ಶಿವಮೊಗ್ಗ ಲೈವ್
ಶಿವಮೊಗ್ಗ: ಲೋಕಕಲ್ಯಾಣ ಮತ್ತು ನಾಡಿನ ಜನರ ಉತ್ತಮ ಆರೋಗ್ಯಕ್ಕಾಗಿ ಶಿವಮೊಗ್ಗದ ಅರ್ಚಕರೊಬ್ಬರು ಮಂತ್ರಾಲಯಕ್ಕೆ (Mantralaya) ಬರಿಗಾಲಲ್ಲಿ ನಡಿಗೆ ಆರಂಭಿಸಿದ್ದಾರೆ. ನಗರದ ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದಿಂದ ಪಾದಯಾತ್ರೆ ಶುರು ಮಾಡಿದ್ದಾರೆ.
ಅರ್ಚಕ ಪವನ್ ಕುಮಾರ್ ಭಟ್ ಅವರು ಶಿವಮೊಗ್ಗದಿಂದ ಮಂತ್ರಾಲಯಕ್ಕೆ ಪಾದಯಾತ್ರೆ ಮಾಡುತ್ತಿದ್ದಾರೆ. 13 ದಿನ ಹಗಲು ಮತ್ತು ರಾತ್ರಿ ನಿರಂತರವಾಗಿ ನಡೆಯಲಿದ್ದಾರೆ.

ಇದು ಎರಡನೇ ವರ್ಷದ ಪಾದಯಾತ್ರೆ. ಸಮಸ್ತ ನಾಡಿನ ಜನತೆಗೆ ಉತ್ತಮ ಆರೋಗ್ಯಕ್ಕೆ ಪ್ರಾರ್ಥಿಸಿಕೊಂಡು ಈ ಕಾರ್ಯ ಕೈಗೊಂಡಿದ್ದೇನೆ. 11 ರಿಂದ 13 ದಿನ ನಿರಂತರ ನಡೆಯಲಿದ್ದೇನೆ.ಪವನ್ ಕುಮಾರ್ ಭಟ್, ಅರ್ಚಕ
ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ದರ್ಶನ ಪಡೆದು ಪವನ್ ಕುಮಾರ್ ಭಟ್ ಅವರು ರೈಲಿನಲ್ಲಿ ಪ್ರಯಾಗ್‌ರಾಜ್ ತಲುಪಲಿದ್ದಾರೆ.
ಇದನ್ನೂ ಓದಿ » ರವೀಂದ್ರನಗರ ಗಣಪತಿ ದೇಗುಲದ ಮುಂಭಾಗ ನಾಗದೇವರ ಪ್ರತಿಷ್ಠಾಪನೆ

