ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ, ಶಿವಮೊಗ್ಗದಲ್ಲಿ ಅಣ್ಣ, ತಮ್ಮನ ಮೇಲೆ ಹಲ್ಲೆ, ಆಸ್ಪತ್ರೆಗೆ ದಾಖಲು

ಶಿವಮೊಗ್ಗ: ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಇಬ್ಬರು ಯುವಕರ ಮೇಲೆ ಹಲ್ಲೆಯಾಗಿದೆ (Attack). ಗಾಯಾಳುಗಳು ಮೆಗ್ಗಾನ್‌ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಕೊಂಡಿದ್ದಾರೆ. ಶಿವಮೊಗ್ಗ ನಗರದ ಹೊಸಮನೆ ಬಡಾವಣೆಯಲ್ಲಿ ಘಟನೆ ನಡೆದಿದೆ. ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ಆರ್‌ಸಿಬಿ ಪಂದ್ಯ ಗೆಲುತ್ತಿದ್ದಂತೆ ಹೊಸಮನೆ ಬಡಾವಣೆಯಲ್ಲಿ ರಾತ್ರಿ ಯುವಕರು ಡೊಳ್ಳು ಹೊಡೆಸಿ ಡಾನ್ಸ್‌ ಮಾಡುತ್ತಿದ್ದರು. ಪಕ್ಕದಲ್ಲಿ ನಿಂತು ಇದನ್ನು ವೀಕ್ಷಿಸುತ್ತಿದ್ದ ಗಣೇಶ, ಅವರ ಸಹೋದರ ಪ್ರಸನ್ನ ಮತ್ತು ಸ್ನೇಹಿತ ಶಿವು ಮೇಲೆ ಹಲ್ಲೆಯಾಗಿದೆ.

https://chat.whatsapp.com/JPJ0lTQsTKf365Fqu6Q7cd

ನೃತ್ಯ ಮಾಡುತ್ತಿದ್ದರ ಪೈಕಿ ಒಬ್ಬಾತ ಗಣೇಶ್‌ ತಲೆಗೆ ಹೊಡೆದಿದ್ದಾನೆ. ಸಹೋದರ ಪ್ರಸನ್ನನ ಕಿವಿ ಭಾಗಕ್ಕೆ ಹೊಡೆಯಲಾಗಿದೆ. ಸ್ನೇಹಿತ ಶಿವುಗೆ ಕೆನ್ನೆಗೆ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಗಾಯಗೊಂಡಿದ್ದ ಗಣೇಶ್‌ ಮತ್ತು ಪ್ರಸನ್ನ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಶಿವಮೊಗ್ಗದ ಹವಾಮಾನ ವರದಿ | 6 ಜೂನ್‌ 2025 | ಮುಂದುವರೆದ ಥಂಡಿ, ಇವತ್ತು ಎಷ್ಟಿರುತ್ತೆ ತಾಪಮಾನ?

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ
📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion

Leave a Comment