ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಹೊಳೆಹೊನ್ನೂರು: ಮೈಗಂಟಿರುವ ದೆವ್ವ ಬಿಡಿಸುವುದಾಗಿ (Exorcism) ಹಿಂಸೆ ನೀಡಿದ್ದರಿಂದ ಮಹಿಳೆಯೊಬ್ಬರು ಉಸಿರು ಚೆಲ್ಲಿದ್ದಾರೆ. ಹೊಳೆಹೊನ್ನೂರು ಸಮೀಪದ ಜಂಬರಘಟ್ಟ ಗ್ರಾಮದಲ್ಲಿ ಈ ವಿಚಿತ್ರ ಘಟನೆ ನಡೆದಿದೆ.
ಗೀತಮ್ಮ (55) ಮೃತ ದುರ್ದೈವಿ. ಅದೇ ಗ್ರಾಮದ ಆಶಾ (45) ಎಂಬಾಕೆ ದೆವ್ವ ಬಿಡಿಸುವುದಾಗಿ ಹೇಳಿ ಕೋಲಿನಿಂದ ಹೊಡೆದಿದ್ದಾಳೆ.
ದೆವ್ವ ಬಿಡಿಸಲು ಬಂದ ‘ದೇವರು’
ಜಂಬರಘಟ್ಟದ ಗೀತಮ್ಮ ಕೆಲವು ದಿನದಿಂದ ಅನಾರೋಗ್ಯಕ್ಕೀಡಾಗಿದ್ದರು. ದೆವ್ವ ಮೆಟ್ಟಿಕೊಂಡಿರುವ ಶಂಕೆ ಮೇಲೆ ಅದೇ ಗ್ರಾಮದ ಆಶಾ ಎಂಬಾಕೆಯನ್ನು ಕರೆಯಿಸಲಾಗಿತ್ತು. ಆಶಾಳ ಮೈಮೇಲೆ ದೇವರು ಬರುವ ಹಿನ್ನೆಲೆ ಆಕೆಯ ಬಳಿ ಗೀತಮ್ಮಳನ್ನು ತೋರಿಸಲಾಗಿತ್ತು.
ದೆವ್ವ ಬಿಡಿಸುವ ವಿಡಿಯೋ ವೈರಲ್
ದೆವ್ವ ಬಿಡಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗೀತಮ್ಮ ನೆಲದ ಮೇಲೆ ಕುಳಿತಿದ್ದು, ಪಕ್ಕದಲ್ಲಿ ನಿಂತ ಮಹಿಳೆಯೊಬ್ಬಳು ದೊಣ್ಣೆಯೊಂದರಿಂದ ನಿರಂತರವಾಗಿ ಹೊಡೆಯುತ್ತಾಳೆ. ನಿತ್ರಾಣಗೊಂಡಿದ್ದ ಗೀತಮ್ಮ ನೀರು ಬೇಕು ಎಂದು ಅಂಗಲಾಚಿದರು, ಪಕ್ಕದಲ್ಲಿ ನಿಂತಿದ್ದ ಮಹಿಳೆ ನೀರು ಕೊಡಲು ನಿರಾಕರಿಸುತ್ತಾಳೆ. ಒಂದು ನಿಮಿಷದ ವಿಡಿಯೋದಲ್ಲಿ ಗೀತಮ್ಮಳ ತಲೆ, ಮೈ-ಕೈಗೆ ದೊಣ್ಣೆಯಿಂದ ಹೊಡೆಯುವುದು ದಾಖಲಾಗಿದೆ.

ಹೊಡೆತ ತಿಂದು ಕೊನೆಯುಸಿರೆಳೆದ ಗೀತಮ್ಮ
ಕೋಲಿನಿಂದ ನಿರಂತರ ಹೊಡೆತ ತಿಂದ ಗೀತಮ್ಮ ಕೊನೆಯುಸಿರೆಳೆದಿದ್ದಾರೆ. ನಡುರಾತ್ರಿಯವರೆಗೆ ಗೀತಮ್ಮಳಿಗೆ ಹಿಂಸೆ ನೀಡಲಾಗಿದೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ » ಸಿಗಂದೂರು ಸೇತುವೆ, ಎರಡನೇ ಹಂತದ ಲೋಡ್ ಟೆಸ್ಟ್ ಶುರು
ಘಟನೆ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

LATEST NEWS
- ಸರ್ವೆಗೆ ಹೋದಾಗ ಇಂಜಿನಿಯರ್, ಸರ್ವೇಯರ್ ಮೇಲೆ ಕೋಲು, ಕಲ್ಲುಗಳಿಂದ ದಾಳಿ

- ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?

- ಶಿವಮೊಗ್ಗದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ, ಏನೇನೆಲ್ಲ ಇರುತ್ತೆ? ಎಷ್ಟು ವಿದ್ಯಾರ್ಥಿಗಳಿಗೆ ಅವಕಾಶವಿದೆ?

- ಮನೆಗೆ ತಾಯಿ ಬಂದಾಗ ತೆರೆದಿತ್ತು ಹಿಂಬಾಗಿಲು; ಮಗಳು ಬಂದಾಗ ಹೊರಬಿತ್ತು ಶಾಕಿಂಗ್ ವಿಚಾರ

- ಭಾರಿ ಮಳೆಗೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಾನಿ, ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಫಟಾಫಟ್ ಅಪ್ಡೇಟ್

About The Editor
ನಿತಿನ್ ಆರ್.ಕೈದೊಟ್ಲು















