ಶಿವಮೊಗ್ಗ: ಲಕ್ಷಾಂತರ ರೂ. ಮೌಲ್ಯದ ಅಡಿಕೆ (Adike) ಹೊತ್ತು ಶಿವಮೊಗ್ಗದಿಂದ ಉತ್ತರ ಪ್ರದೇಶಕ್ಕೆ ತೆರಳಿದ್ದ ಲಾರಿ ನಾಪತ್ತೆಯಾಗಿದೆ. ಲಾರಿ ಮಾಲೀಕ ಮತ್ತು ಡ್ರೈವರ್ ತಮ್ಮ ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಶಿವಮೊಗ್ಗದ ಅಡಿಕೆ ಮಂಡಿಯೊಂದರಿಂದ 82 ಲಕ್ಷ ರೂ. ಮೌಲ್ಯದ 430 ಚೀಲ ಅಡಿಕೆಯನ್ನು ಉತ್ತರ ಪ್ರದೇಶದ ಕಾನ್ಪುರದ ಕಾರ್ಖಾನೆಯೊಂದಕ್ಕೆ ಕಳುಹಿಸಲಾಗಿತ್ತು. ಮೇ 13ರಂದು ಶಿವಮೊಗ್ಗದಿಂದ ಲಾರಿ ಹೊರಟಿದೆ. ಆದರೆ ಕಾನ್ಪುರದಲ್ಲಿ ಕಾರ್ಖಾನೆಗೆ ತಲುಪಿಲ್ಲ ಎಂದು ಆರೋಪಿಸಲಾಗಿದೆ.

ಲಾರಿ ಚಾಲಕ ಮತ್ತು ಮಾಲೀಕನಿಗೆ ಕರೆ ಮಾಡಿದರೆ ಅವರ ಮೊಬೈಲ್ ಫೋನ್‌ಗಳು ಸ್ವಿಚ್ ಆಫ್ ಬರುತ್ತಿದೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಅಡಿಕೆ ಮಂಡಿ ಮಾಲೀಕ ತುಂಗಾ ನಗರ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಆರೋಪ ಪಟ್ಟಿ ಅಭಿಯಾನ, 8 ಪುಟದ ಚಾರ್ಜ್ ಶೀಟ್ ಬಿಡುಗಡೆ ಮಾಡಿದ MLA, ಏನಿದು?

