ಸಾಗರದಲ್ಲಿ ನಕಲಿ ನೋಟುಗಳ ಚಲಾವಣೆ ಆರೋಪ, ಏನಿದು ಪ್ರಕರಣ?

ಸಾಗರ: ನಗರದಲ್ಲಿ ಕಳೆದ ಎರಡು ತಿಂಗಳಿಂದ ₹500, ₹200 ಹಾಗೂ ₹50 ಮುಖಬೆಲೆಯ ನಕಲಿ ನೋಟುಗಳು ವ್ಯಾಪಕವಾಗಿ ಚಲಾವಣೆಯಾಗುತ್ತಿವೆ ಎಂದು ನೇತಾಜಿ ಸುಭಾಷ್‌ಚಂದ್ರ ಯುವ ಟ್ರಸ್ಟ್ ಅಧ್ಯಕ್ಷ ಸುಭಾಷ್ ಕೌತಳ್ಳಿ ಆರೋಪಿಸಿದ್ದಾರೆ.

ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದುರ್ಗಾಂಬ ದೇವಸ್ಥಾನದ ಎದುರಿನ ತಮ್ಮ ರೇಣುಕಾಂಬಾ ಫ್ಲವರ್ ಸ್ಟಾಲ್‌ಗೆ ಪ್ರತಿದಿನ ಮೂರರಿಂದ ನಾಲ್ಕು ನಕಲಿ ನೋಟುಗಳು ಬರುತ್ತಿವೆ ಎಂದರು.

fake-note-allegation-at-Sagara

ಮಳೆಗಾಲದಲ್ಲಿ ಮಂದ ಬೆಳಕಿನ ಪ್ರಯೋಜನ ಪಡೆದು ಕೆಲವರು ನಕಲಿ ನೋಟು ಚಲಾಯಿಸುತ್ತಿದ್ದಾರೆ. ನಕಲಿ ನೋಟು ಸ್ವೀಕರಿಸಿದವರು ಅದನ್ನು ಚಲಾಯಿಸಲು ಹೋದರೆ ಪೊಲೀಸರ ವಿಚಾರಣೆ ಎದುರಿಸುವ ಆತಂಕವಿದೆ. ನಕಲಿ ನೋಟುಗಳಲ್ಲಿ ಗಾಂಧೀಜಿ ಭಾವಚಿತ್ರ ಹಾಗೂ 500, 200, 50ರ ಸಂಖ್ಯೆಗಳು ಸರಿಯಾಗಿ ಕಾಣಿಸುವುದಿಲ್ಲ, ಸಾರ್ವಜನಿಕರು ಹಣ ಸ್ವೀಕರಿಸುವಾಗ ಎಚ್ಚರಿಕೆ ವಹಿಸಬೇಕು. ಪೊಲೀಸ್ ಇಲಾಖೆ ಈ ಕುರಿತು ವ್ಯಾಪಕ ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿದರು.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ