BREAKING NEWS | ಲಿಂಗನಮಕ್ಕಿ ಜಲಾಶಯದ ಗೇಟುಗಳು ಓಪನ್, ಎಷ್ಟು ಪ್ರಮಾಣದ ನೀರು ಹೊರ ಬಿಡಲಾಗ್ತಿದೆ ಗೊತ್ತಾ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | ಸಾಗರ | 2 ಸೆಪ್ಟೆಂಬರ್ 2019

ಲಿಂಗನಮಕ್ಕಿ ಜಲಾಶಯ ಭರ್ತಿಯಾದ ಹಿನ್ನೆಲೆ ಮೂರು ಕ್ರಸ್ಟ್  ಗೇಟುಗಳನ್ನು ತೆಗೆದು ನೀರು ಹೊರಬಿಡಲಾಗುತ್ತಿದೆ. ಸಂಜೆ 6.30ಕ್ಕೆ ಮೂರು ಕ್ರಸ್ಟ್ ಗೇಟುಗಳನ್ನು ಒಂದು ಅಡಿಯಷ್ಟು ಮೇಲಕ್ಕೆತ್ತಲಾಗಿದೆ.

ಮೂರು ಗೇಟುಗಳ ಮೂಲಕ 4800 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಸದ್ಯ ನೀರಿನ ಮಟ್ಟ 1818.40 ಅಡಿಗೆ ತಲುಪಿದೆ. ಪೂರ್ಣ ಭರ್ತಿಗೆ ಇನ್ನು ಅರ್ಧ ಅಡಿಯಷ್ಟು ಬಾಕಿ ಇದೆ. ಒಳಹರಿವು 25 ಸಾವಿರ ಕ್ಯೂಸೆಕ್ ಇದೆ.

ಮಳೆ ಹೆಚ್ಚಾದರೆ ಮತ್ತಷ್ಟು ನೀರು ಹೊರಗೆ

ಜಲಾನಯನ ಪ್ರದೇಶ ಹೊಸನಗರ ಮತ್ತು ಸಾಗರದಲ್ಲಿ ಸತತ ಮಳೆಯಾಗುತ್ತಿದೆ. ಇನ್ನೂ ಎರಡು ದಿನ ಮಳೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅಣೆಕಟ್ಟು ಪೂರ್ಣ ತುಂಬುವ ಮೊದಲೇ ಕ್ರಸ್ಟ್ ಗೇಟ್’ಗಳ ಮೂಲಕ ಅಲ್ಪ ಪ್ರಮಾಣದಲ್ಲಿ ನೀರು ಹೊರಬಿಡಲು ನಿರ್ಧರಿಸಲಾಗಿದೆ. ಮಳೆ ಪ್ರಮಾಣ ಹೆಚ್ಚಾದರೆ ಅಧಿಕ ನೀರನ್ನು ಹೊರಬಿಡಲಾಗುತ್ತದೆ ಎಂದು ಕೆಪಿಸಿ (ಕರ್ನಾಟಕ ವಿದ್ಯುಚ್ಛಕ್ತಿ ನಿಗಮ) ಅಧಿಕಾರಿಗಳು ತಿಳಿಸಿದ್ದಾರೆ. 

ಮೈದುಂಬಲಿದೆ ಜೋಗ ಜಲಪಾತ

ಲಿಂಗನಮಕ್ಕಿ ಜಲಾಶಯದಿಂದ ಅಧಿಕ ಪ್ರಮಾಣದ ನೀರು ಹೊರಬಿಟ್ಟರೆ, ಜೋಗ ಜಲಪಾತಕ್ಕೆ ಮತ್ತೆ ಜೀವಕಳೆ ಬರಲಿದೆ. ಇದನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಎದುರು ನೋಡುತ್ತಿದ್ದಾರೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ ಮೊಬೈಲ್ ನಂಬರ್ | 9964634494

ಈ ಮೇಲ್ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment