ಸೊರಬ: ರಸ್ತೆ ದಾಟುವಾಗ ಲಾರಿ ಡಿಕ್ಕಿಯಾಗಿ ಅಂಗನವಾಡಿ ಮಗು (Boy) ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ತಾಲೂಕಿನ ಕೆರೆಕೊಪ್ಪ ಗ್ರಾಮದಲ್ಲಿ ನಡೆದಿದೆ.➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.
ಶಿರಸಿಯ ಅತಾವುಲ್ಲಾಖಾನ್ ಹಾಗೂ ಫರೀನಾ ಬೇಗಂ ಅವರ ಪುತ್ರ ಮೂರುವರೆ ವರ್ಷದ ಮುಹಮ್ಮದ್ ಆಹಿಲ್ ಖಾನ್ ಮೃತ ಮಗು.

ಕೆರೆಕೊಪ್ಪದಲ್ಲಿರುವ ತವರು ಮನೆಗೆ ಹೆರಿಗೆಗೆ ಬಂದ ತಾಯಿ ಜತೆಗೆ ಪುತ್ರ ಮುಹಮ್ಮದ್ ಆಹಿಲ್ ಖಾನ್ ಇದ್ದನು. ಶಾಲೆ ಆರಂಭವಾಗಿದ್ದರಿಂದ ಮಗು ಅಂಗನವಾಡಿಗೆ ಹೋಗುತ್ತಿದ್ದು, ಮನೆಗೆ ಕರೆದುಕೊಂಡು ಹೋಗಲು ಬಂದ ಅಜ್ಜಿಯನ್ನು ಕಂಡು ರಸ್ತೆ ದಾಟುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಟೊಯೋಟ ಸಂಸ್ಥೆಯ ಡೆಮೋ ಕಾರುಗಳ ಮಾರಾಟ, ಎಕ್ಸ್‌ಚೇಂಜ್ ಮೇಳ, ಯಾವಾಗ? ಎಲ್ಲಿದೆ?
