ಶಿವಮೊಗ್ಗ: ನಡುರಾತ್ರಿ ಮಾರಕಾಸ್ತ್ರ ಹಿಡಿದು ಆಗಂತುಕರು ಓಡಾಡಿದ್ದರಿಂದ ಒಡ್ಡಿನಕೊಪ್ಪ ಸಮೀಪದ ಪುಟ್ಟಪ್ಪ ಕ್ಯಾಂಪ್ನ ನಿವಾಸಿಗಳು ಆತಂಕಕ್ಕೀಡಾಗಿದ್ದರು. ಈ ಮಧ್ಯೆ ಪೊಲೀಸ್ ಇಲಾಖೆ ಸ್ಥಳೀಯರಿಗೆ ಅಭಯ ನೀಡಿದ್ದು, ಬಡಾವಣೆಯಲ್ಲಿ ಶಸ್ತ್ರಸಜ್ಜಿತವಾಗಿ ಗಸ್ತು (Patrol) ಆರಂಭಿಸಿದೆ.
ಶಿವಮೊಗ್ಗ ಲೈವ್ನ ಪ್ರತಿ ಅಪ್ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್ಗಳನ್ನು ಜಾಯಿನ್ ಆಗಿ:
ಒಡ್ಡಿನಕೊಪ್ಪ ಸಮೀಪದ ಎನ್.ಆರ್.ಪುರ ರಸ್ತೆಗೆ ಹೊಂದಿಕೊಂಡಿರುವ ಪುಟ್ಟಪ್ಪ ಕ್ಯಾಂಪ್ನಲ್ಲಿ ಭಾನುವಾರ ರಾತ್ರಿ 1 ಗಂಟೆಗೆ ಆರು ದುಷ್ಕರ್ಮಿಗಳು ಮಾರಕಾಸ್ತ್ರ ಹಿಡಿದು ಓಡಾಡಿದ್ದರು. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಹತ್ತು ಮನೆ, 20 ಕುಟುಂಬ

ಪುಟ್ಟಪ್ಪ ಕ್ಯಾಂಪ್ನಲ್ಲಿ ಕೆಲವೇ ವರ್ಷದ ಹಿಂದೆ ಬಡಾವಣೆ ನಿರ್ಮಾಣವಾಗಿದೆ. ಸದ್ಯ ಇಲ್ಲಿ 10 ಮನೆಗಳಿವೆ. ಸುಮಾರು 20 ಕುಟುಂಬಗಳು ವಾಸಿಸುತ್ತಿವೆ. ಅಧಿಕಾರಿಗಳು, ಉಪನ್ಯಾಸಕರು, ಉದ್ಯಮಿಗಳು ಇಲ್ಲಿ ವಾಸಿಸುತ್ತಿದ್ದಾರೆ. ಆದ್ದರಿಂದ ಬಡಾವಣೆಯಲ್ಲಿ ಜನ ಸಂಚಾರ ಕಡಿಮೆ.
ಸ್ಥಳಕ್ಕೆ ಹೆಚ್ಚುವರಿ ರಕ್ಷಣಾಧಿಕಾರಿ ಭೇಟಿ

ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆ ಹೆಚ್ಚುವರಿ ರಕ್ಷಣಾಧಿಕಾರಿ ಎ.ಜಿ.ಕಾರ್ಯಪ್ಪ ಪುಟ್ಟಪ್ಪ ಕ್ಯಾಂಪ್ ಬಡಾವಣೆಗೆ ಭೇಟಿ ನೀಡಿದ್ದರು. ಸಿಸಿಟಿವಿ ದೃಶ್ಯ ಪರಿಶೀಲಿಸಿ, ಸ್ಥಳೀಯರಿಂದ ಮಾಹಿತಿ ಪಡೆದರು. ಅಲ್ಲದೆ ತುರ್ತು ಸಂದರ್ಭ ಪೊಲೀಸ್ ಇಲಾಖೆಯ ಸಹಾಯವಾಣಿ 112ಗೆ ಕರೆ ಮಾಡುವಂತೆ ತಿಳಿಸಿದರು. ಡಿವೈಎಸ್ಪಿ ಬಾಬು ಆಂಜನಪ್ಪ, ತುಂಗಾ ನಗರ ಠಾಣೆ ಇನ್ಸ್ಪೆಕ್ಟರ್ ಕೆ.ಟಿ.ಗುರುರಾಜ್ ಭೇಟಿ ನೀಡಿ ಪರಿಶೀಲಿಸಿದರು.
ಶಸ್ತ್ರಾಸ್ತ್ರ ಸಹಿತ ಪೊಲೀಸರ ಗಸ್ತು

ಜನರಲ್ಲಿ ಭರವಸೆ ಮೂಡಿಸಲು ಪೊಲೀಸರು ಶಸ್ತ್ರಾಸ್ತ್ರ ಸಹಿತ ಗಸ್ತು ನಡೆಸಿದರು. ಕಳೆದ ರಾತ್ರಿ ಕಾಲ್ನಡಿಗೆಯಲ್ಲಿ ಒಡ್ಡಿನಕೊಪ್ಪ ಭಾಗದ ಹಲವಡೆ ತುಂಗಾ ನಗರ ಠಾಣೆ ಪೊಲೀಸರು ಗಸ್ತು ನಡೆಸಿದರು. ರಾತ್ರಿ ಪೂರ್ತಿ ಪೊಲೀಸರು ಗಸ್ತು ಮಾಡಿದರು.

ಸದ್ಯ ಪುಟ್ಟಪ್ಪ ಕ್ಯಾಂಪ್ನಲ್ಲಿ ಓಡಾಡಿದ ದುಷ್ಕರ್ಮಿಗಳಿಗೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಶಸ್ತ್ರಾಸ್ತ್ರ ಸಹಿತ ಪೊಲೀಸರ ಗಸ್ತು ಜನರು ನಿಟ್ಟುಸಿರು ಬಿಡುವಂತೆ ಮಾಡಿದೆ.
LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು






