ಭದ್ರಾವತಿ: ಭದ್ರಾ ಜಲಾಶಯದ ಹೊರ ಹರಿವು ಕಡಿಮೆಯಾಗಿದ್ದು, ಭದ್ರಾ ನದಿಯಲ್ಲಿ ನೀರಿನ ಮಟ್ಟ ಇಳಿಕೆಯಾಗಿದೆ. ಹಾಗಾಗಿ ಭದ್ರಾವತಿಯ ಭದ್ರಾ ಸೇತುವೆ (Old Bridge) ಮೇಲೆ ವಾಹನ ಸಂಚಾರ ಪುನಾರಂಭವಾಗಿದೆ.
ಇದನ್ನೂ ಓದಿ » ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.com/news/shivamogga-city/fighter-plane-to-be-installed-in-shimoga/" target="_blank" rel="noopener">ಶಿವಮೊಗ್ಗ ಸಿಟಿಗೆ ಯುದ್ಧ ವಿಮಾನ, ಎಂಎಲ್‌ಎ ನೇತೃತ್ವದಲ್ಲಿ ಸ್ಥಳ ಪರಿಶೀಲನೆ
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಪಕ್ಕದ ಭದ್ರಾ ನದಿ ಹೊಸ ಸೇತುವೆ ಮೇಲೆ ಇಂದು ಬೆಳಗ್ಗೆಯಿಂದ ವಾಹನ ಸಂಚಾರ ಪುನಾರಂಭವಾಗಿದೆ. ಸದ್ಯಕ್ಕೆ ಭಾರಿ ವಾಹನಗಳ ಸಂಚಾರವಿಲ್ಲ. ದ್ವಿಚಕ್ರ ವಾಹನಗಳು, ಕಾರು, ಆಟೋಗಳು ಮಾತ್ರ ಸಂಚರಿಸುತ್ತಿವೆ.

ಭದ್ರಾ ಜಲಾಶಯದಿಂದ ಭಾರಿ ಪ್ರಮಾಣದ ನೀರು ಹೊರ ಬಿಟ್ಟಿದ್ದರಿಂದ ಶನಿವಾರ ರಾತ್ರಿ ಹಳೆ ಸೇತುವೆ ಜಲಾವೃತವಾಗಿತ್ತು. ಸೇತುವೆ ಮೇಲೆ ಒಂದು ಅಡಿಯಷ್ಟು ನೀರು ಹರಿಯುತಿತ್ತು. ಹಾಗಾಗಿ ಭಾನುವಾರ ಇಡೀ ದಿನ ಸೇತುವೆ ಮೇಲೆ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು.


