ಅಂಚೆ ಇಲಾಖೆಯಿಂದ ವಿದ್ಯಾರ್ಥಿ ವೇತನ, ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಇಲ್ಲಿದೆ ಡಿಟೇಲ್ಸ್

ಶಿವಮೊಗ್ಗ: ಅಂಚೆ ಇಲಾಖೆಯಿಂದ ಶಾಲಾ ವಿದ್ಯಾರ್ಥಿಗಳಲ್ಲಿ ಅಂಚೆ ಚೀಟಿ ಸಂಗ್ರಹಣಾ ಕಲೆಯನ್ನು ಉತ್ತೇಜಿಸಲು ದೀನ ದಯಾಳ್ ಸ್ಪರ್ಶ್ ಯೋಜನೆಯಡಿ ವಿದ್ಯಾರ್ಥಿವೇತನ (Scholarship) ನೀಡಲು 6ನೇ ತರಗತಿಯಿಂದ 9ನೇ ತರಗತಿ  ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

2025ರ ವಾರ್ಷಿಕ ಪರೀಕ್ಷೆಯಲ್ಲಿ ಶೇ 60ರಷ್ಟು ಅಂಕ ಪಡೆದಿದ್ದು, ಅಂಚೆ ಚೀಟಿ ಸಂಗ್ರಹಣಾ ಠೇವಣಿ ಖಾತೆ ಹೊಂದಿರಬೇಕು.

ಕ್ಲಬ್ ಅಂಚೆ ಚೀಟಿ ಸಂಗ್ರಹಣಾ ಸದಸ್ಯತ್ವ ಮತ್ತು ಅಂಚೆ ಚೀಟಿ ಸಂಗ್ರಹವನ್ನು ಹವ್ಯಾಸವಾಗಿ ಅನುಸರಿಸುವ ವಿದ್ಯಾರ್ಥಿಗಳಿಗೆ ವಾರ್ಷಿಕ ₹6,000 ವಿದ್ಯಾರ್ಥಿವೇತನ ನೀಡಲಾಗುವುದು. 

ಮೊದಲ ಹಂತದಲ್ಲಿ ಅಂಚೆ ಚೀಟಿ ಸಂಗ್ರಹಣಾ ರಸಪ್ರಶ್ನೆ ಸ್ಪರ್ಧೆಯ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು.

ಮುಂದಿನ ಹಂತದಲ್ಲಿ ಅಂಚೆ ಇಲಾಖೆ ನೀಡುವ ಅಂಚೆ ಚೀಟಿ ಸಂಗ್ರಹಣಾ ಯೋಜನೆಯಲ್ಲಿ ಸ್ಪರ್ಧಿಸಿ ಯಶಸ್ವಿಯಾದ ವಿದ್ಯಾರ್ಥಿಗಳನ್ನು ಎಸ್‌ಪಿಎಆರ್‌ಎಸ್‌ಹೆಚ್(ಸ್ಪರ್ಶ್) ಯೋಜನೆಯ ವಿದ್ಯಾರ್ಥಿವೇತನಕ್ಕೆ ಆಯ್ಕೆ ಮಾಡಲಾಗುತ್ತದೆ.

India-Post-general-image.webp

ಇದನ್ನೂ ಓದಿ » ಜೋಗಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಳ, ಜಲಪಾತದ ಮುಂದೆ ಸೆಲ್ಫಿ, ಫೋಟೊಗೆ ಪೋಸ್‌

ಮಾಹಿತಿಗೆ www.indiapost.gov.in ಮತ್ತು www.karnatakapost.gov.in ಭೇಟಿ ನೀಡಬಹುದು ಎಂದು ಅಂಚೆ ವಿಭಾಗದ ಜಿಲ್ಲಾ ಅಧೀಕ್ಷಕ ಜಯರಾಮ ಶೆಟ್ಟಿ ತಿಳಿಸಿದ್ದಾರೆ.

Postal department Scholarship

India-Post-general-image.webp

Leave a Comment