ಆನವಟ್ಟಿಯಲ್ಲಿ ಬಸ್‌ ಅಡ್ಡಗಟ್ಟಿ ಚಾಲಕನಿಗೆ ತರಾಟೆ ತೆಗೆದುಕೊಂಡ ಜನ, ಕಾರಣವೇನು?

ಆನವಟ್ಟಿ: ಬಸ್‌ ನಿಲ್ಲಿಸದ್ದಕ್ಕೆ ವಾಯುವ್ಯ ಕರ್ನಾಟಕ ಸಾರಿಗೆ ಬಸ್‌ ಅಡ್ಡಗಟ್ಟಿ ಚಾಲಕ (Driver) ಮತ್ತು ನಿರ್ವಾಹಕರಿಗೆ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಟಾಪ್‌ನಲ್ಲಿ ಬಸ್‌ ನಿಲ್ಲಿಸದೆ ನಿಧಾನವಾಗಿ ಚಲಿಸಿ ವಿದ್ಯಾರ್ಥಿಗಳು, ಪ್ರಯಾಣಿಕರು ಓಡೋಡಿ ಬಂದು ಹತ್ತುವಂತೆ ಮಾಡಿದ್ದಕ್ಕೆ ಚಾಲಕನ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದರು.

ಆನವಟ್ಟಿಯ ನೃಪತುಂಗ ಶಾಲೆ ಬಳಿ ಸ್ಟಾಪ್‌ ಇದ್ದರು ಹಾನಗಲ್‌ – ಮೈಸೂರು ಮಾರ್ಗದ ಬಸ್‌ ನಿಲ್ಲಿಸದೆ ನಿಧಾನಕ್ಕೆ ಚಲಿಸಿದೆ. ವಿದ್ಯಾರ್ಥಿಗಳು ಓಡೋಡಿ ಬಂದು ಬಸ್‌ ಹತ್ತುವಾಗ ಓರ್ವ ವಿದ್ಯಾರ್ಥಿ ಮತ್ತು ಮಹಿಳೆ ಆಯಾತಪ್ಪಿ ಬೀಳುವವರಿದ್ದರು. ಅಷ್ಟರಲ್ಲಿ ಉಳಿದ ಪ್ರಯಾಣಿಕರು ಅವರನ್ನು ರಕ್ಷಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಸಾರ್ವಜನಿಕರು ಬಸ್‌ ಅಡ್ಡಗಟ್ಟಿ ಚಾಲಕ, ನಿರ್ವಾಹಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ‘ಬಸ್ಸಿನಲ್ಲಿ ಹೆಚ್ಚು ಜನರಿದ್ದು ಜಾಗವಿಲ್ಲದ್ದರಿಂದ ನಿಲ್ಲಿಸಲಿಲ್ಲ’ ಎಂದು ಚಾಲಕ, ನಿರ್ವಾಹಕ ತಿಳಿಸಿದ್ದಾರೆ. ‘ಬಸ್ಸಿನ ಡೋರ್‌ ಹಾಕಿ ಚಲಿಸಬೇಕು. ಬಾಗಿಲು ತೆಗೆದು, ನಿಧಾನವಾಗಿ ಚಲಿಸಿದರೆ ವಿದ್ಯಾರ್ಥಿಗಳು ಓಡೋಡಿ ಬಂದು ಬಸ್‌ ಹತ್ತಲಿದ್ದಾರೆ. ಈ ಸಂದರ್ಭ ಅವರು ಆಯಾತಪ್ಪಿ ಬಿದ್ದು ಅನಾಹುತ ಸಂಭವಿಸಿದರೆ ಹೊಣೆ ಯಾರು’ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

soraba anavatti graphics

ಸ್ಥಳೀಯರಾದ ಸಂದೀಪ, ಪುಂಡಲೀಕ್‌, ಜನದನಿ ಸೇವಾ ಸಂಸ್ಥೆಯ ತಾಲ್ಲೂಕು ಘಟಕದ ಅಧ್ಯಕ್ಷ ವಿಜಯ್‌ ಕುಮಾರ್‌, ರಾಜ್ಯ ಗೆಳೆಯರ ಬಳಗದ ತಾಲ್ಲೂಕು ಘಟಕದ ಅಧ್ಯಕ್ಷ ದೇವರಾಜ್‌ ಎಂ. ದೊಡ್ಡಮನಿ ಸೇರಿ ಹಲವರು ಇದ್ದರು.

ಇದನ್ನೂ ಓದಿ » ರಿಯಾಯತಿ ದರದಲ್ಲಿ ದಂಡ ಪಾವತಿ, ಇನ್ನೊಂದೇ ದಿನ ಬಾಕಿ, ಈವರೆಗೂ ಶಿವಮೊಗ್ಗ ಜಿಲ್ಲೆಯಲ್ಲಿ ಎಷ್ಟು ಫೈನ್‌ ಕಟ್ಟಲಾಗಿದೆ?

locals argue with KSRTC Driver

soraba anavatti graphics

Leave a Comment