ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಜಿಲ್ಲೆಯಾದ್ಯಂತ ಮಳೆ ಕಾಡಿಮೆಯಾಗಿದೆ. ಅಲ್ಲಲ್ಲಿ ಸಾಧಾರಣ ವ್ಯಾಪಕ ಮಳೆಯಾಗುತ್ತಿದೆ. ಆದರೆ ಮೇಲ್ಮೈ ಗಾಳಿ (Wind) ರಭಸವಾಗಿದ್ದು, ಮರ, ರೆಂಬೆ ಕೊಂಬೆಗಳು ಧರೆಗುರುಳುವ ಭೀತಿ ಎದುರಾಗಿದೆ.
ಮಳೆ ವಿವರ: ಇಲ್ಲಿದೆ ಹೈಲೈಟ್ಸ್
ಸಾಧಾರಣ ವ್ಯಾಪಕ ಮಳೆ
ಕಳೆದ 24 ಗಂಟೆಯಲ್ಲಿ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಸಾಧಾರಣ ವ್ಯಾಪಕ ಮಳೆಯಾಗಿದೆ. ಇವತ್ತು ಚದುರಿದಂತೆ ಮಳೆಯಾಗುವ ಸಂಭವವಿದ್ದು, ಮೇಲ್ಮೈ ಗಾಳಿ ಇರಲಿದೆ.

ಎಲ್ಲೆಲ್ಲಿ ಎಷ್ಟಾಗಿದೆ ಮಳೆ?
ಜುಲೈ 27ರ ಬೆಳಗ್ಗೆ 8.30ರಿಂದ ಜ.28ರ ಬೆಳಗ್ಗೆ 8.30ರವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಸರಾಸರಿ 13 ಮಿ.ಮೀ ಮಳೆಯಾಗಿದೆ. ಶಿವಮೊಗ್ಗ ತಾಲೂಕಿನಲ್ಲಿ 3 ಮಿ.ಮೀ, ಭದ್ರಾವತಿಯಲ್ಲಿ 2.6 ಮಿ.ಮೀ, ಸಾಗರ 16 ಮಿ.ಮೀ, ಸೊರಬ 11.6 ಮಿ.ಮೀ, ಶಿಕಾರಿಪುರ 5.1 ಮಿ.ಮೀ, ತೀರ್ಥಹಳ್ಳಿ 23.7 ಮಿ.ಮೀ, ಹೊಸನಗರ 15.9 ಮಿ.ಮೀ ಮಳೆಯಾಗಿದೆ.
ಅತಿ ಹೆಚ್ಚು ಮಳೆಯಾದ ಊರುಗಳು
ಕಳೆದ 24 ಗಂಟೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಹೊಸನಗರ ತಾಲೂಕಿನ ಮಾಸ್ತಿಕಟ್ಟೆಯಲ್ಲಿ 92 ಮಿ.ಮೀ, ಚಕ್ರಾ ವ್ಯಾಪ್ತಿಯಲ್ಲಿ 70 ಮಿ.ಮೀ, ಮಾನಿಯಲ್ಲಿ 62 ಮಿ.ಮೀ, ಯಡೂರು 62 ಮಿ.ಮೀ, ಯಡೂರಿನಲ್ಲಿ 59 ಮಿ.ಮೀ, ಸಾವೇಹಕ್ಲುವಿನಲ್ಲಿ 55 ಮಿ.ಮೀ, ಹುಲಿಕಲ್‌ನಲ್ಲಿ 48 ಮಿ.ಮೀ, ಸುಳಗೋಡಿನಲ್ಲಿ 46.5 ಮಿ.ಮೀ ಮಳೆಯಾಗಿದೆ. ತೀರ್ಥಹಳ್ಳಿಯ ಮೇಗರವಳ್ಳಿಯಲ್ಲಿ 41.5 ಮಿ.ಮೀ, ಸಾಗರದ ಹಿರೆನೆಲ್ಲೂರು 41.5 ಮಿ.ಮೀ, ತೀರ್ಥಹಳ್ಳಿಯ ಹಾದಿನಲ್ಲಿನಲ್ಲಿ 36 ಮಿ.ಮೀ ಮಳೆಯಾಗಿದೆ. ಇವು ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾದ ಪ್ರದೇಶಗಳು.
ಶೇ.7ರಷ್ಟು ಮಳೆ ಕೊರತೆ
ಶಿವಮೊಗ್ಗ ಜಿಲ್ಲೆಯಲ್ಲಿ ಜುಲೈ 1ರಿಂದ 28ರವರೆಗೆ ವಾಡಿಕೆಯಂತೆ 694 ಮಿ.ಮೀ ಮಳೆಯಾಗಬೇಕಿತ್ತು. ಆದರೆ ಈ ಬಾರಿ ಶೇ.7ರಷ್ಟು ಮಳೆ ಕಡಿಮೆಯಾಗಿದೆ. 647 ಮಿ.ಮೀ ಮಳೆಯಾಗಿದೆ.

ಬಿಸಿಲು, ಗಾಳಿ ಅಬ್ಬರ
ಶಿವಮೊಗ್ಗದಲ್ಲಿ ಜಿಲ್ಲೆಯಲ್ಲಿ ಮಳೆ ಮರೆಯಾಗಿದೆ. ಮೋಡ ಸರಿದಿದೆ. ಬಿಸಿಲು ಆವರಿಸಿದೆ. ಮಳೆಯೇ ಆಗಿಲ್ಲವೇನೊ ಎಂಬಂತೆ ವಾತಾವರಣ ಬದಲಾಗಿದೆ. ಇನ್ನು, ಗಾಳಿ ಜೋರಾಗಿ ಬೀಸುತ್ತಿದೆ. ಗಾಳಿ ರಭಸಕ್ಕೆ ಅಲ್ಲಲ್ಲಿ ರೆಂಬೆ, ಕೊಂಬೆಗಳು ರಸ್ತೆಗೆ ಬೀಳುತ್ತಿದ್ದು, ಜನರಲ್ಲಿ ಆತಂಕದಲ್ಲಿ ಓಡಾಡುವಂತಾಗಿದೆ.
Wind in Shimoga District
LATEST NEWS
- ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ JDS ಕಾರ್ಯಕರ್ತರ ಸಭೆ, MLA ಮಹತ್ವದ ಸೂಚನೆ, ಏನದು?

- ATNC, ಕಮಲಾ ನೆಹರು ಕಾಲೇಜು ವಿದ್ಯಾರ್ಥಿಗಳಿಂದ ವಿಭಿನ್ನ ಮನವಿ, ಏನಿದು?

- ಶಿವಮೊಗ್ಗದಲ್ಲಿ ಬೆಳಗಿನ ಜಾವ ಹಿಂಬದಿಯಿಂದ ಬಂದು ವೃದ್ಧೆಯ ಕೈ ಹಿಡಿದ ಯುವಕ, ಆಗಿದ್ದೇನು?

- ಮೈದೊಳಲಿನಲ್ಲಿ ವೈಭವದ ಬ್ರಹ್ಮ ರಥೋತ್ಸವ, ಏನೇನೆಲ್ಲ ಪೂಜೆ ಆಯ್ತು? ಹೇಗಿತ್ತು ಜಾತ್ರೆ ಸಂಭ್ರಮ?

- ಶಿವಮೊಗ್ಗದ ಕೋಟೆ ದೇವಸ್ಥಾನದಲ್ಲಿ ಸೋನಿಯಾ ಗಾಂಧಿಗಾಗಿ ವಿಶೇಷ ಪೂಜೆ

About The Editor
ನಿತಿನ್ ಆರ್.ಕೈದೊಟ್ಲು
















