ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಜಿಲ್ಲೆಯ ವಿವಿಧೆಡೆ ಇವತ್ತೂ ಮಳೆ ಮುಂದುವರೆದಿದೆ (Rain Update). ಅಲ್ಲಲ್ಲಿ ಬೆಳಗ್ಗೆಯಿಂದ ಮಳೆಯಾಗುತ್ತಿದ್ದು, ಹಲವಡೆ ಮೋಡ ಕವಿದ ವಾತಾವರಣ ಇದೆ. ಯಾವುದೇ ಸಂದರ್ಭ ಮಳೆಯಾಗುವ ಸಾಧ್ಯತೆ ಇದೆ.
ತೀರ್ಥಹಳ್ಳಿ, ಹೊಸನಗರ, ಸಾಗರ, ಸೊರಬ ಮತ್ತು ಶಿಕಾರಿಪುರ ತಾಲೂಕಿನ ವಿವಿಧೆಡೆ ಮಳೆಯಾಗುತ್ತಿದೆ. ಶಿವಮೊಗ್ಗ, ಭದ್ರಾವತಿ ತಾಲೂಕುಗಳಲ್ಲಿ ಮೋಡ ಕವಿದ ವಾತಾವರಣ ಇದೆ. ಜಿಲ್ಲೆಯಲ್ಲಿ ಬೆಳಗ್ಗೆ 8.30ರಿಂದ 11.15ರವರೆಗೆ ಸರಾಸರಿ 8.5 ಮಿ.ಮೀ.ನಷ್ಟು ಮಳೆಯಾಗಿದೆ ಎಂದು ಅಂದಾಜಿಸಲಾಗಿದೆ.
ಎಲ್ಲೆಲ್ಲಿ ಮಳೆಯಾಗುತ್ತಿದೆ?
ಈ ಸುದ್ದಿ ಪ್ರಕಟವಾಗುವಾಗ ತೀರ್ಥಹಳ್ಳಿ ತಾಲೂಕಿನ ತೀರ್ಥಮತ್ತೂರು, ಸಾಲ್ಗುಡಿ, ಬೆಜ್ಜವಳ್ಳಿ, ಭಾಂಡ್ಯ ಕುಕ್ಕೆ, ತ್ರಯಂಬಕಪುರ, ಆರಗ, ಮೇಗರವಳ್ಳಿ, ನೆರಟೂರು, ಮಳುಬಾಗಿಲು, ಹೊಸಹಳ್ಳಿ, ಹೊನ್ನೇತಾಳು, ಅರೆಹಳ್ಳಿ, ಬಿದರಗೋಡು, ಹಾದಿಗಲ್ಲು.

ಹೊಸನಗರದ ಸೊನಾಲೆ, ಮುಂಬಾರು, ಕೋಡೂರು, ಮೇಲಿನಬೆಸಿಗೆ, ಹೊಸೂರು ಸಂಪೆಕಟ್ಟೆ, ಮಾರುತಿಪುರ. ಸಾಗರದ ಕೋಳೂರು, ಭೀಮನಕೋಣೆ, ಕಲ್ಮನೆ, ಕಾಂಡಿಕ, ಭೀಮನೇರಿ, ತ್ಯಾಗರ್ತಿ, ಮಾಲ್ವೆ, ಕೆಳದಿ, ಹಿರೇನಲ್ಲೂರು.

ಸೊರಬ ತಾಲೂಕಿನ ಹೊಸಬಾಳೆ, ಇಂಡುವಳ್ಳಿ, ಶಿಗ್ಗಾ, ಚಿತ್ತೂರು, ನ್ಯಾರ್ಸಿ, ಬೆನ್ನೂರು, ಗುಡುವಿ, ದ್ಯಾವನಹಳ್ಳಿ, ಕುಬಟೂರು, ತಲ್ಲೂರು, ತತ್ತೂರು, ಅಗಸನಹಳ್ಳಿ. ಶಿಕಾರಿಪುರದ ಮತ್ತಿಕೋಟೆ, ಅಂಬಾರಗೊಪ್ಪ, ಅಮಟೆಕೊಪ್ಪ, ಜಕ್ಕನಹಳ್ಳಿಯಲ್ಲಿ ಮಳೆಯಾಗುತ್ತಿದೆ.
ಇದನ್ನೂ ಓದಿ » ಶಿವಮೊಗ್ಗ – ಭದ್ರಾವತಿ ಮಧ್ಯೆ ಸಿದ್ದಾಪುರ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್

Shivamogga Rain Update: Rain continues across Shivamogga district, including Thirthahalli, Sagar, Soraba. Cloudy weather persists. #Shivamogga #Rain #Weather
LATEST NEWS
- ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್ನಲ್ಲಿ ಪಾಸ್, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

About The Editor
ನಿತಿನ್ ಆರ್.ಕೈದೊಟ್ಲು





