ಕೋಟೆಗಂಗೂರು ದೇಗುಲದಲ್ಲಿ ಹುಂಡಿ ಒಡೆದು ಟವೆಲ್‌ನಲ್ಲಿ ಕಾಣಿಕೆ ಹಣ ಸುತ್ತಿಕೊಂಡು ಹೋದ ಖದೀಮರು

ಶಿವಮೊಗ್ಗ: ದೇವಸ್ಥಾನದ (Temple) ಬಾಗಿಲಿನ ಬೀಗ ಮುರಿದು ಹುಂಡಿ ಒಡೆದು ಕಾಣಿಕೆ ಹಣ ಕಳ್ಳತನ ಮಾಡಲಾಗಿದೆ. ಹುಂಡಿ ಒಡೆಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. (ಈ ಸುದ್ದಿಯನ್ನು ಇನ್ನು 48 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಶಿವಮೊಗ್ಗ ತಾಲೂಕು ಕೋಟೆಗಂಗೂರಿನ ಅಜ್ಜಪ್ಪಸ್ವಾಮಿ ದೇವಸ್ಥಾನದಲ್ಲಿ ಜುಲೈ 12ರ ರಾತ್ರಿ ಕಳ್ಳತನವಾಗಿದೆ. ದೇವಸ್ಥಾನದ ಒಳಗೆ ನುಗ್ಗಿದ ಕಳ್ಳರು ಹುಂಡಿ ಒಡೆದು ಸುಮಾರು ₹60,000 ಕಾಣಿಕೆ ಹಣ ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

Hundi-Theft-at-temple.webp

ದೂರಿನಲ್ಲಿ ಏನಿದೆ?

ಜು.12ರ ರಾತ್ರಿ 7 ಗಂಟೆಗೆ ಅರ್ಚಕ ಬಸವರಾಜಪ್ಪ ಪೂಜೆ ಮುಗಿಸಿ ದೇವಸ್ಥಾನದ ಬೀಗ ಹಾಕಿಕೊಂಡು ಹೋಗಿದ್ದರು. ಜು.13ರಂದು ಬೆಳಗ್ಗೆ ದೇವಸ್ಥಾನದ ಸ್ವಚ್ಛತಾ ಕಾರ್ಯಕ್ಕೆ ಜಯಣ್ಣ ಎಂಬುವವರು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

Hundi-Theft-at-temple.webp

ಸಿಸಿಟಿವಿಯಲ್ಲಿ ಕೃತ್ಯ ಸೆರೆ

ದೇವಸ್ಥಾನದಲ್ಲಿ ಹುಂಡಿ ಒಡೆದು ಕಳ್ಳತನ ಮಾಡಿದ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರೇನ್ ಕೋಟ್ ಧರಿಸಿ ದೇವಸ್ಥಾನದ ಒಳಗೆ ನುಗ್ಗಿದ ಮೂವರು ಕಳ್ಳರು ಹುಂಡಿಯನ್ನು ಒಡೆದಿದ್ದಾರೆ. ಟವಲ್‌ನಲ್ಲಿ ಕಾಣಿಕೆ ಹಣನ್ನು ಸೇರಿಸಿ ಕೊಂಡೊಯ್ದಿದ್ದಾರೆ.

ಇದನ್ನೂ ಓದಿ » ಮೇಗರವಳ್ಳಿಯಲ್ಲಿ ಮಂಗಳೂರು ಎಕ್ಸ್‌ಪ್ರೆಸ್‌ ಬಸ್ಸು, ಗೂಡ್ಸ್‌ ವಾಹನ ಮುಖಾಮುಖಿ ಡಿಕ್ಕಿ

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

ಕೃತ್ಯ ಸಂಬಂಧ ದೇವಸ್ಥಾನದ ಸಹ ಕಾರ್ಯದರ್ಶಿ ಜಗದೀಶ್ ದೂರು ನೀಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment