ಶಿವಮೊಗ್ಗ: 110/11ಕೆ.ವಿ ಮೆಗ್ಗಾನ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮೊದಲನೇ ತ್ರೈಮಾಸಿಕ ನಿರ್ವಹಣ ಕಾಮಗಾರಿ ನಡೆಯಲಿದೆ. ಹಾಗಾಗಿ ಆಗಸ್ಟ್ 23 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಗರದ ಹಲವು ಕಡೆ ವಿದ್ಯುತ್ ವ್ಯತ್ಯಯವಾಗಲಿದೆ (Power cut) ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಎಲ್ಲೆಲ್ಲಿ ಕೆರೆಂಟ್ ಇರಲ್ಲ?
ಹೊಸಮನೆ, ಹೊಸಮನೆ ಛಾನಲ್ ಏರಿಯಾ, ಶರಾವತಿನಗರ ಎ ಮತ್ತು ಬಿ ಬ್ಲಾಕ್, ಆಯುರ್ವೇದ ಕಾಲೇಜು, ಕುವೆಂಪು ರಸ್ತೆ, ಸಾಗರ ರಸ್ತೆ, ಆಯನೂರು ಗೇಟ್, ಆದಿಚುಂಚನಗಿರಿ ಸಮುದಾಯ ಭವನ, ಯೂನಿಟಿ ಆಸ್ಪತ್ರೆ, ಜೈಲ್ ವೃತ್ತ, ಸುಬ್ಬಯ್ಯ ಆಸ್ಪತ್ರೆ, ಜೈಲ್ ರಸ್ತೆ, ಸತ್ಯಂ ಫೋರ್ವಿಂಗ್ಸ್, ಎ.ಆರ್.ಬಿ ಕಾಲೋನಿ, ಅಶೋಕನಗರ, ಅಣ್ಣಾನಗರ, ಪಂಪನಗರ, ರಂಗನಾಥ ಬಡಾವಣೆ, ಮಿಳಘಟ್ಟ, ಟಿಪ್ಪುನಗರ ಬಲಭಾಗ, ಬಿ.ಎಸ್.ಎನ್.ಎಲ್ ಭವನ, ಪಾರ್ಕ್ ಎಕ್ಸ್ಟೆನ್ಷನ್. ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.
ದುರ್ಗಿಗುಡಿ, ಜಿಲ್ಲಾ ಪಂಚಾಯತ್ ಕಛೇರಿ, ತಿಲಕ್ ನಗರ, ಆರ್.ಎಂ.ಆರ್ ರಸ್ತೆ, ಜಯನಗರ, ಬಸವನಗುಡಿ, ನಂಜಪ್ಪ ಆಸ್ಪತ್ರೆ, ಮ್ಯಾಕ್ಸ್ ಆಸ್ಪತ್ರೆ, ಶಿವಮೂರ್ತಿ ವೃತ್ತ, ಜಿಲ್ಲಾಧಿಕಾರಿಗಳ ಕಛೇರಿ, ಎ.ಎನ್.ಕೆ ರಸ್ತೆ, ಅಚ್ಯುತ್ ರಾವ್ ಬಡಾವಣೆ, ಸವಳಂಗ ರಸ್ತೆ, ರಾಘವೇಂದ್ರ ಸ್ವಾಮಿ ಮಠ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಆಲ್ಕೊಳ ಸುತ್ತಮುತ್ತ ಕರೆಂಟ್ ಇರಲ್ಲ
ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್-04 ರಲ್ಲಿ ತುರ್ತು ಕಾಮಗಾರಿ ನಡೆಸಲಾಗುತ್ತಿದೆ. ಆದ್ದರಿಂದ ಆ.23 ರಂದು ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿದೆ 10 ಸುದ್ದಿಗಳು | 22 ಆಗಸ್ಟ್ 2025
ಅಮೃತ ಲೇಔಟ್, ಸಿಟಿ ಕ್ಲಬ್, ಮಹೇಂದ್ರ ಶೋರೂಂ ಮುಖ್ಯರಸ್ತೆ, ಗಾಡಿಕೊಪ್ಪ, ಶರಾವತಿ ಡೆಂಟಲ್ ಕಾಲೇಜು, ಹರ್ಷ ಫರ್ನ್ ಸುತ್ತಮುತ್ತ, ಮಲ್ಲಿಗೇನಹಳ್ಳಿ, ಎಬಿವಿಪಿ ಲೇಔಟ್, ಮ್ಯಾಕ್ಸ್ ಅರುಣೋದಯ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.