ಸಿಗಂದೂರು ದೇಗುಲಕ್ಕೆ ಸಾವಿರ ಸಾವಿರ ಭಕ್ತರು, ಪಾರ್ಕಿಂಗ್‌ಗು ಸಿಗದ ಜಾಗ, ಸೇತುವೆ ಮೇಲೆ ಸೆಲ್ಫಿ ಸಂಭ್ರಮ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಸಾಗರ: ಶರಾವತಿ ಹಿನ್ನೀರಿನಲ್ಲಿ ಸೇತುವೆ ಲೋಕಾರ್ಪಣೆಯಾದ ಬಳಿಕ ಸಿಗಂದೂರು (Sigandur) ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಇಂದು ದೇವಿ ಸನ್ನಿಧಿಗೆ ಭಾರಿ ಸಂಖ್ಯೆಯ ಭಕ್ತರು ಭೇಟಿ ನೀಡಿ, ದೇವಿಯ ದರ್ಶನ ಪಡೆದಿದ್ದಾರೆ. ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.

ಇದನ್ನೂ ಓದಿ » ಹೊಸನಗರದ ಅಬ್ಬಿ ಫಾಲ್ಸ್‌ನಲ್ಲಿ ಬೆಂಗಳೂರಿನ ಯುವಕ ನೀರುಪಾಲು, ವಿಡಿಯೋ ವೈರಲ್‌

ಸಿಗಂದೂರು ಸೇತುವೆ ಲೋಕಾರ್ಪಣೆ ಬಳಿಕ ಇದೇ ಮೊದಲ ವೀಕೆಂಡ್. ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು ಸೇತುವೆ ಕಣ್ತುಂಬಿಕೊಂಡು, ದೇವಿಯ ದರ್ಶನಕ್ಕೆ ಆಗಮಿಸಿದ್ದಾರೆ.

Sigandur Temple parking full

ಪಾ‍ರ್ಕಿಂಗ್‌ ಸ್ಥಳದಲ್ಲಿ ಕಾಲಿಡಲು ಜಾಗವಿಲ್ಲ

ಸಿಗಂದೂರು ದೇಗುಲದ ಸಮೀಪದಲ್ಲಿರುವ ಪಾರ್ಕಿಂಗ್‌ ಸಾವಿರಾರು ವಾಹನಗಳು ನಿಂತಿವೆ. ಪಾರ್ಕಿಂಗ್‌ಗೆ ಜಾಗ ಸಿಗದೆ ನೂರಾರು ವಾಹನಗಳು ದೇವಸ್ಥಾನದ ಮುಂದೆ ರಸ್ತೆ ಬದಿಯಲ್ಲಿ ನಿಲುಗಡೆ ಮಾಡಲಾಗಿದೆ.

June-2025-Report-Shivamogga-Live-New-New.

ಈ ಮೊದಲು ಭಾರಿ ಜನ ಸಂಚಾರ ಇರುವ ಸಂದರ್ಭ ಲಾಂಚ್‌ನಲ್ಲಿ ವಾಹನಗಳನ್ನು ಹತ್ತಿಸುತ್ತಿರಲಿಲ್ಲ. ಲಾಂಚ್‌ ಇಳಿದ ಬಳಿಕ ಜನರು ಬಾಡಿಗೆ ಜೀಪುಗಳ ಮೂಲಕ ದೇವಸ್ಥಾನಕ್ಕೆ ಆಗಮಿಸುತ್ತಿದ್ದರು. ಈಗ ಸೇತುವೆ ಲೋಕಾರ್ಪಣೆ ಆಗಿರುವುದರಿಂದ ಭಕ್ತರು ತಮ್ಮ ವಾಹನಗಳಲ್ಲಿಯೇ ದೇಗುಲಕ್ಕೆ ಆಗಮಿಸುತ್ತಿದ್ದಾರೆ. ದೇವಸ್ಥಾನದ ಒಳಾಂಗಣದಲ್ಲಿಯು ಭಕ್ತರು ಸರತಿಯಲ್ಲಿ ನಿಂತು ದರ್ಶನ ಪಡೆಯುತ್ತಿದ್ದಾರೆ.

ಸೇತುವೆ ಮೇಲೆ ಫೋಟೊ, ಸೆಲ್ಫಿ

Sigandur Bridge

ಇನ್ನೊಂದೆಡೆ ಸಿಗಂದೂರು ಸೇತುವೆ ಮೇಲ್ಭಾಗ ಪ್ರವಾಸಿಗರು ಸೆಲ್ಫಿ, ಫೋಟೊಗಳನ್ನು ತೆಗೆಸಿಕೊಂಡು ಸಂಭ್ರಮಿಸಿದರು. ಕುಟುಂಬದವರು, ಸ್ನೇಹಿತರೊಂದಿಗೆ ಸಿಗಂದೂರು ದೇವಿ ಸನ್ನಿಧಿಗೆ ತೆರಳುವವರು ಸೇತುವೆ ಮೇಲೆ ನಿಂತು ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.

Sigandur Bridge

Sigandur Bridge

Sigandur-Bridge-Parking-full-at-temple

Leave a Comment