NEWS HIGHLIGHTS
ಸೊರಬ: ಅಪರಿಚಿತ ವಾಹನ ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ಏಳು ತಿಂಗಳ ಹೆಣ್ಣು ಚಿರತೆ (Leopard) ಮರಿ ಸಾವನ್ನಪ್ಪಿದೆ. ಸೊರಬ ತಾಲೂಕು ಉಳುವಿ – ಸಾಗರ ರಸ್ತೆಯ ಅವಲುಗೋಡು ಬಳಿ ಘಟನೆ ಸಂಭವಿಸಿದೆ.
➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.ಬುಧವಾರ ರಾತ್ರಿ ವಾಹನ ಡಿಕ್ಕಿಯಾಗಿ ಗಾಯಗೊಂಡಿದ್ದ ಚಿರತೆ ಮರಿ ಸ್ಥಳದಲ್ಲೆ ಸಾವನ್ನಪ್ಪಿದೆ. ವಿಷಯ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್ ಕುಳ್ಳೊಳ್ಳಿ, ಉಪ ವಲಯ ಅರಣ್ಯಾಧಿಕಾರಿ ಭದ್ರೇಶ್, ಉಳಿವಿಯ ಪಶು ವೈದ್ಯಾಧಿಕಾರಿ, ಅರಣ್ಯ ಸಿಬ್ಬಂದಿ ಇದ್ದರು.

ಇದನ್ನೂ ಓದಿ » ಆನವಟ್ಟಿಯಲ್ಲಿ ಬಸ್ ಅಡ್ಡಗಟ್ಟಿ ಚಾಲಕನಿಗೆ ತರಾಟೆ ತೆಗೆದುಕೊಂಡ ಜನ, ಕಾರಣವೇನು?