ಶಿವಮೊಗ್ಗ – ಭದ್ರಾವತಿ ಮಧ್ಯೆ ಕೆಟ್ಟು ನಿಂತ ರೈಲು, ಜನಶತಾಬ್ದಿ ಸಂಚಾರಕ್ಕು ತೊಡಕು, ಪ್ರಯಾಣಿಕರ ಪರದಾಟ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಭದ್ರಾವತಿ: ಇಂಜಿನ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿ ಕುವೆಂಪು ಎಕ್ಸ್‌ಪ್ರೆಸ್‌ ರೈಲು (Train) ಮಾರ್ಗ ಮಧ್ಯದಲ್ಲೇ ನಿಂತಿದ್ದರಿಂದ ಭಾನುವಾರ ಶಿವಮೊಗ್ಗಕ್ಕೆ ಬರಬೇಕಿದ್ದ ಮತ್ತು ಶಿವಮೊಗ್ಗದಿಂದ ಹೊರಡಬೇಕಿದ್ದ ರೈಲುಗಳ ಸಂಚಾರಕ್ಕೆ ಅಡಚಣೆ  ಉಂಟಾಯಿತು. ಇದರಿಂದ ನೂರಾರು ಪ್ರಯಾಣಿಕರಿಗೆ ಅನಾನುಕೂಲವಾಯಿತು.

ಮೈಸೂರು – ತಾಳಗುಪ್ಪ ಕುವೆಂಪು ಎಕ್ಸ್‌ಪ್ರೆಸ್‌ ರೈಲಿನಲ್ಲಿ (ಸಂಖ್ಯೆ 16222) ತಾಂತ್ರಿಕ ಸಮಸ್ಯೆ ಉಂಟಾಗಿತ್ತು. ಇದೇ ಕಾರಣಕ್ಕೆ ಮೈಸೂರು ಮಾರ್ಗದಿಂದಲೇ ತಡವಾಗಿ ಸಂಚರಿಸಿತ್ತು. ರಾತ್ರಿ 8 ಗಂಟೆಗೆ ಭದ್ರಾವತಿ ನಿಲ್ದಾಣಕ್ಕೆ ತಲುಪಬೇಕಿದ್ದ ರೈಲು ರಾತ್ರಿ 8.55ಕ್ಕೆ ತಲುಪಿತ್ತು. ನಿಲ್ದಾಣದಿಂದ ಹೊರಟ ಸ್ವಲ್ಪ ದೂರದಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ರೈಲು ನಿಂತಿತು.

ರಾತ್ರಿ 11.22ಕ್ಕೆ ಭದ್ರಾವತಿಯಿಂದ ಹೊರಟ ಕುವೆಂಪು ಎಕ್ಸ್‌ಪ್ರೆಸ್‌ ರೈಲು ರಾತ್ರಿ 11.40ಕ್ಕೆ ಶಿವಮೊಗ್ಗ ನಿಲ್ದಾಣದ ತಲುಪಿತ್ತು. ರಾತ್ರಿ 11.55ಕ್ಕೆ ಶಿವಮೊಗ್ಗದಿಂದ ಹೊರಟು ಇಂದು ಬೆಳಗಿನ ಜಾವ ತಾಳಗುಪ್ಪ ನಿಲ್ದಾಣ ತಲುಪಿದೆ.

Night-Train-at-Shimoga-railway-station.

ಮತ್ತಷ್ಟು ರೈಲುಗಳಿಗೆ ತೊಂದರೆ

ಕುವೆಂಪು ಎಕ್ಸ್‌ಪ್ರೆಸ್‌ ರೈಲು ಮಾರ್ಗ ಮಧ್ಯದಲ್ಲೆ ನಿಂತಿದ್ದರಿಂದ ಈ ಮಾರ್ಗದ ಉಳಿದ ರೈಲುಗಳ ಸಂಚಾರಕ್ಕು ಭಾನುವಾರ ಸಮಸ್ಯೆಯಾಗಿತ್ತು.

ಇದನ್ನೂ ಓದಿ » ಸೂಜಿ ಗಾತ್ರದ ರಂಧ್ರದಲ್ಲಿ ಆಪರೇಷನ್‌ ಮಾಡಿದ ಶಿವಮೊಗ್ಗದ ಡಾಕ್ಟರ್‌ಗಳು, ಏನಿದು ಶಸ್ತ್ರಚಿಕಿತ್ಸೆ? ಹೇಗಿತ್ತು?

ಜನಶತಾಬ್ದಿ ರೈಲು ತರೀಕೆರೆ – ಭದ್ರಾವತಿ ಮಾರ್ಗ ಮಧ್ಯೆ ನಿಲ್ಲಿಸಲಾಗಿತ್ತು. ರಾತ್ರಿ 8.59ಕ್ಕೆ ಭದ್ರಾವತಿ ತಲುಪಬೇಕಿದ್ದ ರೈಲು ರಾತ್ರಿ 10.20ಕ್ಕೆ ತಲುಪಿತ್ತು. ರಾತ್ರಿ 10.45ಕ್ಕೆ ಶಿವಮೊಗ್ಗ ತಲುಪಿದೆ.

ತುಮಕೂರು – ಶಿವಮೊಗ್ಗ ಎಕ್ಸ್‌ಪ್ರೆಸ್‌ ರೈಲು (ಸಂಖ್ಯೆ 16567) 18 ನಿಮಿಷ ವಿಳಂಬವಾಗಿದೆ.

https://chat.whatsapp.com/JPJ0lTQsTKf365Fqu6Q7cd

ಯಶವಂತಪುರ ಎಕ್ಸ್‌ಪ್ರೆಸ್‌ ರೈಲು (ಸಂಖ್ಯೆ 16582) ರೈಲು ರಾತ್ರಿ 11.55ಕ್ಕೆ ಹೊರಡಬೇಕಿತ್ತು. ಆದರೆ ರಾತ್ರಿ 12.16ಕ್ಕೆ ಹೊರಟಿದೆ. ಮಾರ್ಗ ಮಧ್ಯದಲ್ಲಿ ಸಮಯ ಹೊಂದಿಸಿಕೊಂಡು ನಿಗದಿತ ಸಮಯಕ್ಕಿಂತಲು ಮುಂಚೆ ಯಶವಂತಪುರ ತಲುಪಿದೆ.

ತಾಳಗುಪ್ಪ – ಮೈಸೂರು ಎಕ್ಸ್‌ಪ್ರೆಸ್‌ (ಸಂಖ್ಯೆ 16228) ರೈಲು ಸಂಚಾರಕ್ಕೆ ಯಾವುದೆ ಅಡಚಣೆ ಆಗಿಲ್ಲ.

shimoga-to-bangalore-jan-shatabdi-train-railway.webp

ಪ್ರಯಾಣಿಕರ ಪರದಾಟ

ರೈಲುಗಳು ಮಾರ್ಗ ಮಧ್ಯದಲ್ಲಿ ನಿಂತಿದ್ದರಿಂದ ನೂರಾರು ಪ್ರಯಾಣಿಕರು ಸಮಸ್ಯೆಗೆ ಸಿಲುಕಿದ್ದರು. ಕೆಲವು ಪ್ರಯಾಣಿಕರು ರೈಲು ಇಳಿದು ಬಸ್‌ಗಳ ಮೂಲಕ ಊರು, ಮನೆ ತಲುಪಿದರು. ಬಹುತೇಕ ಪ್ರಯಾಣಿಕರು ರೈಲಿನಲ್ಲಿಯೇ ಸಂಚಾರ ಮುಂದುವರೆಸಿದರು. ತಡರಾತ್ರಿ ಶಿವಮೊಗ್ಗ ತಲುಪಿ ತಮ್ಮೂರು, ಮನೆಗಳಿಗೆ ತಲುಪಲು ಪ್ರಯಾಣಿಕರು ಪರದಾಡುವಂತಾಯಿತು.

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಜಾಹೀರಾತಿನ ಮೇಲೆ ಕ್ಲಿಕ್‌ ಮಾಡಿ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : June 23, 2025

ಅತ್ತೆ ಮನೆಯಿಂದ ಶಿವಮೊಗ್ಗದ ಮನೆಗೆ ಮರಳಿದ ವ್ಯಕ್ತಿಗೆ ಬಿಗ್‌ ಶಾಕ್‌, ಆಗಿದ್ದೇನು?

ಅತ್ತೆ ಮನೆಯಿಂದ ಶಿವಮೊಗ್ಗದ ಮನೆಗೆ ಮರಳಿದ ವ್ಯಕ್ತಿಗೆ ಬಿಗ್‌ ಶಾಕ್‌, ಆಗಿದ್ದೇನು?

ಇವತ್ತೂ ಮಳೆ ಮುನ್ಸೂಚನೆ, ಎಲ್ಲೆಲ್ಲಿ ಎಷ್ಟಿರಲಿದೆ ತಾಪಮಾನ? ಶಿವಮೊಗ್ಗದ ಹವಾಮಾನ ವರದಿ

ಇವತ್ತೂ ಮಳೆ ಮುನ್ಸೂಚನೆ, ಎಲ್ಲೆಲ್ಲಿ ಎಷ್ಟಿರಲಿದೆ ತಾಪಮಾನ? ಶಿವಮೊಗ್ಗದ ಹವಾಮಾನ ವರದಿ

ಇವತ್ತು ಬ್ರಹ್ಮ ಮುಹೂರ್ತ ಯಾವಾಗಿದೆ? ಯಮಗಂಡ ಕಾಲ ಎಷ್ಟೊತ್ತಿಗೆ? ಇಂದಿನ ಪಂಚಾಂಗ

ಇವತ್ತು ಬ್ರಹ್ಮ ಮುಹೂರ್ತ ಯಾವಾಗಿದೆ? ಯಮಗಂಡ ಕಾಲ ಎಷ್ಟೊತ್ತಿಗೆ? ಇಂದಿನ ಪಂಚಾಂಗ

ದುರಸ್ತಿ ವೇಳೆ ಲೈನ್‌ ಮ್ಯಾನ್‌ಗೆ ಕರೆಂಟ್‌ ಶಾಕ್‌, ಸ್ಥಳದಲ್ಲೆ ಸಾವು

ದುರಸ್ತಿ ವೇಳೆ ಲೈನ್‌ ಮ್ಯಾನ್‌ಗೆ ಕರೆಂಟ್‌ ಶಾಕ್‌, ಸ್ಥಳದಲ್ಲೆ ಸಾವು

ಶಿವಮೊಗ್ಗದ ವಾಹನ ಸವಾರರೆ ಎಚ್ಚರ, ಪೊಲೀಸ್‌ ಇಲಾಖೆಯಿಂದ ಮಹತ್ವದ ಪ್ರಕಟಣೆ, ಏನದು?

ಶಿವಮೊಗ್ಗದ ವಾಹನ ಸವಾರರೆ ಎಚ್ಚರ, ಪೊಲೀಸ್‌ ಇಲಾಖೆಯಿಂದ ಮಹತ್ವದ ಪ್ರಕಟಣೆ, ಏನದು?

ಉಪನ್ಯಾಸಕ ಸುರೇಶ್‌ ನಿಗೂಢ ಸಾವು ಕೇಸ್‌, ಶಿವಮೊಗ್ಗ SP ಫಸ್ಟ್‌ ರಿಯಾಕ್ಷನ್‌, ಏನಂದ್ರು?

ಉಪನ್ಯಾಸಕ ಸುರೇಶ್‌ ನಿಗೂಢ ಸಾವು ಕೇಸ್‌, ಶಿವಮೊಗ್ಗ SP ಫಸ್ಟ್‌ ರಿಯಾಕ್ಷನ್‌, ಏನಂದ್ರು?

ಶಿವಮೊಗ್ಗದ ಮೈಲಾರೇಶ್ವರ ದೇವಸ್ಥಾನದಲ್ಲಿ ನಾಗದರ್ಶನ, ದೊಡ್ಡ ಸಂಖ್ಯೆಯ ಭಕ್ತರು ಭಾಗಿ

ಶಿವಮೊಗ್ಗದ ಮೈಲಾರೇಶ್ವರ ದೇವಸ್ಥಾನದಲ್ಲಿ ನಾಗದರ್ಶನ, ದೊಡ್ಡ ಸಂಖ್ಯೆಯ ಭಕ್ತರು ಭಾಗಿ

ಟಾಟಾ ಏಸ್‌, ಆಟೋ ಡಿಕ್ಕಿ, ಮಗು ಸೇರಿ ಹಲವರಿಗೆ ಗಾಯ

ಟಾಟಾ ಏಸ್‌, ಆಟೋ ಡಿಕ್ಕಿ, ಮಗು ಸೇರಿ ಹಲವರಿಗೆ ಗಾಯ

ಮೀನು ಮಾರುಕಟ್ಟೆ ಬಳಿ ಕಿರಿಕ್‌, ಕಾರಿನ ಬೀಗದಿಂದ ವ್ಯಕ್ತಿಯ ಕಣ್ಣಿಗೆ ಹೊಡೆದು ಜೀವ ಬೆದರಿಕೆ, ಕಾರಣವೇನು?

ಮೀನು ಮಾರುಕಟ್ಟೆ ಬಳಿ ಕಿರಿಕ್‌, ಕಾರಿನ ಬೀಗದಿಂದ ವ್ಯಕ್ತಿಯ ಕಣ್ಣಿಗೆ ಹೊಡೆದು ಜೀವ ಬೆದರಿಕೆ, ಕಾರಣವೇನು?

Leave a Comment