ಫೋನ್‌ ಪೇಯಲ್ಲಿ ಕರೆಂಟ್‌ ಬಿಲ್‌ ಕಟ್ಟಿದ ಶಿವಮೊಗ್ಗದ ವಕ್ತಿಗೆ ಸ್ವಲ್ಪ ಹೊತ್ತಿಗೆ ಕಾದಿತ್ತು ಶಾಕ್

ಶಿವಮೊಗ್ಗ: ಮೊಬೈಲ್‌ ನಂಬರನ್ನೇ ಹ್ಯಾಕ್‌ ಮಾಡಿ ಗೂಗಲ್‌ ಪೇ, ಫೋನ್‌ ಪೇ (Phone Pay) ಮೂಲಕ ಸಾವಿರಾರು ರೂಪಾಯಿ ಹಣ ವರ್ಗಾಯಿಸಿಕೊಂಡು ವಂಚಿಸಲಾಗಿದೆ. ಶಿವಮೊಗ್ಗದ ವ್ಯಕ್ತಿಯೊಬ್ಬರು (ಹೆಸರು ಗೌಪ್ಯ) ಈ ಸಂಬಂಧ ಜಯನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗದ ವ್ಯಕ್ತಿ ಕಳೆದ ತಿಂಗಳು ವಿದ್ಯುತ್‌ ಬಿಲ್‌ ₹754‌ ಅನ್ನು ಫೋನ್‌ ಪೇ ಮೂಲಕ ಪಾವತಿಸಿದ್ದರು. ಅವರ ಬ್ಯಾಂಕ್‌ ಖಾತೆಯಲ್ಲಿ ₹94,624 ಬ್ಯಾಲೆನ್ಸ್‌ ಇರುವುದಾಗಿ ತಿಳಿಸಲಾಗಿತ್ತು. ಬೇರೊಂದು ಕಡೆ ಫೋನ್‌ ಪೇ ಸ್ಕ್ಯಾನರ್‌ ಬಳಸುವಾಗ ಅದು ಸರಿಯಾಗಿ ಕೆಲಸ ಮಾಡಲಿಲ್ಲ. ಕೆಲವು ದಿನ ಮೊಬೈಲ್‌ ನೆಟ್‌ವರ್ಕ್‌ ಕೂಡ ಸಮಸ್ಯೆಯಾಗಿತ್ತು. ಹಾಗಾಗಿ ಫೋನ್‌ ಪೇ ಕೂಡ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ.‌

ಇದನ್ನೂ ಓದಿ » ಸಿಗಂದೂರು ಸೇತುವೆ, ರಾಜ್ಯದ ಸಚಿವರು, ಶಾಸಕರು ಕಾರ್ಯಕ್ರಮದಿಂದ ದೂರ, ಲೆಟರ್‌ ವಾರ್‌ ಆರಂಭ

ಹಣ ಬಿಡಿಸಿಕೊಳ್ಳಲು ಶಿವಮೊಗ್ಗದ ವ್ಯಕ್ತಿ ಬ್ಯಾಂಕ್‌ಗೆ ತೆರಳಿದ್ದರು. ಆಗ ಅವರ ಬ್ಯಾಂಕ್‌ ಖಾತೆಯಲ್ಲಿ ಕೇವಲ ₹4,025 ಇತ್ತು. ವಿಚಲಿತರಾದ ವ್ಯಕ್ತಿ ಬ್ಯಾಂಕ್‌ ಖಾತೆಯ ಸ್ಟೇಟ್‌ಮೆಂಟ್‌ ತೆಗೆಸಿದ್ದಾರೆ. ಆಗ ಅವರ ಖಾತೆಯಿಂದ ಹಲವು ಭಾರಿ ಯುಪಿಐ ಮೂಲಕ ಒಟ್ಟು ₹90,599 ವರ್ಗಾವಣೆ ಆಗಿರುವುದು ಗೊತ್ತಾಗಿದೆ.

140823-Jayanagara-Police-Station

ಮೊಬೈಲ್‌ ನಂಬರ್‌ ಹ್ಯಾಕ್‌ ಮಾಡಿ, ಯುಪಿಐ ಮೂಲಕ ಹಣ ಕಳ್ಳತನ ಮಾಡಲಾಗಿದೆ ಎಂದು ಆರೋಪಿಸಿ ಶಿವಮೊಗ್ಗದ ವ್ಯಕ್ತಿ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು ಜಯನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Comment