ಸಾಗರ ತಾಲೂಕನ್ನು ಜಿಲ್ಲಾ ಕೇಂದ್ರ ಮಾಡುವಂತೆ ಪಟ್ಟು, ಭಾರಿ ಪ್ರತಿಭಟನೆಯ ದಿನಾಂಕ ಪ್ರಕಟ

ಸಾಗರ: ಸಾಗರ ತಾಲೂಕನ್ನು ಜಿಲ್ಲಾ ಕೇಂದ್ರವನ್ನಾಗಿ (District) ಘೋಷಿಸುವಂತೆ ಒತ್ತಾಯಿಸಿ ಸೆ.18 ರಂದು ನಗರದಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರಮುಖರು, ಸಂಘ ಸಂಸ್ಥೆಗಳ ಪ್ರತಿನಿಧಿಗಳಿಂದ ಪಕ್ಷಾತೀತ ಪ್ರತಿಭಟನೆ ನಡೆಯಲಿದೆ ಎಂದು ಸಾಗರ ಜಿಲ್ಲಾ ಹೋರಾಟ ಸಂಚಾಲನಾ ಸಮಿತಿಯ ಪ್ರಮುಖ ತೀ.ನ. ಶ್ರೀನಿವಾಸ್ ತಿಳಿಸಿದ್ದಾರೆ.

ಸಾಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತೀ.ನ.ಶ್ರೀನಿವಾಸ್‌, ಪ್ರತಿಭಟನೆಯ ಸ್ವರೂಪ ತಿಳಿಸಿದರು.

ಹೇಗಿರಲಿದೆ ಪ್ರತಿಭಟನೆ?

POINT-1ಸಾಗರ ತಾಲೂಕಿಗೆ ಜಿಲ್ಲಾ ಕೇಂದ್ರವಾಗುವ ಎಲ್ಲಾ ಅರ್ಹತೆ ಇದೆ. 1956ರಿಂದಲೇ ಸಾಗರ ಉಪವಿಭಾಗೀಯ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿದೆ. ಕೆಳದಿ ಅರಸರು ಸಾಗರ ಕೇಂದ್ರವಾಗಿಟ್ಟುಕೊಂಡು ಆಡಳಿತ ನಡೆಸಿದ ಇತಿಹಾಸ ಕಣ್ಣೆದುರು ಇದೆ. ಹೀಗಾಗಿ ಸಾಗರವನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸುವತ್ತ ರಾಜ್ಯ ಸರ್ಕಾರ ಶೀಘ್ರ ತೀರ್ಮಾನ ಕೈಗೊಳ್ಳಬೇಕು ಎಂದು  ಒತ್ತಾಯಿಸಿದರು.

POINT-2ಸಾಗರವನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸಿದರೆ ಸೊರಬ, ಹೊಸನಗರ ತಾಲೂಕಿನ ಜನರಿಗೂ ಅನುಕೂಲವಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕನ್ನು ನೂತನ ಜಿಲ್ಲೆಯ ವ್ಯಾಪ್ತಿಗೆ ಸೇರಿಸುವ ಸಾಧ್ಯತೆ ಪರಿಶೀಲಿಸಬೇಕು.

Sagara-district-protest-in-shimoga.
ಸಾಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಬೇಕು ಎಂಬ ಹೋರಾಟದ ಕುರಿತು ಜಾಗೃತಿ ಮೂಡಿಸುವ ಕರಪತ್ರ ಬಿಡುಗಡೆ ಮಾಡಲಾಯಿತು.

POINT-3ಸಾಗರ ಜಿಲ್ಲಾ ಕೇಂದ್ರವಾಗಬೇಕು ಎಂಬ ಹೋರಾಟಕ್ಕೆ ಕ್ಷೇತ್ರದ ಹಾಲಿ ಶಾಸಕರು, ಮಾಜಿ ಸಚಿವರು ಬೆಂಬಲ ಸೂಚಿಸಿರುವುದು ಬಲ ತಂದಿದೆ. ಸರ್ಕಾರ ಜನರ ಭಾವನೆಗಳಿಗೆ ಸ್ಪಂದಿಸಬೇಕು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಕಲಸೆ ಚಂದ್ರಪ್ಪ, ಕನ್ನಪ್ಪ ಬೆಳಲಮಕ್ಕಿ, ಮಹ್ಮದ್ ಖಾಸಿಂ, ನಾಗರಾಜ್, ಎಂ.ಹೆಚ್.ರಮೇಶ್, ಶ್ರೀಧರ್, ಬಸವರಾಜ್, ಹೆಚ್.ಬಿ. ರಾಘವೇಂದ್ರ, ಗಲ್ಲಿ ವೆಂಕಟೇಶ್, ಕೆ.ವಿ. ಜಯರಾಮ್ ಇದ್ದರು.

Prashanth-Loan-Advertisement.

ಇದನ್ನೂ ಓದಿ » ವೈರಲ್‌ ವಿಡಿಯೋ, ಕಾರಿನ ಸನ್‌ ರೂಫ್‌ನಲ್ಲಿ ನಿಂತು ರೈಲ್ವೆ ಬ್ಯಾರಿಯರ್‌ ತಲೆಗೆ ಬಡಿಸಿಕೊಂಡ ಬಾಲಕ, ಮುಂದೇನಾಯ್ತು?

protest for sagara District

Sagara-district-protest-in-shimoga.

Leave a Comment