ತೆ

ಮನೆ ಬೀಗ ಒಡೆದು ಸೆಯನ್‌ ಸಿಂಗ್‌ ಒಳಗೆ ಹೋಗಿ ಪರಿಶೀಲಿಸಿದಾಗ ಕೊಠಡಿಯೊಳಗೆ ಡಬ್ಬಿಯಲ್ಲಿ ಇಟ್ಟಿದ್ದ 11 ಲಕ್ಷ ರೂ. ಹಣ ನಾಪತ್ತೆಯಾಗಿತ್ತು. ಹಣದೊಂದಿಗೆ ಮಹೇಂದ್ರ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ರಾಜಸ್ಥಾನಕ್ಕೆ ಕರೆ ಮಾಡಿದಾಗಲು ಆತನ ಸುಳಿವು ಸಿಕ್ಕಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಶಿಕಾರಿಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಇದನ್ನೂ ಓದಿ » ಭದ್ರಾ ಡ್ಯಾಮ್‌ ಎಡ, ಬಲ ದಂಡೆ ನಾಲೆಗಳಿಂದ ನೀರು ಹರಿಸುವ ಬಗ್ಗೆ ಮಹತ್ವದ ಅಪ್‌ಡೇಟ್‌, ಏನದು?

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment