ಶಿವಮೊಗ್ಗ ದಸರಾ: ನಾಡ ದೇವಿ ಚಾಮುಂಡೇಶ್ವರಿಯ ವೈಭವದ ಅಂಬಾರಿ ಮೆರವಣಿಗೆಗೆ ಈ ಬಾರಿಯು ಸಕ್ರೆಬೈಲು ಬಿಡಾರದ ಮೂರು ಆನೆಗಳು ಆಗಮಿಸಲಿವೆ. ಇವತ್ತು ಆನೆಗಳಿಗೆ ಪೂಜೆ ಸಲ್ಲಿಸಿ ಆಹ್ವಾನ ನೀಡಲಾಯಿತು. ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.
ಶಾಸಕ ಎಸ್.ಎನ್.ಚನ್ನಬಸಪ್ಪ ನೇತೃತ್ವದಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು, ಮಾಜಿ ಕಾರ್ಪೊರೇಟರ್‌ಗಳು ಸಕ್ರೆಬೈಲು ಬಿಡಾರಕ್ಕೆ ತೆರಳಿ ಆನೆಗಳಿಗೆ ಪೂಜೆ ಸಲ್ಲಿಸಿ ಆಹ್ವಾನ ನೀಡಿದರು.
ಸಾಗರ ನೇತೃತ್ವದಲ್ಲಿ ಮೂರು ಆನೆಗಳು
ಇದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್.ಎನ್.ಚನ್ನಬಸಪ್ಪ, ಈ ಬಾರಿಯು ಮೂರು ಆನೆಗಳು ಆಗಮಿಸಲಿವೆ. ಸಾಗರ ಆನೆ ಶ್ರೀ ಚಾಮುಂಡೇಶ್ವರಿ ದೇವಿಯ ಬೆಳ್ಳಿ ವಿಗ್ರಹವಿರುವ ಅಂಬಾರಿ ಹೊರಲಿದೆ. ಬಾಲಣ್ಣ ಮತ್ತು ಕುಂತಿ ಆನೆಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ ಎಂದು ತಿಳಿಸಿದರು.
ಇಲ್ಲಿ ಕ್ಲಿಕ್ ಮಾಡಿ ಹೆಸರು ನೋಂದಾಯಿಸಿ

ಸಕ್ರೆಬೈಲಿನಲ್ಲಿ ಆನೆಗಳ ಪೂಜೆ ವೇಳೆ ಮಹಾನಗರ ಪಾಲಿಕೆ ಕಮಿಷನರ್ ಮಾಯಣ್ಣಗೌಡ ಸೇರಿದಂತೆ ಹಲವರು ಇದ್ದರು.

ಇದನ್ನೂ ಓದಿ » ಶಿವಮೊಗ್ಗ ದಸರಾಗೆ ಸಾಲು ಸಾಲು ಸಿನಿಮಾ ಸ್ಟಾರ್‌ಗಳು , ಈ ಬಾರಿ ಯಾರೆಲ್ಲ ಬರ್ತಿದ್ದಾರೆ? ಯಾವೆಲ್ಲ ಸಿನಿಮಾ ಇರಲಿದೆ?

Shivamogga, Dasara, Sakrebailu, elephants, festival, participation, event, tourism, local news, Karnataka.
