ಬೆಳ್ಳಿ ಮತ್ತಷ್ಟು ದುಬಾರಿ, ಚಿನ್ನದ ಬೆಲೆಯು ಹೆಚ್ಚಳ, ಎಷ್ಟಾಗಿದೆ ರೇಟ್‌?

ಮಾರುಕಟ್ಟೆ ಮಾಹಿತಿ: ಚಿನಿವಾರ ಪೇಟೆಯಲ್ಲಿ ಗುರುವಾರ ನಡೆದ ವಹಿವಾಟಿನಲ್ಲಿ ಬೆಳ್ಳಿ ದರವು (Silver Price) ಹೊಸ ದಾಖಲೆ ನಿರ್ಮಿಸಿದೆ. ಪ್ರತಿ ಕೆ.ಜಿ ಬೆಳ್ಳಿ 2,000 ರೂ. ಏರಿಕೆಯಾಗಿ 1.04 ಲಕ್ಷ ರೂ.ಗೆ ಮಾರಾಟವಾಗಿದೆ. ಈ ಹಿಂದೆ ಮಾರ್ಚ್ 19ರಂದು 1.03 ಲಕ್ಷ ರೂ. ಗರಿಷ್ಠ ಮಟ್ಟಕ್ಕೆ ತಲುಪಿತ್ತು. (ಈ ಸುದ್ದಿಯನ್ನು ಇನ್ನು 39 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಚಿನ್ನದ ದರದಲ್ಲಿಯೂ ಗಣನೀಯ ಏರಿಕೆ ಕಂಡುಬಂದಿದೆ. ಶುದ್ಧ ಚಿನ್ನ (ಶೇ 99.9 ಪರಿಶುದ್ಧತೆ) 10 ಗ್ರಾಂಗೆ 430 ರೂ. ಏರಿಕೆಯಾಗಿ 99,690 ರೂ.ಗೆ ತಲುಪಿದೆ. ಹಾಗೆಯೇ, ಆಭರಣ ಚಿನ್ನದ ಬೆಲೆ (ಶೇ 99.5 ಪರಿಶುದ್ಧತೆ) 400 ರೂ. ಹೆಚ್ಚಳವಾಗಿ 99,100 ರೂ.ಗೆ ತಲುಪಿದೆ ಎಂದು ಅಖಿಲ ಭಾರತ ಸರಾಫ್‌ ಅಸೋಸಿಯೇಷನ್ ಮಾಹಿತಿ ನೀಡಿದೆ.

https://chat.whatsapp.com/JPJ0lTQsTKf365Fqu6Q7cd

ಇದನ್ನೂ ಓದಿ » ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ, ಶಿವಮೊಗ್ಗದಲ್ಲಿ ಅಣ್ಣ, ತಮ್ಮನ ಮೇಲೆ ಹಲ್ಲೆ, ಆಸ್ಪತ್ರೆಗೆ ದಾಖಲು

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ
BUSINESS-NEWS.webp

Leave a Comment