ಶಿವಮೊಗ್ಗ ಸಿಟಿಯ ಈ ರಸ್ತೆಯಲ್ಲಿ ಸಂಚರಿಸುವುದಷ್ಟೆ ಅಲ್ಲ ಅಕ್ಕಪಕ್ಕ ನಿಲ್ಲುವುದೂ ಡೇಂಜರ್‌, ಏನಿದು?

ಶಿವಮೊಗ್ಗ: ಶಿವಮೊಗ್ಗ ಸಿಟಿಗೆ ಬರುವವರಿಗೆ ಇಲ್ಲಿ ಅದ್ಧೂರಿ ಸ್ವಾಗತ ನೀಡುತ್ತಿವೆ ಆಳ ಗುಂಡಿಗಳು (Pot Holes). ಈ ರಸ್ತೆಯಲ್ಲಿ ಓಡಾಡುವುದಷ್ಟೆ ಅಲ್ಲ ಅಕ್ಕಪಕ್ಕದಲ್ಲಿ ನಿಂತರು ಅಪಾಯ ನಿಶ್ಚಿತ. ಇಲ್ಲಿ ಬಿದ್ದವರು ಒಬ್ಬಿಬ್ಬರಲ್ಲ, ಕೈ ಕಾಲು ಮುರಿದುಕೊಂಡವರು ಲೆಕ್ಕಕ್ಕಿಲ್ಲ. (ಈ ಸುದ್ದಿಯನ್ನು ಇನ್ನು 105 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಇದು ರೈಲ್ವೆ ನಿಲ್ದಾಣದ ಪಕ್ಕದಲ್ಲಿರುವ ಶಿವಮೊಗ್ಗ – ಹೊನ್ನಾಳಿ ರಸ್ತೆಯ ಫ್ಲೈ ಓವರ್‌ ಮತ್ತು ಅದರ ಸಂಪರ್ಕ ರಸ್ತೆಯಲ್ಲಿರುವ ಗುಂಡಿಗಳ ಕಿರು ಪರಿಚಯ.

ಗುಂಡಿ, ಗುಂಡಿ.. ಆಳ ಗುಂಡಿ..

ಹೊನ್ನಾಳಿ ರಸ್ತೆಯ ಫ್ಲೈ ಓವರ್‌ನ ಎರಡೂ ಬದಿಯಲ್ಲಿ ವಾಹನಗಳು ಮೇಲೇರುವಾಗ ಗಂಡಿಗಳನ್ನು ದಾಟಲೇಬೇಕು. ಮೇಲೇರಿದ ಮೇಲೂ ಇದೇ ದುಸ್ಥಿತಿ. ಹತ್ತಕ್ಕೂ ಹೆಚ್ಚು ಆಳ ಗುಂಡಿಗಳನ್ನು ದಾಟಿಕೊಂಡೆ ವಾಹನಗಳು ಸಾಗಬೇಕು. ಫ್ಲೈ ಓವರ್‌ ಮೇಲೆ ವಾಹನ ಚಾಲಕರು ಸ್ವಲ್ಪ ವೇಗ ಹೆಚ್ಚಿಸಿದರೆ ಅಥವಾ ಕ್ಷಣ ಕಾಲ ದೃಷ್ಟಿ ಬೇರೆಡೆ ಹಾಯಿಸಿದರೆ ಮುಗಿಯಿತು. ಅಪಘಾತ ನಿಶ್ಚಿತ, ಸವಾರರು ಮೂಳೆ ಮುರಿದುಕೊಂಡು ಆಸ್ಪತ್ರೆ ಸೇರುವುದು ಖಚಿತ.

Potholes at Shimoga Honnali road near railway station

ಇದನ್ನೂ ಓದಿ » ಜೀವ ವಿಮೆ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಐದು ವಿಧದ ಇನ್ಷುರೆನ್ಸ್‌ಗಳ ವಿವರ

ಪಾತಾಳ ಲೋಕವೇ ಕಾಣುತ್ತದೆ

ಇನ್ನು, ಫ್ಲೈವರ್‌ನಿಂದ ಕೆಳಗಿಳಿದರೆ ರಾಗಿಗುಡ್ಡದ ದಿಕ್ಕಿನ ರಸ್ತೆಯಲ್ಲಿ ಆಳ, ಅಗಲದ ಗುಂಡಿಗಳಿವೆ. ಫ್ಲೈವರ್‌ ಕೆಳಗಿರುವ ಚೌಡೇಶ್ವರಿ ದೇವಿ ದೇವಸ್ಥಾನದಿಂದ ಬಜಾಜ್‌ ಸರ್ವಿಸ್‌ ಸೆಂಟರ್‌ನ ಮುಂಭಾಗದವರೆಗೆ ಬರೀ ಗುಂಡಿಗಳೇ ಇದ್ದಾವೆ. ಈ ಗುಂಡಿಗಳು ಒಂದಕ್ಕಿಂತಲು ಒಂದು ಆಗಲ, ಒಂದಕ್ಕಿಂತಲು ಒಂದು ಆಳವಿದೆ. ಬಸ್ಸು ಲಾರಿಗಳಂತ ಭಾರೀ ವಾಹನಗಳೇ ಅತ್ತಿತ್ತ ವಾಲಾಡುತ್ತವೆ.

Potholes at Shimoga Honnali road near railway station

ಈ ರಸ್ತೆಯಲ್ಲಿ ಅತ್ಯಂತ ನಾಜೂಕಾಗಿ ವಾಹನ ಓಡಿಸಬೇಕು. ಇಲ್ಲವಾದಲ್ಲಿ ವಾಹನದ ಕೆಳಭಾಗಕ್ಕೆ ನೆಲ ತಾಗಿ ಹಾನಿಯಾಗುತ್ತದೆ. ಆಟೋಗಳನ್ನು ಓಡಿವುದು ಬಹಳ ಕಷ್ಟವಾಗುತ್ತದೆ. ಸ್ವಲ್ಪ ಯಾಮಾರಿದರೆ ಆಟೋ ಪಲ್ಟಿಯಾಗುವ ಸಾಧ್ಯತೆ ಹೆಚ್ಚು.ರವಿ, ಆಟೋ ಚಾಲಕ
ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ

ರಸ್ತೆ ಪಕ್ಕದಲ್ಲಿ ನಿಲ್ಲುವುದೂ ಡೇಂಜರ್‌

ಗುಂಡಿಮಯ ರಸ್ತೆಯ ಅಕ್ಕಪಕ್ಕದಲ್ಲಿ ನಿಲ್ಲುವುದೂ ಡೇಂಜರ್‌ ಅಂತಾರೆ ಇಲ್ಲಿನ ಸ್ಥಳೀಯರು. ಗುಂಡಿಯಿಂದ ಮೇಲೆದ್ದು ಬರುವ ಕಲ್ಲುಗಳು ವಾಹನಗಳ ಚಕ್ರದ ತುದಿಗೆ ಸಿಲುಕಿ ಅಕ್ಕಪಕ್ಕದಲ್ಲಿ ಹಾರುತ್ತವೆ. ಇವುಗಳು ತಗುಲಿ ಗಾಯಗೊಂಡವರು ಇದ್ದಾರೆ. ವಾಹನಗಳೂ ಹಾನಿಯಾಗಿವೆ.

Potholes at Shimoga Honnali road near railway station

ರಿಪೇರಿಗೆ ಬಂದ ಕಾರುಗಳನ್ನು ಗ್ಯಾರೇಜ್‌ ಮುಂದೆ ನಿಲ್ಲಿಸುತ್ತೇವೆ. ರಸ್ತೆಯಿಂದ ಸಿಡಿದ ಕಲ್ಲುಗಳು ಇಲ್ಲಿ ನಿಲ್ಲಿಸಿದ್ದ ಎರಡು ಕಾರುಗಳ ಗಾಜನ್ನು ಒಡೆದಿವೆ. ಇದರಿಂದ ನಮಗೆ ನಷ್ಟವಾಗಿದೆ. ಈ ಗುಂಡಿಗಳನ್ನು ಮುಚ್ಚುವಂತೆ ಯಾರಾದರು ಮನವಿ ಮಾಡಿದರೆ ಮಣ್ಣು ತಂದು ಹಾಕಿ ಗುಂಡಿ ಮುಚ್ಚುತ್ತಾರೆ. ಅದರಿಂದ ಯಾವುದೇ ಪ್ರಯೋಜವಿಲ್ಲ.ಮೊಹಮದ್‌ ಅಶ್ರಫ್‌, ಗ್ಯಾರೇಜ್‌ ನಿರ್ವಾಹಕ

Potholes at Shimoga Honnali road near railway station

ಈ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ರಾಗಿಗುಡ್ಡ, ಶಾಂತಿನಗರ ಸೇರಿಂದಂತೆ ವಿವಿಧ ಬಡಾವಣೆಗಳಿಗೆ ಇದೇ ಸಂಪರ್ಕ ರಸ್ತೆಯಾಗಿದೆ. ಈ ರಸ್ತೆಯಲ್ಲಿನ ಗುಂಡಿಗಳನ್ನು ಬಂದ್‌ ಮಾಡಿದರೆ ಮತ್ತಷ್ಟು ಅನಾಹುತಗಳನ್ನು ತಪ್ಪಿಸಬಹುದಾಗಿದೆ.

Potholes at Shimoga Honnali road near railway station

Potholes at Shimoga Honnali road near railway station

Potholes at Shimoga Honnali road near railway station

Potholes at Shimoga Honnali road near railway station

Potholes-at-Shimoga-Honnali-road-near-railway-station

Leave a Comment

Editor JOIN OUR WHATSAPP GROUP