ಶಿವಮೊಗ್ಗದಲ್ಲಿ ತಗ್ಗಿದ ಮಳೆ, ಬಿಸಿಲು ಪ್ರತ್ಯಕ್ಷ, ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ?

ಶಿವಮೊಗ್ಗ: ಜಿಲ್ಲೆಯಲ್ಲಿ ಇವತ್ತು ಮಳೆ (Rain) ಪ್ರಮಾಣ ತಗ್ಗಿದೆ. ಹವಾಮಾನ ಇಲಾಖೆ ಯಲ್ಲೋ ಅಲರ್ಟ್‌ ಘೋಷಿಸಿದ್ದರು ಮಳೆ ಕಡಿಮೆಯಾಗಿದೆ. (ಈ ಸುದ್ದಿಯನ್ನು ಇನ್ನು 56 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಇವತ್ತು ಸಾಧಾರಣ ಮಳೆಯಾಗುತ್ತಿದೆ. ಕೆಲವೆಡೆ ಮಾತ್ರ ಸ್ವಲ್ಪ ಹೊತ್ತು ಜೋರು ಮಳೆಯಾಗಿರುವ ವರದಿಯಾಗಿದೆ. ಇಂದು ಬೆಳಗ್ಗೆ 8.30ರಿಂದ ಸಂಜೆ 5 ಗಂಟೆವರೆಗೆ ಶಿವಮೊಗ್ಗ ಜಿಲ್ಲೆಯಾದ್ಯಂತ ಸರಾಸರಿ 21 ಮಿ.ಮೀ ಮಳೆಯಾಗಿದೆ ಎಂದು ಅಂದಾಜಿಸಲಾಗಿದೆ.

https://chat.whatsapp.com/JPJ0lTQsTKf365Fqu6Q7cd

ಎರಡು ದಿನದಿಂದ ಮಳೆ ಕಡಿಮೆ

RAIN-REPORT-LOGOಮಂಗಳವಾರದಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಪ್ರಮಾಣ ತಗ್ಗಿದೆ. ಮಂಗಳವಾರ ಬೆಳಗ್ಗೆ 8.30ರಿಂದ ಬುಧವಾರ ಬೆಳಗ್ಗೆ 8.30ರವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಸರಾಸರಿ 24.7 ಮಿ.ಮೀ ಮಳೆಯಾಗಿದೆ. ಭದ್ರಾವತಿಯಲ್ಲಿ 6.9 ಮಿ.ಮೀ, ಹೊಸನಗರ 31.3 ಮಿ.ಮೀ, ಸಾಗರ 28.3 ಮಿ.ಮೀ, ಶಿಕಾರಿಪುರ 7.5 ಮಿ.ಮೀ, ಶಿವಮೊಗ್ಗ 8.9 ಮಿ.ಮೀ, ಸೊರಬ 15.3 ಮಿ.ಮೀ, ತೀರ್ಥಹಳ್ಳಿ 56.9 ಮಿ.ಮೀ ಮಳೆಯಾಗಿದೆ.

ಸರಿದ ಮೋಡ, ಆವರಿಸಿದ ಬಿಸಿಲು

ಇನ್ನು, ಜಿಲ್ಲೆಯಲ್ಲಿ ಬಿಸಿಲು ಆವರಿಸಿದೆ. ಸಣ್ಣ ಪ್ರಮಾಣದ ಮಳೆಯಾಗಿ ಬಳಿಕ ಅಲ್ಲಲ್ಲಿ ಬಿಸಿಲು ಕಾಣಿಸಿಕೊಂಡಿದೆ. ಶಿವಮೊಗ್ಗ ನಗರದಲ್ಲಿ ಬೆಳಗ್ಗೆಯಿಂದಲು ಬಿಸಿಲು ಇದೆ. ಸಂಜೆ ವೇಳೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ » ತುಂಗಾ ಡ್ಯಾಮ್‌ನಿಂದ ಮತ್ತಷ್ಟು ನೀರು ಹೊರಕ್ಕೆ, ಇವತ್ತು ಎಷ್ಟಿದೆ ಒಳ, ಹೊರ ಹರಿವು?

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ
rain-in-shimoga-city-near-vidyanagara-flyover

Leave a Comment