ರಿಯಾಯತಿ ದರದಲ್ಲಿ ದಂಡ ಪಾವತಿ, ಇನ್ನೊಂದೇ ದಿನ ಬಾಕಿ, ಈವರೆಗೂ ಶಿವಮೊಗ್ಗ ಜಿಲ್ಲೆಯಲ್ಲಿ ಎಷ್ಟು ಫೈನ್‌ ಕಟ್ಟಲಾಗಿದೆ?

ಶಿವಮೊಗ್ಗ: ಸಂಚಾರ (Traffic) ನಿಯಮಗಳ ಉಲ್ಲಂಘಿಸಿದ್ದವರಿಗೆ ಶೇ.50ರ ರಿಯಾಯಿತಿ ದರದಲ್ಲಿ ದಂಡ ಪಾವತಿಸಲು ಸರ್ಕಾರ ಆವಕಾಶ ನೀಡಿದೆ. ಡಿಸ್ಕೌಂಟ್‌ ಅವಧಿ ಮುಗಿಯಲು ಇನ್ನೊಂದು ದಿನ ಬಾಕಿ ಇದ್ದು ಶಿವಮೊಗ್ಗ ಜಿಲ್ಲೆಯಲ್ಲಿ ಸಾವಿರಾರು ಜನರು ದಂಡ ಪವಾತಿಸಿದ್ದಾರೆ. ಈವರೆಗೆ ₹4.09 ಕೋಟಿ ದಂಡ ಸಂಗ್ರಹಿಸಲಾಗಿದೆ.

ಜಿಲ್ಲೆಯಲ್ಲಿ ಎಷ್ಟಿತ್ತು ಪ್ರಕರಣ? ಈಗೆಷ್ಟಿದೆ?

ಶಿವಮೊಗ್ಗ ಜಿಲ್ಲೆಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ 2,94,181 ಪ್ರಕರಣಗಳಿದ್ದು, ದಂಡದ ಮೊತ್ತ ₹23,37,67,500 ಇತ್ತು. ಈ ಪೈಕಿ 56,199 ಪ್ರಕರಣಗಳಲ್ಲಿ ಶೇ.50ರ ರಿಯಾಯತಿ ದರದಲ್ಲಿ ₹4,09,02,500 ದಂಡ ಪಾವತಿಸಲಾಗಿದೆ. ಇನ್ನೂ 2,37,982 ಪ್ರಕರಣಗಳಲ್ಲಿ ₹19,28,65,000 ದಂಡ ಬಾಕಿ ಇದೆ ಎಂದು ತಿಳಿಸಲಾಗಿದೆ.

ಇನ್ನೊಂದೇ ದಿನ ಬಾಕಿ

raffic-Fine-by-police
ಶಿವಮೊಗ್ಗದ ದುರ್ಗಿಗುಡಿಯಲ್ಲಿ ಸಂಚಾರ ಪೊಲೀಸರ ಬಳಿ ದಂಡ ಪಾವತಿಸುತ್ತಿರುವ ವಾಹನ ಸವಾರರು.

ಶೇ.50ರ ರಿಯಾಯಿತಿ ದರದಲ್ಲಿ ದಂಡ ಪಾವತಿಸಲು ಆ.23ರಿಂದ ಸೆ.12ರವರೆಗೆ ಸರ್ಕಾರ ಅವಕಾಶ ಕಲ್ಪಿಸಿದೆ. ಡಿಸ್ಕೌಂಟ್‌ ದರದಲ್ಲಿ ದಂಡ ಕಟ್ಟಲು ಇನ್ನೊಂದೇ ದಿನ ಬಾಕಿ ಇದೆ. ಹಾಗಾಗಿ ಇವತ್ತೂ ದೊಡ್ಡ ಸಂಖ್ಯೆಯ ಜನರು ಸಂಚಾರ ಪೊಲೀಸರನ್ನು ಬಳಿ ತೆರಳಿ ದಂಡ ಕಟ್ಟುತ್ತಿದ್ದಾರೆ.

ಟ್ರಾಫಿಕ್‌ ಠಾಣೆ ನ್ಯಾಯಾಧೀಶರ ಭೇಟಿ

ನ್ಯಾ.ಸಂತೋಷ್.ಎಂ.ಎಸ್ ಶಿವಮೊಗ್ಗ ನಗರದ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಗೆ ಅನಿರೀಕ್ಷಿತ ಭೇಟಿ ನೀಡಿದ್ದರು.
ನ್ಯಾ.ಸಂತೋಷ್.ಎಂ.ಎಸ್ ಶಿವಮೊಗ್ಗ ನಗರದ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಗೆ ಅನಿರೀಕ್ಷಿತ ಭೇಟಿ ನೀಡಿದ್ದರು.

ಶಿವಮೊಗ್ಗ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಸಂತೋಷ್.ಎಂ.ಎಸ್ ಶಿವಮೊಗ್ಗ ನಗರದ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಗೆ ಅನಿರೀಕ್ಷಿತ ಭೇಟಿ ನೀಡಿದ್ದರು. ಈ ಚಲಾನ್ ಮೂಲಕ ವಿಧಿಸಲಾದ ದಂಡದ ಪಾವತಿಯಲ್ಲಿನ ಪ್ರಗತಿ ಪರಿಶೀಲಿಸಿದರು. ಈ ಸಂದರ್ಭ ಸಂಚಾರ ಠಾಣೆ ಇನ್ಸ್‌ಪೆಕ್ಟರ್‌ ಟಿ.ವಿ.ದೇವರಾಜ್‌, ಸಬ್‌ ಇನ್ಸ್‌ಪೆಕ್ಟರ್‌ ತಿರುಮಲೇಶ ಇದ್ದರು.

ಇದನ್ನೂ ಓದಿ » ಸಾಗರ ತಾಲೂಕನ್ನು ಜಿಲ್ಲಾ ಕೇಂದ್ರ ಮಾಡುವಂತೆ ಪಟ್ಟು, ಭಾರಿ ಪ್ರತಿಭಟನೆಯ ದಿನಾಂಕ ಪ್ರಕಟ

raffic-Fine-by-police

Leave a Comment