ಶಿವಮೊಗ್ಗ ಲೈವ್
ಶಿವಮೊಗ್ಗ: ಲಾಟರಿಯಲ್ಲಿ ಬಹುಮಾನ (Prize) ಬಂದಿದೆ ಎಂದು ನಂಬಿಸಿ ಶಿವಮೊಗ್ಗದ ವ್ಯಕ್ತಿಯೊಬ್ಬರಿಗೆ ₹3.71 ಲಕ್ಷ ವಂಚಿಸಲಾಗಿದೆ. (ಈ ಸುದ್ದಿಯನ್ನು ಇನ್ನು 36 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಶಿವಮೊಗ್ಗದ ವ್ಯಕ್ತಿಯೊಬ್ಬರ ಫೇಸ್ಬುಕ್ಗೆ ಲಾಟರಿಯಲ್ಲಿ ₹30 ಲಕ್ಷ ಬಹುಮಾನ ಬಂದಿದೆ ಎಂದು ಮೆಸೇಜ್ ಬಂದಿತ್ತು. ಇದನ್ನು ನಂಬಿದ ಶಿವಮೊಗ್ಗದ ವ್ಯಕ್ತಿ ತಮ್ಮ ಮೊಬೈಲ್ ನಂಬರನ್ನು ರಿಪ್ಲೆ ಮಾಡಿದ್ದರು. ಬಳಿಕ ಮತ್ತೊಂದು ನಂಬರ್ನಿಂದ ವಾಟ್ಸಪ್ನಲ್ಲಿ ಮೆಸೇಜ್ ಬಂದಿದ್ದು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಲೋಗೊ ಬಳಸಿ ಬ್ಯಾಂಕ್ ಮ್ಯಾನೇಜರ್ ತಿಳಿಸಲಾಗಿತ್ತು.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಆನೆಗಳನ್ನು ನೋಡಲು ತಂಡೋಪತಂಡವಾಗಿ ಜನ ಆಗಮನ
ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ
ಬಹುಮಾನದ ಹಣಕ್ಕೆ ಸರ್ವಿಸ್ ಟ್ಯಾಕ್ಸ್, ಚಾರ್ಜ್ ಸೇರಿ ₹3.71 ಲಕ್ಷ ಹಣ ಕಟ್ಟಬೇಕು ಎಂದು ನಂಬಿಸಿ ವರ್ಗಾಯಿಸಿಕೊಂಡಿದ್ದಾರೆ. ಬಳಿಕ ತಾನು ಮೋಸ ಹೋಗಿರುವುದಾಗಿ ಶಿವಮೊಗ್ಗದ ವ್ಯಕ್ತಿಗೆ ಅರಿವಾಗಿದೆ. ಘಟನೆ ಸಂಬಂಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Prize scam in Shimoga

ಗೂಗಲ್ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ: