ಸಿಗಂದೂರು ಸೇತುವೆ ಮೇಲೆ ಡೇಂಜರಸ್‌ ಬೈಕ್‌ ಸ್ಟಂಟ್‌, ಯುವಕನಿಗೆ ಪೊಲೀಸರಿಂದ ಶಾಕ್

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಸಾಗರ: ಸಿಗಂದೂರು ಸೇತುವೆ (Sigandur Bridge) ಮೇಲೆ ದುಬಾರಿ ಬೈಕ್‌ನಲ್ಲಿ ವೀಲಿಂಗ್‌ ಮಾಡಿದ ಯುವಕನಿಗೆ ಪೊಲೀಸರು ದಂಡ ವಿಧಿಸಿದ್ದಾರೆ. ಅಲ್ಲದೆ ತಪ್ಪೊಪ್ಪಿಗೆ ಹೇಳಿಕೆಯನ್ನು ಪಡೆದಿದ್ದಾರೆ.

ಆಗಸ್ಟ್‌ 15ರಂದು ಯುವಕನೊಬ್ಬ ಸಿಗಂದೂರು ಸೇತುವೆ ಮೇಲೆ ಯುವಕನೊಬ್ಬ ವೀಲಿಂಗ್‌ ಮಾಡಿದ್ದ. ಈತ ಬೈಕ್‌ ಸ್ಟಂಟ್‌ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ಹಿನ್ನೆಲೆ ಗ್ರಾಮಾಂತರ ಠಾಣೆ ಪೊಲೀಸರು ಬೈಕ್‌ ಸವಾರನನ್ನು ಪತ್ತೆ ಹಚ್ಚಿ, ಆತನಿಗೆ ದಂಡ ವಿಧಿಸಿದ್ದಾರೆ. ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

Bike-Wheeling-On-Sigandur-Bridge-case-filed

ದುಬಾರಿ ಬೆಲೆ ಕವಾಸಕಿ ಬೈಕ್‌ ಸವಾರನಿಗೆ ₹5000 ದಂಡ ವಿಧಿಸಿದ್ದಾರೆ. ಅಲ್ಲದೆ ತಪ್ಪೊಪ್ಪಿಗೆ ಹೇಳಿಕೆ ಪಡೆದಿದ್ದಾರೆ. ಇನ್ಮುಂದೆ ಯಾರು ಈ ರೀತಿಯ ತಪ್ಪು ಮಾಡಬಾರದು ಎಂದು ಆತ ವಿಡಿಯೋದಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ.

ಇದನ್ನೂ ಓದಿ » ವಾಹನ ಸವಾರರಿಗೆ ಗುಡ್‌ ನ್ಯೂಸ್‌, ಮತ್ತೆ ದಂಡದ ಮೊತ್ತದಲ್ಲಿ ಶೇ.50ರಷ್ಟು ಡಿಸ್ಕೌಂಟ್‌, ಯಾರಿಗೆಲ್ಲ ಅನ್ವಯ?

ಸಿಗಂದೂರ ಸೇತುವೆ ಉದ್ಘಾಟನೆಯಾಗುತ್ತಿದ್ದಂತೆ ದೊಡ್ಡ ಸಂಖ್ಯೆಯ ಪ್ರವಾಸಿಗರನ್ನು ಸೆಳೆಯುತ್ತಿದ್ದೆ. ಇನ್ನೊಂದೆಡೆ ಹಲವರ ಹುಚ್ಚಾಟಗಳು ಹೆಚ್ಚಾಗಿದೆ. ಈಚೆಗೆ ರಾತ್ರಿ ವೇಳೆ ಸಿಗಂದೂರು ಸೇತುವೆ ಮೇಲೆ ಕಾರಿನಲ್ಲಿ ನಿಂತು ಮದ್ಯ ಸೇವಿಸುತ್ತಿದ್ದ ಗುಂಪೊಂದರ ವಿಡಿಯೋ ವೈರಲ್‌ ಆಗಿತ್ತು. ಇದರ ಬೆನ್ನಿಗೆ ಬೈಕ್‌ ಸ್ಟಂಟ್‌ ವಿಡಿಯೋ ವೈರಲ್‌ ಆಗಿದೆ.

Wheeling on Sigandur Bridge

Leave a Comment