ಜೋಗಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಳ, ಜಲಪಾತದ ಮುಂದೆ ಸೆಲ್ಫಿ, ಫೋಟೊಗೆ ಪೋಸ್‌

ಸಾಗರ: ವೀಕೆಂಡ್‌ ಹಿನ್ನೆಲೆ ಜೋಗ ಜಲಪಾತಕ್ಕೆ ಇವತ್ತು ದೊಡ್ಡ ಸಂಖ್ಯೆ ಪ್ರವಾಸಿಗರು (Tourist) ಆಗಮಿಸಿದ್ದರು. ಜಲಪಾತದ ವೈಭವ ಕಣ್ತುಂಬಿಕೊಂಡು ಖುಷಿ ಪಟ್ಟರು.➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಲಿಂಗನಮಕ್ಕಿ ಜಲಾಶಯದಿಂದ ಕಳೆದ ವಾರ ನೀರು ಹರಿಸಲಾಗಿತ್ತು. ಹಾಗಾಗಿ ಜೋಗ ಜಲಪಾತದಲ್ಲಿ ರಾಜಾ, ರಾಣಿ, ರೋರರ್‌ ಮತ್ತು ರಾಕೆಟ್‌ ಜಲಪಾತಗಳು ಭೋರ್ಗರೆಯುತ್ತಿದ್ದವು. ಇದರ ವಿಡಿಯೋಗಳು ವೈರಲ್‌ ಆಗಿದ್ದವು. ಇದರ ಬೆನ್ನಿಗೆ ಪ್ರವಾಸಿಗರು ಹೆಚ್ಚಳವಾಗಿದ್ದಾರೆ.

ಇದನ್ನೂ ಓದಿ » ಲಿಂಗನಮಕ್ಕಿ ಜಲಾಶಯದ ಐದು ಗೇಟ್‌ ಓಪನ್‌, ಇಲ್ಲಿದೆ ಫೋಟೊ ರಿಪೋರ್ಟ್‌

ಜೋಗ ಜಲಪಾತಕ್ಕೆ ಇಂದು ಭಾರಿ ಸಂಖ್ಯೆಯ ಪ್ರವಾಸಿಗರು ಆಗಮಿಸಿದ್ದರು. ಜಲಪಾತದ ಮುಂದೆ ನಿಂತು ಫೋಟೊ, ಸೆಲ್ಫಿಗೆ ಪೋಸ್‌ ನೀಡಿದರು. ಶನಿವಾರ ಮತ್ತು ಭಾನುವಾರ ಎರಡು ದಿನ ನಿರಂತರ ರಜೆ ಹಿನ್ನೆಲೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು.

Tourist-at-Jog-falls-in-shimoga

l1

Tourist-at-Jog-falls-in-shimoga

tourist at Jog falls

Leave a Comment