ಗಾಂಧಿ ಬಜಾರ್‌ನಲ್ಲಿ ಹೇಗಿತ್ತು ಗಣಪತಿ ಮೆರವಣಿಗೆ? ಇಲ್ಲಿದೆ ಫೋಟೊ ಮಾಹಿತಿ

ಶಿವಮೊಗ್ಗ: ಗಾಂಧಿ ಬಜಾರ್‌ನಲ್ಲು ಹಿಂದೂ ಮಹಾಸಭಾ ಗಣಪತಿಯ (Ganesh) ರಾಜಬೀದಿ ಉತ್ಸವ ಅದ್ಧೂರಿಯಾಗಿ ನಡೆಯಿತು. ದೊಡ್ಡ ಸಂಖ್ಯೆಯ ಜನರು ಈ ಬಾರಿ ಮೆರವಣಿಗೆಯಲ್ಲಿ ಪಾಲ್ಗೊಂಡು, ಗಣೇಶನ ದರ್ಶನ ಪಡೆದರು.

ಭಾರಿ ಸಂಖ್ಯೆಯ ಜನರು ಈ ಬಾರಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಈ ಬಾರಿ ಮಹಿಳೆಯರು, ಕುಟುಂಬದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ವಿಶೇಷ.

ಬಿಗಿ ಬಂದೋಬಸ್ತ್‌

ಗಾಂಧಿ ಬಜಾರ್‌ನಲ್ಲಿ ಈ ಬಾರಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು. ಸುನ್ನಿ ಜಾಮಿಯ ಮಸೀದಿ ಮುಂಭಾಗ ಆರ್‌ಎಎಫ್‌, ಕೆಎಸ್‌ಆರ್‌ಪಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಇನ್ನು, ಶಾಸಕ ಎಸ್.ಎನ್.ಚನ್ನಬಸಪ್ಪ ಮಸೀದಿ ಮುಂಭಾಗ ನಿಂತು ಕಾರ್ಯಕರ್ತರನ್ನು ಮಾತನಾಡಿಸುತ್ತಿದ್ದರು.

ಇದನ್ನೂ ಓದಿ » ಕೋಟೆ ರಸ್ತೆಯಲ್ಲಿ ಹೇಗಿತ್ತು ಗಣಪತಿ ಮೆರವಣಿಗೆ? ಇಲ್ಲಿದೆ ಫೋಟೊ ಮಾಹಿತಿ

Hindu Mahasabha ganesh in Gandhi Bazaar
ಶಿವಮೊಗ್ಗದ ಗಾಂಧಿ ಬಜಾರ್‌ನಲ್ಲಿ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ.
Hindu Mahasabha ganesh in Gandhi Bazaar
ಗಾಂಧಿ ಬಜಾರ್‌ ಮುಖ್ಯರಸ್ತೆಗೆ ಹೊಂದಿಕೊಂಡಿರುವ ರಸ್ತೆಗಳನ್ನು ಬಂದ್‌ ಮಾಡಲಾಗಿತ್ತು.
Hindu Mahasabha ganesh in Gandhi Bazaar
ಗಾಂಧಿ ಬಜಾರ್‌ನ ಸುನ್ನಿ ಜಾಮಿಯಾ ಮಸೀದಿ ಮುಂಭಾಗ ಎಸ್‌ಪಿ ಮಿಥುನ್‌ ಕುಮಾರ್‌ ನೇತೃತ್ವದಲ್ಲಿ ಭದ್ರತೆ ಪರಿಶೀಲನೆ.
Hindu Mahasabha ganesh in Gandhi Bazaar
ಗಾಂಧಿ ಬಜಾರ್‌ನಲ್ಲಿ ದೊಡ್ಡ ಸಂಖ್ಯೆ ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
Hindu Mahasabha ganesh in Gandhi Bazaar
ಗಾಂಧಿ ಬಜಾರ್‌ನಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಎಸ್‌ಎಎಫ್‌ ಪಡೆ.
Hindu Mahasabha ganesh in Gandhi Bazaar
ಸುನ್ನಿ ಜಾಮಿಯಾ ಮಸೀದಿ ಮುಂಭಾಗ ಆರ್‌ಎಎಫ್‌ ನಿಯೋಜಿಸಲಾಗಿತ್ತು.
Hindu Mahasabha ganesh in Gandhi Bazaar
ಕರ್ತವ್ಯ ನಿರತ ಆರ್‌ಎಎಫ್‌ ಪಡೆ ಸಿಬ್ಬಂದಿ.
Hindu Mahasabha ganesh in Gandhi Bazaar
ಗಾಂಧಿ ಬಜಾರ್‌ನಲ್ಲಿ ಮಹಿಳೆಯರ ಘೋಷಣೆ, ನೃತ್ಯ.
Hindu Mahasabha ganesh in Gandhi Bazaar
ಕೇಸರಿ ಶಾಲು ಹಿಡಿದು ಸಾಗಿದ ಯುವಕರು.
Hindu Mahasabha ganesh in Gandhi Bazaar
ಧ್ವಜ ಬೀಸುತ್ತ, ಘೋಷಣೆ ಕೂಗುತ್ತ ಸಾಗಿದ ಮಕ್ಕಳು.
Hindu Mahasabha ganesh in Gandhi Bazaar
ಜನರತ್ತ ಕೈ ಬೀಸಿದ ಶಾಸಕ ಚನ್ನಬಸಪ್ಪ, ಜೀಜಾಬಾಯಿ, ಶಿವಾಜಿ ವೇಷಧಾರಿ ಮಕ್ಕಳು. ಕೇಸರಿ ಶಾಲು ತಿರುಗಿಸುತ್ತ ಸಾಗಿದ ಯುವಕರು.
Hindu Mahasabha ganesh in Gandhi Bazaar
ಶಾಸಕ ಎಸ್‌.ಎನ್.ಚನ್ನಬಸಪ್ಪ ಅವರನ್ನ ಹೆಗಲ ಮೇಲೆ ಹೊತ್ತು ಸಾಗಿದ ಯುವಕರು.
Hindu Mahasabha ganesh in Gandhi Bazaar
ಹಿಂದೂ ಮಹಾಸಭಾಗ ಗಣಪತಿ ದರ್ಶನ ಪಡೆದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಕೆ.ಈ.ಕಾಂತೇಶ್‌.
Hindu Mahasabha ganesh in Gandhi Bazaar
ಗಾಂಧಿ ಬಜಾರ್‌ನಲ್ಲಿ ಐಜಿಪಿ ರವಿಕಾಂತೇಗೌಡ, ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌.
Hindu Mahasabha ganesh in Gandhi Bazaar
ಯುವಕರ ಗುಂಪನ್ನು ನಿಯಂತ್ರಿಸಿದ ಎಸ್‌ಎಎಫ್‌ ಮತ್ತು ಮಫ್ತಿಯಲ್ಲಿದ್ದ ಪೊಲೀಸರು.

Hindu Mahasabha Ganesh in Gandhi Bazaar

Prashanth-Loan-Advertisement.

ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : September 7, 2025 at 5:00 PM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಸೆಪ್ಟೆಂಬರ್ 7, 2025

Leave a Comment