ಶಿವಮೊಗ್ಗ ಜಿಲ್ಲೆಯಾದ್ಯಂತ ಇವತ್ತು ಬೆಳಗ್ಗೆಯಿಂದ ನಿರಂತರ ಮಳೆಯಾಗುತ್ತಿದೆ. ಸಿಟಿಯಲ್ಲಿ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ನದ ಬಳಿಕ ಜೋರು ಮಳೆಯಾಗಿದೆ.
204 ಮಿ.ಮೀ ಮಳೆ
ಇವತ್ತು ರೆಡ್ ಅಲರ್ಟ್ ಘೋಷಿಸಲಾಗಿದ್ದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಹಾವೇರಿ, ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಅತ್ಯಧಿಕ ಮಳೆಯಾಗಿದೆ. ಇವತ್ತು ಬೆಳಗ್ಗೆ 8.30ರಿಂದ ಸಂಜೆವರೆಗೆ ಸರಾಸರಿ 204.5 ಮಿ.ಮೀ.ನಷ್ಟು ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನಷ್ಟು ಮಳೆಯಾಗುವ ಸಾಧ್ಯತೆ ಇದ್ದು, ಸಾರ್ವಜನಿಕರು ಎಚ್ಚರ ವಹಿಸುವಂತೆ ಸೂಚಿಸಲಾಗಿದೆ.

ಶಿವಮೊಗ್ಗದಲ್ಲಿ ಮಳೆ ಅಬ್ಬರ
ಶಿವಮೊಗ್ಗ ಜಿಲ್ಲೆಯಾದ್ಯಂತ ಜೋರು ಮಳೆಯಾಗುತ್ತಿದೆ. ಜೂ.11ರ ಬೆಳಗ್ಗೆ 8.30ರಿಂದ ಜೂ.12ರ ಬೆಳಗ್ಗೆ 8.30ರವರೆಗೆ ಜಿಲ್ಲೆಯಲ್ಲಿ ಸರಾಸರಿ 40.9 ಮಿ.ಮೀ ಮಳೆಯಾಗಿದೆ. ಈ ಅವಧಿಯಲ್ಲಿ ಮಲೆನಾಡು ಭಾಗದಲ್ಲಿ ಇದೇ ಅತ್ಯಧಿಕ ಮಳೆಯಾಗಿದೆ.
ಇನ್ನು, ಶಿವಮೊಗ್ಗ ತಾಲೂಕಿನಲ್ಲಿ 27.6 ಮಿ.ಮೀ, ಭದ್ರಾವತಿ ತಾಲೂಕಿನಲ್ಲಿ 17.4 ಮಿ.ಮೀ, ಹೊಸನಗರದಲ್ಲಿ 32 ಮಿ.ಮೀ, ಸಾಗರದಲ್ಲಿ 55.1 ಮಿ.ಮೀ, ಶಿಕಾರಿಪುರದಲ್ಲಿ 45.3 ಮಿ.ಮೀ, ಸೊರಬದಲ್ಲಿ 43.3 ಮಿ.ಮೀ, ತೀರ್ಥಹಳ್ಳಿ 47.8 ಮಿ.ಮೀ ಮಳೆಯಾಗಿದೆ.
ಇದನ್ನೂ ಓದಿ » ಆಗುಂಬೆ ಘಾಟಿ ತಿರುವಿನಲ್ಲೇ ಕೆಟ್ಟು ನಿಂತ ಕ್ಯಾಂಟರ್, ಟ್ರಾಫಿಕ್ ಜಾಮ್

