ಸಿಗಂದೂರು ಲಾಂಚ್‌ನತ್ತ ಜನರೆ ಬರುತ್ತಿಲ್ಲ, 56 ವರ್ಷದ ಸೇವೆ ನಿಂತೇ ಹೋಗುತ್ತಾ? ಇಲ್ಲಿದೆ ಲಾಂಚ್‌ ಇತಿಹಾಸ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಸಾಗರ: ಸಿಗಂದೂರ ಸೇತುವೆ (Sigandur Bridge) ಲೋಕಾರ್ಪಣೆ ಆಗುತ್ತಿದ್ದಂತೆ ಅಂಬಾರಗೋಡ್ಲು – ಕಳಸವಳ್ಳಿ ಮಧ್ಯೆ ಲಾಂಚ್‌ ಸೇವೆ ಸ್ಥಗಿತಗೊಂಡಿದೆ. ಪ್ರವಾಸಿಗರು, ಸಿಗಂದೂರು ದೇವಸ್ಥಾನಕ್ಕೆ ಅಗಮಿಸುವ ಭಕ್ತರು, ಸ್ಥಳೀಯರು ಈಗ ಸೇತುವೆ ಮೇಲೆ ಸಂಚಾರ ಆರಂಭಿಸಿದ್ದಾರೆ. ಈ ಭಾಗದ ಪ್ರಮುಖ ಆಕರ್ಷಣೆಯಾಗಿದ್ದ ಲಾಂಚ್‌ಗಳು (Sigandur Launch) ಮೂಲೆಗುಂಪಾಗಿದ್ದು, ನೂತನ ಸೇತುವೆ ಆ ಜಾಗ ಆಕ್ರಮಿಸಿಕೊಂಡಿದೆ.

ಅಂಬಾರಗೋಡ್ಲು – ಕಳಸವಳ್ಳಿ ಮಧ್ಯೆ ಶರಾವತಿ ನದಿ ದಾಟಲು ಮೂರು ಲಾಂಚ್‌ಗಳಿವೆ. ಸೇತುವೆ ಮೇಲೆ ವಾಹನ ಸಂಚಾರ ಆರಂಭವಾಗುತ್ತಿದ್ದಂತೆ ಲಾಂಚ್‌ಗಳಿಗೆ ಜನ ಬರುವುದೇ ನಿಂತು ಹೋಗಿದೆ. ಹಾಗಾಗಿ ಮೂರು ಲಾಂಚ್‌ಗಳು ಹೊಳೆಬಾಗಿಲಲ್ಲಿ ಕೆಲಸವಿಲ್ಲದೆ ನಿಂತಿವೆ.

Sigandur-Launch-in-sharavathi-back-water.
File Photo

ದಿನಗೂಲಿ ನೌಕರರಿಗೆ ಅಸ್ಥಿರತೆ

ಲಾಂಚ್‌ಗಳಲ್ಲಿ ಮೂವರು ಕಾಯಂ ನೌಕರರು, 12 ದಿನಗೂಲಿ ನೌಕರರು ಕೆಲಸ ಮಾಡುತ್ತಿದ್ದಾರೆ. ಈ ಪೈಕಿ ಓರ್ವ ಕಾಯಂ ನೌಕರ ಇದೇ ತಿಂಗಳು ನಿವೃತ್ತರಾಗಲಿದ್ದಾರೆ. ಮತ್ತೊಬ್ಬರು ಇನ್ನು 10 ತಿಂಗಳಲ್ಲಿ ನಿವೃತ್ತರಾಗಲಿದ್ದಾರೆ. ಉಳಿದ ಒಬ್ಬರನ್ನು ಶರಾವತಿ ಹಿನ್ನೀರಲ್ಲೇ ಇರುವ ಇತರೆ ಲಾಂಚ್‌ಗಳಿಗೆ ವರ್ಗಾಯಿಸಬಹುದಾಗಿದೆ. ಆದರೆ 12 ದಿನಗೂಲಿ ನೌಕರರಿಗೆ ಮುಂದೇನು ಎಂಬುದು ಗೊತ್ತಿಲ್ಲ.

[su_quote cite=”ಅಶೋಕ್‌, ಲಾಂಚ್‌ ಚಾಲಕ“]22 ವರ್ಷದಿಂದ ಲಾಂಚ್‌ ಚಾಲನೆ ಮಾಡುತ್ತಿದ್ದೇನೆ. ಸರ್ಕಾರ ಮುಂದೇನು ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಆದರೆ ಇಲ್ಲಿ ಸೇತುವೆ ಆಗಿರುವುದು ನಮಗು ಖುಷಿ ಇದೆ.[/su_quote]

Sigandur-Launch-Ambaragodlu-Kalasavalli-Sharavathi-River

ಇದನ್ನೂ ಓದಿ » ಸಿಗಂದೂರು ಸೇತುವೆ, ಹಗಲು, ರಾತ್ರಿ ಕೆಲಸ ಮಾಡಿದ ಕಾರ್ಮಿಕರಿಗೆ ಸನ್ಮಾನ

[su_note note_color=”#f1f1f1″ text_color=”#000000″ radius=”0″]

56 ವರ್ಷದ ಲಾಂಚ್‌ ಸೇವೆ

[su_divider top=”no” style=”dotted” divider_color=”#f1f1f1″ link_color=”#000000″ margin=”10″]

#f1f1f1 - POINT 11946ರಲ್ಲಿ ಹಿರೇಭಾಸ್ಕರ ಜಲಾಶಯ ನಿರ್ಮಾಣವಾಯಿತು. ಆಗ ದ್ವಿಪದ ಜನರು ಸಾಗರಕ್ಕೆ ತೆರಳಲು ಸಣ್ಣ ದೋಣಿ, ಜಂಗಲ್‌ (ಎರಡು ದೋಣಿ ಸೇರಿಸಿ ಹಲಗೆ ಕಟ್ಟಿ ಮಾಡಿದ ಸಾಧನ) ಬಳಸುತ್ತಿದ್ದರು.

[su_divider top=”no” style=”dotted” divider_color=”#b8b8b8″ link_color=”#000000″ margin=”10″]

#f1f1f1 - POINT 2ಜನ, ಕೃಷಿ ಉತ್ಪನ್ನಗಳನ್ನು ಇದೇ ದೋಣಿ, ಜಂಗಲ್‌ಗಳ ಮೂಲಕ ಆಚೆ ದಡಕ್ಕೆ ರವಾನಿಸಲಾಗುತಿತ್ತು. ಇದರಲ್ಲಿ ನದಿ ದಾಟುವಾಗ ಅವಘಡಗಳು ಸಂಭವಿಸಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ.

[su_divider top=”no” style=”dotted” divider_color=”#b8b8b8″ link_color=”#000000″ margin=”10″]

#f1f1f1 - POINT 31964ರಲ್ಲಿ ಲಿಂಗನಮಕ್ಕಿ ಜಲಾಶಯ ನಿರ್ಮಾಣವಾಗುತ್ತಿದ್ದಂತೆ ಶರಾವತಿ ಹಿನ್ನೀರಿನ ಅಗಾಧತೆ ವಿಸ್ತರಣೆಯಾಯಿತು. ಹಾಗಾಗಿ ಜನರ ಓಡಾಟಕ್ಕೆ ಅನುಕೂಲವಾಗಲಿ ಎಂದು ಕರ್ನಾಟಕ ವಿದ್ಯುತ್‌ ನಿಗಮವು 1969ರಲ್ಲಿ ಪುಟ್ಟ ಬೋಟ್‌ ವ್ಯವಸ್ಥೆ ಮಾಡಿತು. ಅದರ ಬೆನ್ನಿಗೆ ಸಣ್ಣ ಲಾಂಚ್‌ ಸಂಚಾರ ಆರಂಭವಾಯಿತು.

sigandur launch old photo
ಫೋಟೊ ಕೃಪೆ : ಸುಕುಮಾರ್‌

[su_divider top=”no” style=”dotted” divider_color=”#b8b8b8″ link_color=”#000000″ margin=”10″]

#f1f1f1 - POINT 41976ರಲ್ಲಿ ಒಳನಾಡು ಮತ್ತು ಜಲಸಾರಿಗೆ ಇಲಾಖೆಗೆ ಲಾಂಚ್‌ಗಳ ನಿರ್ವಹಣೆ ಜವಾಬ್ದಾರಿ ವಹಿಸಲಾಯಿತು. 2012ರಲ್ಲಿ ಸರ್ಕಾರವು ಹೆಚ್ಚುವರಿಯಾಗಿ ಮತ್ತೊಂದು ಲಾಂಚ್‌ ವ್ಯವಸ್ಥೆ ಮಾಡಿತು.

[su_divider top=”no” style=”dotted” divider_color=”#b8b8b8″ link_color=”#000000″ margin=”10″]

#f1f1f1 - POINT 5ಮೊದಲಿಗೆ ಲಾಂಚ್‌ನಲ್ಲಿ ಓಡಾಟಕ್ಕೆ 10 ಪೈಸೆ ಟಿಕೆಟ್‌ ಇತ್ತು. ಈಗ ಲಾಂಚ್‌ನಲ್ಲಿ ಓಡಾಡಲು ₹10 ಪಡೆಯಲಾಗುತ್ತಿದೆ.[/su_note]

ಸಿನಿಮಾಗಳಲ್ಲು ಕಾಣಿಸಿತ್ತು ಲಾಂಚ್‌

ಸಿಗಂದೂರು ಲಾಂಚ್‌ಗಳು ಅನೇಕ ಸಿನಿಮಾಗಳಲ್ಲು ಕಾಣಿಸಿಕೊಂಡಿವೆ. ಹಲವು ದೊಡ್ಡ ಸ್ಟಾರ್‌ಗಳ ಸಿನಿಮಾಗಳಲ್ಲಿ ಒಂದೊಂದು ದೃಶ್ಯದಲ್ಲಿ ಲಾಂಚ್‌ಗಳು ಕಾಣಿಸಿಕೊಂಡಿವೆ. ಇನ್ನು, ಹಲವರು ತಾರೆಯರು, ಮುಖ್ಯಮಂತ್ರಿಗಳು, ಸಚಿವರು, ಸಂಸದರು ಸೇರಿ ಹಲವು ಪ್ರಮುಖರು ಈ ಲಾಂಚ್‌ಗಳಲ್ಲಿ ಸಂಚರಿಸಿ ಖುಷಿ ಪಟ್ಟಿದ್ದರು.

Sigandur-Launch-in-Sharavathi-River

ಇದನ್ನೂ ಓದಿ » ಐತಿಹಾಸಿಕ ಸಿಗಂದೂರು ಸೇತುವೆ ಲೋಕಾರ್ಪಣೆ, ಕೇಬಲ್‌ ಬ್ರಿಡ್ಜ್‌ ವೈಭವಕ್ಕೆ ಮನಸೋತ ಕೇಂದ್ರ ಸಚಿವ

ಅನಿಶ್ಚಿತತೆಯಲ್ಲಿ ಲಾಂಚ್‌ಗಳ ಸಿಬ್ಬಂದಿ

ಹೊಸ ನೀರು ಬಂದಾಗ ಹಳೆ ನೀರು ಕೊಚ್ಚಿ ಹೋಗುತ್ತದೆ ಎಂಬಂತಾಗಿದೆ ಸಿಗಂದೂರು ಲಾಂಚ್‌ಗಳ ಭವಿಷ್ಯ. ಲಾಂಚ್‌ ಸೇವೆ ಮುಂದುವರೆಯಲಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಪುನರುಚ್ಚರಿಸುತ್ತಿದ್ದಾರೆ. ಆದರೆ ಜನರೆ ಬಾರಿದ್ದರೆ ಲಾಂಚ್‌ ಸೇವೆ ಮುಂದುವರೆಯುವ ಸಾಧ್ಯತೆ ಇಲ್ಲ. ಹಾಗಾಗಿ ಇವುಗಳಲ್ಲಿ ತೇಲುವ ಹೊಟೇಲ್‌ ನಿರ್ಮಿಸಲಾಗುತ್ತದೆ ಎಂದು ಬೇಳೂರು ಗೋಪಾಲಕೃಷ್ಣ ತಿಳಿಸಿದ್ದಾರೆ.

sigandur launch

ಇದನ್ನೂ ಓದಿ » ಸಿಗಂದೂರು ಲಾಂಚ್‌ಗಳು ಇನ್ಮುಂದೆ ತೇಲುವ ಹೊಟೇಲ್, ಯೋಜನೆ ಮಾಹಿತಿ ನೀಡಿದ ಎಂಎಲ್‌ಎ

ಬೇಳೂರು ಗೋಪಾಲಕೃಷ್ಣ ಅವರ ಹೇಳಿಕೆ ಲಾಂಚ್‌ ಸಿಬ್ಬಂದಿಗೆ ಭರವಸೆ ಮೂಡಿಸಿದೆ. ಆದರೆ ಸರ್ಕಾರ ನಿರ್ಧಾರ ಕೈಗೊಳ್ಳುವವರೆಗೆ ಅನಿಶ್ಚಿತತೆ ಮುಂದುವರೆಯಲಿದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

[su_divider top=”no” style=”dotted” divider_color=”#ffffff” link_color=”#000000″ margin=”10″]

[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]

[su_divider top=”no” style=”dotted” divider_color=”#ffffff” link_color=”#000000″ margin=”10″]

[su_divider top=”no” style=”dotted” divider_color=”#ffffff” link_color=”#000000″ margin=”10″]

[su_divider top=”no” style=”dotted” divider_color=”#ffffff” link_color=”#000000″ margin=”10″]

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : July 17, 2025

ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

ಸರಕು ರೇಟ್‌ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್‌ 2026ರ ಅಡಿಕೆ ರೇಟ್‌

ಸರಕು ರೇಟ್‌ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್‌ 2026ರ ಅಡಿಕೆ ರೇಟ್‌

ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

ವಿದ್ಯಾನಗರದ ಆರ್ಮಿ ಕ್ಯಾಂಟೀನ್‌ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

ವಿದ್ಯಾನಗರದ ಆರ್ಮಿ ಕ್ಯಾಂಟೀನ್‌ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

ಕಾರ್ಗಲ್‌ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

ಕಾರ್ಗಲ್‌ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

ಹೊಂಬುಜದಲ್ಲಿ ವೈಭದ ರಥೋತ್ಸವ, ಹೇಗಿತ್ತು ಪೂಜೆ? ಎಲ್ಲೆಲ್ಲಿಂದ ಬಂದಿದ್ದರು ಭಕ್ತರು?

ಹೊಂಬುಜದಲ್ಲಿ ವೈಭದ ರಥೋತ್ಸವ, ಹೇಗಿತ್ತು ಪೂಜೆ? ಎಲ್ಲೆಲ್ಲಿಂದ ಬಂದಿದ್ದರು ಭಕ್ತರು?

ಸೋಮಿನಕೊಪ್ಪದ ಮನೆಯೊಂದರ ಹಿಂಬದಿಯ ಶೆಡ್‌ ಮೇಲೆ ಪೊಲೀಸರ ದಾಳಿ, ಒಬ್ಬ ಅರೆಸ್ಟ್‌

ಸೋಮಿನಕೊಪ್ಪದ ಮನೆಯೊಂದರ ಹಿಂಬದಿಯ ಶೆಡ್‌ ಮೇಲೆ ಪೊಲೀಸರ ದಾಳಿ, ಒಬ್ಬ ಅರೆಸ್ಟ್‌

ಮೆಗ್ಗಾನ್‌ ಆಸ್ಪತ್ರೆ ಆವರಣದಲ್ಲಿ ಮೆಡಿಕಲ್‌ ವಿದ್ಯಾರ್ಥಿನಿ ಮೇಲೆ ಹರಿದ ಟ್ಯಾಂಕರ್‌ ಲಾರಿ, ಇಲ್ಲಿದೆ ಡಿಟೇಲ್ಸ್‌

ಮೆಗ್ಗಾನ್‌ ಆಸ್ಪತ್ರೆ ಆವರಣದಲ್ಲಿ ಮೆಡಿಕಲ್‌ ವಿದ್ಯಾರ್ಥಿನಿ ಮೇಲೆ ಹರಿದ ಟ್ಯಾಂಕರ್‌ ಲಾರಿ, ಇಲ್ಲಿದೆ ಡಿಟೇಲ್ಸ್‌

ಶಿವಮೊಗ್ಗದಿಂದ ಮುಂಬೈ, ದೆಹಲಿಗೆ ನೇರ ವಿಮಾನಯಾನ, ಯಾವಾಗ? ಸಂಸತ್ತಿನಲ್ಲಿ ರಾಘವೇಂದ್ರ ಹೇಳಿದ್ದೇನು?

ಶಿವಮೊಗ್ಗದಿಂದ ಮುಂಬೈ, ದೆಹಲಿಗೆ ನೇರ ವಿಮಾನಯಾನ, ಯಾವಾಗ? ಸಂಸತ್ತಿನಲ್ಲಿ ರಾಘವೇಂದ್ರ ಹೇಳಿದ್ದೇನು?

ಹೋರಾಟಕ್ಕೆ ಮಣಿದ ಅರಣ್ಯ ಇಲಾಖೆ, ರೈತರಿಗೆ ನೀಡಿದ್ದ ನೊಟೀಸ್‌ ವಾಪಸ್‌

ಹೋರಾಟಕ್ಕೆ ಮಣಿದ ಅರಣ್ಯ ಇಲಾಖೆ, ರೈತರಿಗೆ ನೀಡಿದ್ದ ನೊಟೀಸ್‌ ವಾಪಸ್‌

Leave a Comment