ಭದ್ರಾವತಿ: ಇಂಜಿನ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿ ಕುವೆಂಪು ಎಕ್ಸ್‌ಪ್ರೆಸ್ ರೈಲು (Train) ಮಾರ್ಗ ಮಧ್ಯದಲ್ಲೇ ನಿಂತಿದ್ದರಿಂದ ಭಾನುವಾರ ಶಿವಮೊಗ್ಗಕ್ಕೆ ಬರಬೇಕಿದ್ದ ಮತ್ತು ಶಿವಮೊಗ್ಗದಿಂದ ಹೊರಡಬೇಕಿದ್ದ ರೈಲುಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು. ಇದರಿಂದ ನೂರಾರು ಪ್ರಯಾಣಿಕರಿಗೆ ಅನಾನುಕೂಲವಾಯಿತು.
ಮೈಸೂರು – ತಾಳಗುಪ್ಪ ಕುವೆಂಪು ಎಕ್ಸ್‌ಪ್ರೆಸ್ ರೈಲಿನಲ್ಲಿ (ಸಂಖ್ಯೆ 16222) ತಾಂತ್ರಿಕ ಸಮಸ್ಯೆ ಉಂಟಾಗಿತ್ತು. ಇದೇ ಕಾರಣಕ್ಕೆ ಮೈಸೂರು ಮಾರ್ಗದಿಂದಲೇ ತಡವಾಗಿ ಸಂಚರಿಸಿತ್ತು. ರಾತ್ರಿ 8 ಗಂಟೆಗೆ ಭದ್ರಾವತಿ ನಿಲ್ದಾಣಕ್ಕೆ ತಲುಪಬೇಕಿದ್ದ ರೈಲು ರಾತ್ರಿ 8.55ಕ್ಕೆ ತಲುಪಿತ್ತು. ನಿಲ್ದಾಣದಿಂದ ಹೊರಟ ಸ್ವಲ್ಪ ದೂರದಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ರೈಲು ನಿಂತಿತು.
ರಾತ್ರಿ 11.22ಕ್ಕೆ ಭದ್ರಾವತಿಯಿಂದ ಹೊರಟ ಕುವೆಂಪು ಎಕ್ಸ್‌ಪ್ರೆಸ್ ರೈಲು ರಾತ್ರಿ 11.40ಕ್ಕೆ ಶಿವಮೊಗ್ಗ ನಿಲ್ದಾಣದ ತಲುಪಿತ್ತು. ರಾತ್ರಿ 11.55ಕ್ಕೆ ಶಿವಮೊಗ್ಗದಿಂದ ಹೊರಟು ಇಂದು ಬೆಳಗಿನ ಜಾವ ತಾಳಗುಪ್ಪ ನಿಲ್ದಾಣ ತಲುಪಿದೆ.
ಮತ್ತಷ್ಟು ರೈಲುಗಳಿಗೆ ತೊಂದರೆ
ಕುವೆಂಪು ಎಕ್ಸ್‌ಪ್ರೆಸ್ ರೈಲು ಮಾರ್ಗ ಮಧ್ಯದಲ್ಲೆ ನಿಂತಿದ್ದರಿಂದ ಈ ಮಾರ್ಗದ ಉಳಿದ ರೈಲುಗಳ ಸಂಚಾರಕ್ಕು ಭಾನುವಾರ ಸಮಸ್ಯೆಯಾಗಿತ್ತು.
ಇದನ್ನೂ ಓದಿ » ಸೂಜಿ ಗಾತ್ರದ ರಂಧ್ರದಲ್ಲಿ ಆಪರೇಷನ್ ಮಾಡಿದ ಶಿವಮೊಗ್ಗದ ಡಾಕ್ಟರ್‌ಗಳು, ಏನಿದು ಶಸ್ತ್ರಚಿಕಿತ್ಸೆ? ಹೇಗಿತ್ತು?
ಜನಶತಾಬ್ದಿ ರೈಲು ತರೀಕೆರೆ – ಭದ್ರಾವತಿ ಮಾರ್ಗ ಮಧ್ಯೆ ನಿಲ್ಲಿಸಲಾಗಿತ್ತು. ರಾತ್ರಿ 8.59ಕ್ಕೆ ಭದ್ರಾವತಿ ತಲುಪಬೇಕಿದ್ದ ರೈಲು ರಾತ್ರಿ 10.20ಕ್ಕೆ ತಲುಪಿತ್ತು. ರಾತ್ರಿ 10.45ಕ್ಕೆ ಶಿವಮೊಗ್ಗ ತಲುಪಿದೆ.
ತುಮಕೂರು – ಶಿವಮೊಗ್ಗ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 16567) 18 ನಿಮಿಷ ವಿಳಂಬವಾಗಿದೆ.
ಯಶವಂತಪುರ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 16582) ರೈಲು ರಾತ್ರಿ 11.55ಕ್ಕೆ ಹೊರಡಬೇಕಿತ್ತು. ಆದರೆ ರಾತ್ರಿ 12.16ಕ್ಕೆ ಹೊರಟಿದೆ. ಮಾರ್ಗ ಮಧ್ಯದಲ್ಲಿ ಸಮಯ ಹೊಂದಿಸಿಕೊಂಡು ನಿಗದಿತ ಸಮಯಕ್ಕಿಂತಲು ಮುಂಚೆ ಯಶವಂತಪುರ ತಲುಪಿದೆ.
ತಾಳಗುಪ್ಪ – ಮೈಸೂರು ಎಕ್ಸ್‌ಪ್ರೆಸ್ (ಸಂಖ್ಯೆ 16228) ರೈಲು ಸಂಚಾರಕ್ಕೆ ಯಾವುದೆ ಅಡಚಣೆ ಆಗಿಲ್ಲ.
ಪ್ರಯಾಣಿಕರ ಪರದಾಟ
ರೈಲುಗಳು ಮಾರ್ಗ ಮಧ್ಯದಲ್ಲಿ ನಿಂತಿದ್ದರಿಂದ ನೂರಾರು ಪ್ರಯಾಣಿಕರು ಸಮಸ್ಯೆಗೆ ಸಿಲುಕಿದ್ದರು. ಕೆಲವು ಪ್ರಯಾಣಿಕರು ರೈಲು ಇಳಿದು ಬಸ್‌ಗಳ ಮೂಲಕ ಊರು, ಮನೆ ತಲುಪಿದರು. ಬಹುತೇಕ ಪ್ರಯಾಣಿಕರು ರೈಲಿನಲ್ಲಿಯೇ ಸಂಚಾರ ಮುಂದುವರೆಸಿದರು. ತಡರಾತ್ರಿ ಶಿವಮೊಗ್ಗ ತಲುಪಿ ತಮ್ಮೂರು, ಮನೆಗಳಿಗೆ ತಲುಪಲು ಪ್ರಯಾಣಿಕರು ಪರದಾಡುವಂತಾಯಿತು.

ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200