ಐ ಫೋನ್‌ ಪ್ರಿಯರಿಗೆ ಗುಡ್‌ ನ್ಯೂಸ್‌, ಬೆಂಗಳೂರಿನಲ್ಲಿ ಆ್ಯಪಲ್ ಸ್ಟೋರ್‌ ಶುರು, ಹೇಗಿದೆ? ಏನೆಲ್ಲ ಸಿಗುತ್ತೆ?

ಮೊಬೈಲ್‌ ನ್ಯೂಸ್‌: ದಕ್ಷಿಣ ಭಾರತದ ಮೊದಲ ಆ್ಯಪಲ್ ಸ್ಟೋರ್‌ (Apple) ಬೆಂಗಳೂರಿನ ಹೆಬ್ಬಾಳದಲ್ಲಿ ಇವತ್ತು ಆರಂಭವಾಗಿದೆ. ಮೊದಲ ದಿನವೇ ಆ್ಯಪಲ್ ಸ್ಟೋರ್‌ಗೆ ದೊಡ್ಡ ಸಂಖ್ಯೆಯ ಗ್ರಾಹಕರು ಲಗ್ಗೆ ಇಟ್ಟರು. ಬೆಳಗ್ಗೆ 6 ಗಂಟೆಯಿಂದಲೇ ಕ್ಯೂನಲ್ಲಿ ನಿಂತು ಆ್ಯಪಲ್ ಸ್ಟೋರ್‌ಗೆ ಬಂದು ಖರೀದಿ ಮಾಡಿ ಸೆಲ್ಫಿಗಳನ್ನು ಪೋಸ್ಟ್‌ ಮಾಡಿದ್ದಾರೆ.

ಸುದ್ದಿಯ ಮುಂದಿನ ಭಾಗ ಕೆಳಗಿದೆ

ಹೇಗಿದೆ ಬೆಂಗಳೂರು ಆ್ಯಪಲ್ ಸ್ಟೋರ್‌?

ಮುಂಬೈ, ದೆಹಲಿ ಬಳಿಕ ಆ್ಯಪಲ್ ಸಂಸ್ಥೆ ದಕ್ಷಿಣ ಭಾರತದಲ್ಲಿ ಮೊದಲ ಸ್ಟೋರ್‌ ತೆರೆದಿದೆ. ಬೆಂಗಳೂರಿನ ಹೆಬ್ಬಾಳದಲ್ಲಿ ಬೃಹತ್‌ ಆ್ಯಪಲ್ ಸ್ಟೋರ್‌ ಆರಂಭವಾಗಿದೆ. ಇಲ್ಲಿ ಆ್ಯಪಲ್ ಸಂಸ್ಥೆಯ ಫೋನುಗಳು, ಮ್ಯಾಕ್‌ಬುಕ್‌ಗಳು, ಐಪಾಡ್‌, ಪೆನ್ಸಿಲ್‌ ಪ್ರೋ, ವಾಚ್‌ ಸೀರಿಸ್‌, ಏರ್‌ಪಾಡ್‌ಗಳು, ಏರ್‌ ಟ್ಯಾಗ್‌ಗಳೆಲ್ಲು ಲಭ್ಯವಿದೆ. ಆ್ಯಪಲ್ 16 ಸೀರಿಸ್‌ನ ಮೊಬೈಲ್‌ಗಳು, ಮ್ಯಾಕ್‌ ಬುಕ್‌ ಎಂ4 ಚಿಪ್‌ ಸೇರಿದಂತೆ ಇತ್ತೀಚಿಗೆ ಬಿಡುಗಡೆಯಾದ ಎಲ್ಲ ಬಗೆಯ ಆ್ಯಪಲ್ ಪ್ರಾಡೆಕ್ಟ್‌ಗಳು ಇಲ್ಲಿ ಲಭ್ಯ.

Apple Store in Bengaluru

Nanjappa Hospital Advertisement

ಬೆಂಗಳೂರಿನ ಹೆಬ್ಬಾಳದ ವಿಶಾಲವಾದ ಆ್ಯಪಲ್ ಸ್ಟೋರ್‌ನಲ್ಲಿ 15 ರಾಜ್ಯದ 70 ಮಂದಿ ಕೆಲಸ ಮಾಡಲಿದ್ದಾರೆ. ಇದರಲ್ಲಿ ಸೇಲ್ಸ್‌, ಫೈನಾನ್ಸ್‌ ಸೇರಿ ಗ್ರಾಹಕರಿಗೆ ಸಲಹೆ ನೀಡಲು ಸಿಬ್ಬಂದಿ ನೇಮಿಸಲಾಗಿದೆ.

Apple Store in Bengaluru

ಇದನ್ನೂ ಓದಿ » ಓಲಾ ಸ್ಕೂಟರ್‌ ಸಂಸ್ಥೆಗೆ ಬಿಸಿ ಮುಟ್ಟಿಸಿದ ಶಿವಮೊಗ್ಗದ ಗ್ರಾಹಕ ನ್ಯಾಯಾಲಯ, ಮಹತ್ವದ ತೀರ್ಪು ಪ್ರಕಟ

ಇನ್ಮುಂದೆ ಆ್ಯಪಲ್ ಸಂಸ್ಥೆಯ ಪ್ರಾಡೆಕ್ಟ್‌ಗಳ ಖರೀದಿಗೆ ಗ್ರಾಹಕರು ದೆಹಲಿ, ಮುಂಬೈಗೆ ಹೋಗಬೇಕಿಲ್ಲ. ಬೆಂಗಳೂರಿನ ಹೆಬ್ಬಾಳದ ಆ್ಯಪಲ್ ಸ್ಟೋರ್‌ಗೆ ಭೇಟಿ ನೀಡಿದರೆ ಎಲ್ಲ ಪ್ರಾಡೆಕ್ಟ್‌ ಒಂದೇ ಸೂರಿನಡಿ ದೊರೆಯಲಿದೆ.

Apple Store in Bengaluru

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
Shivamogga Live Promotion

Leave a Comment