ನವಿಲು, ಹುಲಿ ದತ್ತು ಪಡೆದ ಶಿವಮೊಗ್ಗದ ಕಾಲೇಜು, ಎಷ್ಟು ಅವಧಿಗೆ?

ಶಿವಮೊಗ್ಗ: ನಗರದ ಎನ್ಇಎಸ್ ಇನ್ಸ್‌ಟಿಟ್ಯೂಟ್‌ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜು ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದಲ್ಲಿರುವ ಹುಲಿ ಮತ್ತು ನವಿಲನ್ನು ದತ್ತು ಪಡೆದಿದೆ.

ಕಾಲೇಜಿನ ಸಭಾಂಗಣದಲ್ಲಿ ನಡೆದ ದತ್ತು ಸ್ವೀಕಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕಲ್ಯಾಣ ಸಮಿತಿಯ ವತಿಯಿಂದ ಹುಲಿ ಸಿಂಹಧಾಮದ ನಿರ್ದೇಶಕ ಬಿ.ಆರ್.ಅಮರಕ್ಷರ್ ಅವರಿಗೆ ಹಸ್ತಾಂತರಿಸಲಾಯಿತು. ಹುಲಿ ಸಿಂಹಧಾಮದಲ್ಲಿರುವ ಒಂದು ಹುಲಿಯನ್ನು ಒಂದು ತಿಂಗಳ ಅವಧಿಗೆ ಮತ್ತು ನವಿಲನ್ನು ಒಂದು ವರ್ಷದ ಅವಧಿಯ ನಿರ್ವಹಣೆ, ಆಹಾರ ಮತ್ತು ಆರೈಕೆಗಾಗಿ ನಿರ್ದಿಷ್ಟ ಮೊತ್ತವನ್ನು ಹಸ್ತಾಂತರ ಮಾಡಲಾಗಿದೆ.

ಪರಿಸರ ಮತ್ತು ಮಾನವನ ನಡುವೆ ಅವಿನಾಭಾವ ಸಂಬಂಧವಿದೆ‌. ಪರಿಸರವು ಮಾನವನ ಅವಿಭಾಜ್ಯ ಅಂಗವಾಗಿದ್ದು, ಮನುಷ್ಯನಷ್ಟೆ ಪರಿಸರದಲ್ಲಿ ಬದುಕುವ ಹಕ್ಕನ್ನು ಪ್ರಾಣಿ ಪಕ್ಷಿಗಳು ಹೊಂದಿದೆ. ಪ್ರಾಣಿಗಳನ್ನು ಸಂರಕ್ಷಿಸುವ ಕಾರ್ಯಕ್ಕೆ ನಾಗರಿಕರನ್ನು ಹೆಚ್ಚಾಗಿ ತೊಡಗಿಸಿಕೊಳ್ಳುವುದೆ ಈ ದತ್ತು ಯೋಜನೆಯ ಮಹತ್ವದ ಉದ್ದೇಶವಾಗಿದೆ.

– ಬಿ.ಆರ್.ಅಮರಕ್ಷರ್, ಹುಲಿ ಸಿಂಹಧಾಮದ ನಿರ್ದೇಶಕ

NES-Advanced-Studies-college-adopt-tiger

ಪರಿಸರ ಮತ್ತು ವನ್ಯಜೀವಿಗಳ ಸಂರಕ್ಷಣೆ ಮಾಡದ ಹೊರತಾಗಿ ಮುಂದಿನ ದಿನಗಳಲ್ಲಿ ಪ್ರಾಣಿಗಳನ್ನು ಕೇವಲ ಚಿತ್ರ ಪಟಗಳಲ್ಲಿ ನೋಡಬೇಕಾಗುತ್ತದೆ. ಅಂತಹ ಸನ್ನಿವೇಶ ಇಡೀ ಮನುಕುಲಕ್ಕೆ ತೊಂದರೆಯನ್ನು ಉಂಟುಮಾಡುತ್ತದೆ.

– ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ರಾಷ್ಟ್ರೀಯ ಶಿಕ್ಷಣ ಸಮಿತಿ ನಿರ್ದೇಶಕ

NES-Advanced-Studies-college-adopt-tiger

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಎಸ್.ಶಿವಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಅರಣ್ಯ ಶಿಕ್ಷಣ ಅಧಿಕಾರಿ ಸಿಂಚನ, ಸಾರ್ವಜನಿಕ ಸಂಪರ್ಕಾಧಿಕಾರಿ ಐಜಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ » ಶಿವಮೊಗ್ಗ ಸಿಟಿಯಲ್ಲಿ ಬೆಳಗ್ಗೆಯಿಂದ ಮೋಡ, ಮಧ್ಯಾಹ್ನದ ಹೊತ್ತಿಗೆ ಮಳೆ ಅಬ್ಬರ

Tiger and Peacock adopted by NES Advanced Studies College 

ಚಿತ್ರದ ವಿವರಣೆ
Shaki Toyota, Shivamogga
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : August 31, 2025 at 3:00 PM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಆಗಷ್ಟ್ 31, 2025

Leave a Comment