ಭದ್ರಾವತಿ: ಹೊಸಮನೆ ಹಿಂದೂ ಮಹಾಸಭಾ ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿಯಿಂದ ಪ್ರತಿಷ್ಠಾಪಿಸಲಾಗಿರುವ 53ನೇ ವರ್ಷದ ಗಣೇಶ ಮೂರ್ತಿ (ganesh chaturthi) ವಿಸರ್ಜನೆ ಇಂದು ನಡೆಯಲಿದೆ. ಇದಕ್ಕು ಮುನ್ನ ಅದ್ಧೂರಿ ಮೆರವಣಿಗೆ ನಡೆಯಲಿದೆ. ಹಾಗಾಗಿ ಭದ್ರಾವತಿಯಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಸಿದ್ಧತೆ ಪೂರ್ಣ, ಮೆರವಣಿಗೆಗೆ ರೆಡಿ
ಆರು ಅಡಿ ಎತ್ತರದ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಇವತ್ತು ಗಣಪತಿಯ ಮೆರವಣಿಗೆಗೆ ಸಕಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಪ್ರಮುಖ ವೃತ್ತಗಳಲ್ಲಿ ದ್ವಾರಬಾಗಿಲುಗಳನ್ನು ನಿರ್ಮಿಸಲಾಗಿದೆ. ಫ್ಲೆಕ್ಸ್, ಕೇಸರಿ ಧ್ವಜ ಕಟ್ಟಲಾಗಿದೆ. ಹೊಸಮನೆ ಮುಖ್ಯ ರಸ್ತೆ, ರಾಜ್ಕುಮಾರ್ ರಸ್ತೆ, ಬಿ.ಎಚ್. ರಸ್ತೆ ಸೇರಿದಂತೆ ಮೆರವಣಿಗೆ ಸಾಗುವ ಮಾರ್ಗಗಳು ಕೇಸರಿಮಯವಾಗಿ ಕಂಗೊಳಿಸುತ್ತಿವೆ.

ಬಿಗಿ ಪೊಲೀಸ್ ಬಂದೋಬಸ್ತ್
ಮುನ್ನೆಚ್ಚರಿಕೆ ಕ್ರಮವಾಗಿ ಭದ್ರಾವತಿಯಲ್ಲಿ ಇವತ್ತು ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗುತ್ತಿದೆ. ಮೂವರು ಎಸ್ಪಿ, 5 ಎಎಸ್ಪಿ ನೇತೃತ್ವದಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಡಿವೈಎಸ್ಪಿ–17, ಸಿಪಿಐ– 34, ಪಿಎಸ್ಐ– 23, ಕಾನ್ಸ್ಟೆಬಲ್–1,750.

ಗೃಹರಕ್ಷಕದಳ–220, ಕೆಎಸ್ಆರ್ಪಿ ತುಕಡಿ– 8, ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ –8 ತುಕಡಿ, ಕ್ಷಿಪ್ರ ಕಾರ್ಯಪಡೆ ತುಕಡಿ –1, ವಿಶೇಷ ಕಾರ್ಯಪಡೆ ತುಕಡಿ –1 ಹಾಗೂ 100 ದ್ರೋಣ್ ನಿರ್ವಾಹಕರು ಮತ್ತು ವಿಡಿಯೊ ಚಿತ್ರೀಕರಣಕ್ಕೆ 50 ವಿಡಿಯೊಗ್ರಾಫರ್ ಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ » ಆಧಾರ್ ಕಾರ್ಡ್ ಕುರಿತು ಮಹತ್ವದ ಅಪ್ಡೇಟ್, ಈಗಲೆ ದಾಖಲೆ ಒದಗಿಸುವಂತೆ ಸಾರ್ವಜನಿಕರಿಗೆ ಸೂಚನೆ
