ಜೈಲಿಂದ ಹೊರ ಬಂದು ತಿಂಗಳೊಳಗೆ ಸಚಿನ್‌ ಕಾಲಿಗೆ ಗುಂಡು, ಮತ್ತೆ ಅರೆಸ್ಟ್‌ ಆದ ಶ್ಯಾಡೋ, ಏನಿದು ಕೇಸ್‌?

ಸಾಗರ: ದರೋಡೆ ಪ್ರಕರಣದ ಆರೋಪಿ ಶ್ಯಾಡೊ ಸಚಿನ್‌ (Shadow Sachin) ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಬಂಧಿಸಲು ತೆರಳಿದ್ದ ಪೊಲೀಸ್‌ ಸಿಬ್ಬಂದಿ ಮೇಲೆಯೇ ಶ್ಯಾಡೋ ಸಚಿನ್‌ ಹಲ್ಲೆ ನಡೆಸಿದ್ದಾನೆ. ಆತ್ಮರಕ್ಷಣೆಗೆ ಪಿಎಸ್‌ಐ ಹಾರಿಸಿದ ಗುಂಡು ಆರೋಪಿ ಕಾಲಿಗೆ ತಗುಲಿದೆ.

ಆನಂದಪುರ ಠಾಣೆ ಪೊಲೀಸರು ಶ್ಯಾಡೋ ಸಚಿನ್‌ನ ಬಂಧನಕ್ಕೆ ಮೆಣಸಿನಸರ ಸಮೀಪ ತೆರಳಿದ್ದಾಗ ಘಟನೆ ಸಂಭವಿಸಿದೆ. ಹೆಡ್‌ ಕಾನ್ಸ್‌ಟೇಬಲ್‌ ಅಶೋಕ್‌ ಮೇಲೆ ಶ್ಯಾಡೋ ಸಚಿನ್‌ ಮಚ್ಚಿನಿಂದ ಹಲ್ಲೆ ನಡೆಸಿದ್ದ. ಈ ಸಂದರ್ಭ ಪಿಎಸ್‌ಐ ಯುವರಾಜ್‌ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ.

Toyota-demo-car-sale.

ಇತ್ತೀಚೆಗಷ್ಟೆ ಜೈಲಿನಿಂದ ಬಿಡುಗಡೆಯಾಗಿದ್ದ

ವಿವಿಧ ಪ್ರಕರಣ ಸಂಬಂಧ ಜೈಲಿನಲ್ಲಿ ಬಂಧಿಯಾಗಿದ್ದ ಶ್ಯಾಡೋ ಸಚಿನ್‌ ಒಂದು ತಿಂಗಳ ಹಿಂದಷ್ಟೆ ಬಿಡುಗಡೆಯಾಗಿದ್ದ.

Kalleshwara-Enterprises.webp

ಶ್ಯಾಡೊ ಸಚಿನ್‌ ಒಂದು ತಿಂಗಳಿಂದ ಈಚೆಗೆ ಜೈಲಿನಿಂದ ಬಿಡುಗಡೆಯಾಗಿದ್ದ. ಆಗಲೆ ಆತನ ವಿರುದ್ಧ ರಾಬರಿ, ಸುಲಿಗೆಯ ಮೂರು ಪ್ರಕರಣಗಳು ದಾಖಲಾಗಿವೆ. ಬಂಧಿಸಲು ತೆರಳಿದ್ದಾಗ ಪೊಲೀಸ್‌ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ. ಆಗ ಪಿಎಸ್‌ಐ ಯುವರಾಜ್‌ ಅವರು ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಬಳಿಕ ಆತನ ಕಾಲಿಗೆ ಗುಂಡು ಹೊಡೆದು ವಶಕ್ಕೆ ಪಡೆದಿದ್ದಾರೆ.ಜಿ.ಕೆ.ಮಿಥುನ್‌ ಕುಮಾರ್‌, ಜಿಲ್ಲಾ ರಕ್ಷಣಾಧಿಕಾರಿ

https://chat.whatsapp.com/JPJ0lTQsTKf365Fqu6Q7cd
ಈ ಫೋಟೊ ಮೇಲೆ ಕ್ಲಿಕ್‌ ಮಾಡಿ, ಶಿವಮೊಗ್ಗ ಲೈವ್‌ ವಾಟ್ಸಪ್‌ ಗ್ರೂಪ್‌ ಸೇರಿರಿ.

ಟಿಪ್ಪರ್‌ ಲಾರಿ ಅಡ್ಡಗಟ್ಟಿ ದರೋಡೆ

ಸಾಗರದ ಕಾಸ್ಪಾಡಿ ಸಮೀಪ ಈಚೆಗೆ ಟಿಪ್ಪರ್‌ ಲಾರಿ ಅಡ್ಡಗಟ್ಟಿ ಚಾಲಕನ ಬಳಿ ಇದ್ದ ಮೊಬೈಲ್‌ ಮತ್ತು ಹಣ ಕಳ್ಳತನ ಮಾಡಲಾಗಿತ್ತು. ಟಿಪ್ಪರ್‌ ಲಾರಿಯು ಆನಂದಪುರದಿಂದ ಸಾಗರದ ಕಡೆಗೆ ತೆರಳುತ್ತಿತ್ತು. ಐಗಿನಬೈಲಿನಿಂದ ಕೆಟಿಎಂ ಬೈಕಿನಲ್ಲಿ ಹಿಂಬಾಲಿಸಿಕೊಂಡು ಬಂದ ಇಬ್ಬರು ದುಷ್ಕರ್ಮಿಗಳು ಕಾಸ್ಪಾಡಿ ಸಮೀಪ ಲಾರಿ ಅಡ್ಡಗಟ್ಟಿದ್ದರು. 

Police-open-fire-on-Shadow-Sachin-at-Anandapura.

ಚಾಕು ತೋರಿಸಿ, ಕಲ್ಲು ಎತ್ತಿ ಹಾಕುವುದಾಗಿ ಬೆದರಿಸಿದ ದುಷ್ಕರ್ಮಿಗಳು, ಟಿಪ್ಪರ್‌ ಲಾರಿ ಚಾಲಕನ ಬಳಿ ಇದ್ದ ಓಪೊ ಮೊಬೈಲ್‌ ಫೋನ್‌ ಮತ್ತು 10 ಸಾವಿರ ರೂ. ನಗದು ಕಿತ್ತುಕೊಂಡಿದ್ದರು. ಈ ಪ್ರಕರಣದಲ್ಲಿ ಶ್ಯಾಡೋ ಸಚಿನ್‌ ಭಾಗಿಯಾಗಿದ್ದ ಎಂದು ಆರೋಪಿಸಲಾಗಿದೆ.

ಬೀಡಾ ಅಂಗಡಿ ಮಾಲೀಕನ ಮೇಲೂ ದಾಳಿ

ಬೀಡಾ ಅಂಗಡಿಯೊಂದರಲ್ಲಿ ಸುಲಿಗೆ ಮಾಡಿರುವ ಸಂಬಂಧ ಶ್ಯಾಡೋ ಸಚಿನ್‌ ವಿರುದ್ಧ ಪ್ರಕರಣ ದಾಖಲಾಗಿದೆ. ನವುಲೆಯ ಮೂಲ ವೈನ್ಸ್‌ ಸ್ಟೋರ್‌ ಪಕ್ಕದಲ್ಲಿರುವ ಬೀಡಾ ಅಂಗಡಿ ಮಾಲೀಕ ಪ್ರತಾಪ್‌ ಮೇಲೆ ಮೇ 29ರ ರಾತ್ರಿ ಹಲ್ಲೆ ನಡೆಸಿದ್ದ. ಅಂಗಡಿಯಲ್ಲಿ 2 ಸಾವಿರ ರೂ. ಸುಲಿಗೆ ಮಾಡಿದ್ದ ಎಂದು ಆರೋಪಿಸಲಾಗಿದೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

ಇದನ್ನೂ ಓದಿ » ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌, ಅರ್ಜಿ ಸಲ್ಲಿಸುವುದು ಹೇಗೆ? ಶಿವಮೊಗ್ಗದಲ್ಲಿ ಎಲ್ಲೆಲ್ಲಿ ಅರ್ಜಿ ಸಲ್ಲಿಸಬಹುದು?

Police-open-fire-on-Shadow-Sachin-at-Anandapura.
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment