ಶಿವಮೊಗ್ಗ – ಬೆಂಗಳೂರು ವಿಮಾನ, ಗುಡ್‌ ನ್ಯೂಸ್‌ ಕೊಟ್ಟರು ಸಂಸದ ರಾಘವೇಂದ್ರ

ಶಿವಮೊಗ್ಗ: ದಸರಾ ಹಬ್ಬದ ಸಂದರ್ಭ ಶಿವಮೊಗ್ಗದ ಪ್ರಯಾಣಿಕರಿಗೆ ಇಂಡಿಗೋ ವಿಮಾನಯಾನ (FLIGHT) ಸಂಸ್ಥೆ ಗುಡ್ ನ್ಯೂಸ್ ನೀಡಿದೆ. ಇನ್ಮುಂದೆ ವಾರದ ಎಲ್ಲ ದಿನವು ಶಿವಮೊಗ್ಗಕ್ಕೆ ವಿಮಾನ ಹಾರಲಿದೆ ಎಂದು ತಿಳಿಸಿದೆ.

ಸುದ್ದಿಯ ಮುಂದಿನ ಭಾಗ ಕೆಳಗಿದೆ

ಈ ಸಂಬಂಧ ಸಂಸದ ರಾಘವೇಂದ್ರ ಮಾಹಿತಿ ನೀಡಿದ್ದು, ಈವರೆಗು ಬೆಂಗಳೂರು – ಶಿವಮೊಗ್ಗ ಮಧ್ಯೆ ಇಂಡಿಗೋ ಸಂಸ್ಥೆ ದಿನ ಬಿಟ್ಟು ದಿನ ಸೇವೆ ಒದಗಿಸುತ್ತಿತ್ತು. ಸೆ.21ರಿಂದ ಇಂಡಿಗೋ ವಿಮಾನ ಪ್ರತಿದಿನ ಹಾರಾಟ ನಡೆಸಲಿದೆ ಎಂದು ತಿಳಿಸಿದ್ದಾರೆ.

ಇಂಡಿಗೋ ವಿಮಾನ ಪ್ರತಿದಿನ ಬೆಳಗ್ಗೆ 9.35ಕ್ಕೆ ಬೆಂಗಳೂರಿನಿಂದ ಹೊರಡಲಿದೆ. ಬೆಳಗ್ಗೆ 10.45ಕ್ಕೆ ಶಿವಮೊಗ್ಗ ತಲುಪಲಿದೆ. ಶಿವಮೊಗ್ಗದಿಂದ ಬೆಳಗ್ಗೆ 11.05ಕ್ಕೆ ಹೊರಟು ಮಧ್ಯಾಹ್ನ 12.05ಕ್ಕೆ ಬೆಂಗಳೂರು ತಲುಪಲಿದೆ ಎಂದು ಸಂಸದ ರಾಘವೇಂದ್ರ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಪ್ರಕಟಿಸಿದ್ದಾರೆ.

Nanjappa Hospital Advertisement

MP-BY-raghavendra-about-Shimoga-Airport-Flight

ಇದರಿಂದ ಮಲೆನಾಡು ಭಾಗದ ಆರ್ಥಿಕ ಬೆಳವಣಿಗೆಗೆ ಅನುಕೂಲವಾಗಲಿದೆ. ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು, ಇಂಡಿಗೋ ಸಂಸ್ಥೆಗೆ ಧನ್ಯವಾದ ತಿಳಿಸುತ್ತೇನೆ.

  • ಬಿ.ವೈ.ರಾಘವೇಂದ್ರ, ಸಂಸದ

RED-LINE-

ಇದನ್ನೂ ಓದಿ » ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಜ್ಯ ಸರ್ಕಾರದಿಂದ ₹6.50 ಕೋಟಿ

Indigo to operate daily flight between Bangalore Shimoga
📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
Shivamogga Live Promotion

Leave a Comment