ಬಜರಂಗದಳ, ವಿಹೆಚ್‌ಪಿಯಿಂದ ಶಿವಮೊಗ್ಗ ಎಸ್‌ಪಿ ಕಚೇರಿ ಮುತ್ತಿಗೆಯ ಎಚ್ಚರಿಕೆ, ಕಾರಣವೇನು?

ಶಿವಮೊಗ್ಗ: ನಗರದಲ್ಲಿ ನಡೆದ ಈದ್‌ ಮಿಲಾದ್‌ ಮೆರವಣಿಗೆ (Procession) ವೇಳೆ ನೂರಕ್ಕೂ ಹೆಚ್ಚು ವಾಹನಗಳಲ್ಲಿ ಡಿಜೆ ಬಳಕೆ, ವಿದೇಶದ ಧ್ವಜಗಳ ಪ್ರದರ್ಶನ ಮಾಡಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗದಳದ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. (ಈ ಸುದ್ದಿಯನ್ನು ಇನ್ನು 100 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ವಿಹೆಚ್‌ಪಿ ಮತ್ತು ಬಜರಂಗದಳ ಕಾರ್ಯಕರ್ತರು, ಸೆ.15ರಂದು ಶಿವಮೊಗ್ಗ ನಗರದಲ್ಲಿ ನಡೆದ ಈದ್‌ ಮೆರವಣಿಗೆ ಸಂದರ್ಭ ನೂರಕ್ಕೂ ಹೆಚ್ಚು ಸಂಚಾರಿ ಡಿಜೆಗಳಿದ್ದವು. ವಿದೇಶಿ ಬಾವುಟಗಳನ್ನು ಕೂಡ ಪ್ರದರ್ಶಿಸಲಾಗಿದೆ. ಅಲ್ಲದೆ ಹೊರ ಜಿಲ್ಲೆಗಳಿಂದಲು ವಾಹನಗಳಲ್ಲಿ ಜನರು ಆಗಮಿಸಿದ್ದಾರೆ. ಇಷ್ಟಾದರು ಪೊಲೀಸ್‌ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಯಾರೆಲ್ಲ ಏನೆಲ್ಲ ಹೇಳಿದರು?

ಶಿವಮೊಗ್ಗದ ಮೆರವಣಿಗೆಯಲ್ಲಿ ಬಳಕೆಯಾದ ಡಿಜೆಗಳನ್ನು, ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಬೇಕು. ವಿದೇಶದ ಬಾವುಟಗಳ ಪ್ರದರ್ಶನ, ಪಾಕಿಸ್ತಾನ ಪರ ಘೋಷಣೆ ಕೂಗಿದವರನ್ನು ಬಂಧಿಸಬೇಕು. ಇಲ್ಲವಾದಲ್ಲಿ ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗದಳದ ವತಿಯಿಂದ ಜಿಲ್ಲಾ ರಕ್ಷಣಾಧಿಕಾರಿ ಕಚೇರಿ ಮುತ್ತಿಗೆ ಹಾಕಲಾಗುತ್ತದೆ.

  • ರಾಜೇಶ್‌ ಗೌಡ, ಬಜರಂಗದಳ ಜಿಲ್ಲಾ ಸಂಚಾಲಕ

ಹಬ್ಬಗಳ ಮುಂಚೆ ಶಾಂತಿ ಸಭೆ ಕರೆಯುವ ಉದ್ದೇಶವೇನು. ಈ ಬಾರಿ ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ ಪ್ರತ್ಯೇಕ ಸಭೆ ಕರೆದಿದ್ದಾರೆ. ಸರ್ಕಾರಕ್ಕೆ ವರದಿ ಕೊಡವುದು ಮಾತ್ರವೆ ಈ ಸಭೆಯ ಉದ್ದೇಶವೆ? ಅಲಂಕಾರದ ವಿಚಾರವಾಗಿ ಚರ್ಚೆ ನಡೆಸಿದಾಗ ನೀಡಿದ ಸೂಚನೆಗಳು ಹಿಂದೂಗಳಿಗೆ ಮಾತ್ರ ಸೀಮಿತವಾ?

  • ರಮೇಶ್‌ ಬಾಬು ಜಾಧವ್‌, ವಿಹೆಚ್‌ಪಿ ಸಾಮರಸ್ಯ ಪ್ರಮುಖ

ಮೆರವಣಿಗೆ ಹಾದಿ ಉದ್ದಕ್ಕು ಡಿಜೆ ಬಳಕೆ ಮಾಡಿದ್ದಾರೆ. ಡಿಜೆ ಶಬ್ದಕ್ಕೆ ಪೊಲೀಸರೆ ಕಿವಿ ಹಾಳು ಮಾಡಿಕೊಂಡು ಅಸಹಾಯಕರಾಗಿದ್ದರು‌. ಜಿಹಾದಿ ಮಾನಸಿಕತೆಯ ಸರ್ಕಾರವೆ ಇದಕ್ಕೆ ಕಾರಣ.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ

  • ಸುರೇಶ್‌ ಬಾಬು, ಬಜರಂಗದಳ ಜಿಲ್ಲಾ ಸಹ ಸಂಚಾಲಕ

ಅಪರ ಜಿಲ್ಲಾಧಿಕಾರಿ ಅಭಿಷೇಕ್‌ ಅವರಿಗೆ ಮನವಿ ಸಲ್ಲಿಸಲಾಯಿತು. ವಿಹೆಚ್‌ಪಿ ನಗರ ಅಧ್ಯಕ್ಷ ವಿನೋದ್‌ ಕುಮಾರ್‌ ಜೈನ್‌, ಪ್ರಮುಖರಾದ ದೀನದಯಾಳು ಸೇರಿದಂತೆ ಹಲವರು ಪ್ರತಿಭಟನೆಯಲ್ಲಿದ್ದರು.

Bajarangadal-and-VHP-protest-in-Shimoga-against-Eid-Milad-Procession-DJ.

Bajarangadal VHP Protest

ಇದನ್ನೂ ಓದಿ » ಅಡಿಕೆ ಧಾರಣೆ | 16 ಸೆಪ್ಟೆಂಬರ್‌ 2025 | ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್?

Protest against DJ in Eid Procession

Bajarangadal-and-VHP-protest-in-Shimoga-against-Eid-Milad-DJ.

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Leave a Comment