ಮೈಸೂರು – ಶಿವಮೊಗ್ಗ, ತಾಳಗುಪ್ಪ – ಮೈಸೂರು ಎಕ್ಸ್‌ಪ್ರೆಸ್‌ ರೈಲುಗಳು ಮಾರ್ಗ ಮಧ್ಯೆ ನಿಯಂತ್ರಣ, ಯಾವಾಗ?

ರೈಲ್ವೆ ಸುದ್ದಿ: ಮಾವಿನಕೆರೆ ಮತ್ತು ಹೊಳೆನರಸೀಪುರ ರೈಲು ನಿಲ್ದಾಣಗಳಲ್ಲಿ ಹಳಿಗಳ ನವೀಕರಣ ಕಾಮಗಾರಿ ನಡೆಸಲಾಗುತ್ತಿದೆ. ಆದ್ದರಿಂದ ಕೆಲವು ರೈಲುಗಳ (Trains) ಸಂಚಾರದಲ್ಲಿ ನಿಯಂತ್ರಣವಾಗಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಯಾವೆಲ್ಲ ರೈಲು ಸಂಚಾರದಲ್ಲಿ ನಿಯಂತ್ರಣ?

ಸೆಪ್ಟೆಂಬರ್ 22, 23 ಮತ್ತು 24ರಂದು ಮೈಸೂರಿನಿಂದ ಹೊರಡುವ ರೈಲು ಸಂಖ್ಯೆ 16225 ಮೈಸೂರು – ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ಮಾರ್ಗ ಮಧ್ಯದಲ್ಲಿ 60 ನಿಮಿಷ ನಿಯಂತ್ರಣವಾಗಲಿದೆ. ಅದೇ ರೀತಿ, ಸೆಪ್ಟೆಂಬರ್ 26ರಂದು ಈ ರೈಲು 65 ನಿಮಿಷಗಳ ಕಾಲ ನಿಯಂತ್ರಣಕ್ಕೆ ಒಳಪಡಲಿದೆ.

Electric-Locomotive-train-for-Shimoga

ಸೆಪ್ಟೆಂಬರ್ 22, 23 ಮತ್ತು 24ರಂದು ಸಂಚರಿಸುವ ರೈಲು ಸಂಖ್ಯೆ 16221 ತಾಳಗುಪ್ಪ – ಮೈಸೂರು ಎಕ್ಸ್‌ಪ್ರೆಸ್ ರೈಲು ಕೂಡ ಮಾರ್ಗ ಮಧ್ಯದಲ್ಲಿ 40 ನಿಮಿಷಗಳ ಕಾಲ ನಿಯಂತ್ರಣಕ್ಕೆ ಒಳಗಾಗಲಿದೆ. ಸೆಪ್ಟೆಂಬರ್ 26ರಂದು ಇದೇ ರೈಲು 15 ನಿಮಿಷಗಳ ಕಾಲ ನಿಯಂತ್ರಣಗೊಳ್ಳಲಿದೆ.

JNNCE-Admission-Advt-scaled

ಇದನ್ನೂ ಓದಿ » ಸಕ್ರೆಬೈಲು ಆನೆಗಳಿಗೆ ಶಿವಮೊಗ್ಗ ದಸರಾಕ್ಕೆ ಆಹ್ವಾನ, ಯಾವೆಲ್ಲ ಆನೆಗಳು ಭಾಗವಹಿಸಲಿವೆ? ಇಲ್ಲಿದೆ ಡಿಟೇಲ್ಸ್‌

Shimoga, Talaguppa, Mysore, Trains, railway, 

Electric-Locomotive-train-for-Shimoga

Leave a Comment