ಶಿವಮೊಗ್ಗದಲ್ಲಿ ಆನೆಗಳಿಗೆ ನಿತ್ಯ ಎರಡು ಬಾರಿ ತಾಲೀಮು, ಇದಕ್ಕಿದೆ ಎರಡು ಕಾರಣ, ಏನದು?

ದಸರಾ ಸುದ್ದಿ: ಶಿವಮೊಗ್ಗ ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿ. ಇದಕ್ಕಾಗಿ ಸಕ್ರೆಬೈಲಿನ ಮೂರು ಆನೆಗಳು (Elephants) ಈಗಾಗಲೇ ಶಿವಮೊಗ್ಗ ನಗರಕ್ಕೆ ಆಗಮಿಸಿದ್ದು, ಎರಡು ಸುತ್ತು ತಾಲೀಮು ನಡೆಸಿವೆ.

ಸಕ್ರೆಬೈಲು ಬಿಡಾರದ ಸಾಗರ್‌, ಬಾಲಣ್ಣ ಮತ್ತು ಬಹದ್ದೂರ್‌ ಆನೆಗಳು ಶಿವಮೊಗ್ಗ ದಸರಾದಲ್ಲಿ ಪಾಲ್ಗೊಳ್ಳಲು ಆಗಮಿಸಿವೆ. ಪ್ರತಿ ವರ್ಷದಂತೆ ಈ ಬಾರಿಯು ಸಾಗರ್‌ ಆನೆಯೆ ಅಂಬಾರ ಹೊರಲಿದ್ದಾನೆ.

ಎರಡು ಬಾರಿ ತಾಲೀಮು, ಕಾರಣವೇನು?

ಜಂಬೂ ಸವಾರಿಯ ಆನೆಗಳಿಗೆ ನಿತ್ಯ ಎರಡು ಬಾರಿ ತಾಲೀಮು ನಡೆಸಲಾಗುತ್ತಿದೆ. ವಾಸವಿ ಶಾಲೆ ಆವರಣದಿಂದ ಹೊರಡುವ ಆನೆಗಳು ಕೋಟೆ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್‌, ಗಾಂಧಿ ಬಜಾರ್‌, ಎ.ಎ.ವೃತ್ತ, ನೆಹರು ರಸ್ತೆ, ಗೋಪಿ ಸರ್ಕಲ್‌, ದುರ್ಗಿಗುಡಿ, ಜೈಲ್‌ ರಸ್ತೆ ಮೂಲಕ ಫ್ರೀಡಂ ಪಾರ್ಕ್‌ ತಲುಪುತ್ತಿವೆ. ಅಲ್ಲಿಂದ ವಾಪಸ್‌ ವಾಸವಿ ಶಾಲೆಗೆ ಮರಳುತ್ತಿವೆ.

Sakrebyle-Elephants-Practice-for-dasara-in-Shimoga-city

ಆನೆಗಳಿಗೆ ತಾಲೀಮು ನೀಡಲು ಎರಡು ಪ್ರಮುಖ ಕಾರಣವಿದೆ ಎಂದು ಪಶುವೈದ್ಯಾಧಿಕಾರಿ ಡಾ. ಕಲ್ಲಪ್ಪ ತಿಳಿಸಿದ್ದಾರೆ.

ಕಾರಣ 1: ಆನೆಗಳು ತಮ್ಮ ಗಡಿ ರೂಪಿಸಿಕೊಳ್ಳುತ್ತವೆ. ಈಗ ಸಿಟಿಗೆ ಬಂದಿರುವ ಆನೆಗಳಿಗೆ ಇದು ತಮ್ಮದೇ ಗಡಿ ಎಂದು ನಂಬಿಕೆ ಮೂಡಬೇಕು. ಇಲ್ಲಿ ಅವು ಸುರಕ್ಷಿತ ಎಂಬ ಭಾವನೆ ಬೆಳೆಯಬೇಕು. ಇದಕ್ಕಾಗಿ ತಾಲೀಮು ನಡೆಸಲಾಗುತ್ತಿದೆ.

ಕಾರಣ 2: ಕಾಡಿನಲ್ಲಿದ್ದ ಆನೆಗಳಿಗೆ ಪಟ್ಟಣದ ಗೌಜು, ಗದ್ದಲಕ್ಕೆ ಹೊಂದಿಕೊಳ್ಳಬೇಕು. ಇದಕ್ಕಾಗಿ ನಿರಂತರ ತಾಲೀಮು ಅಗತ್ಯ.

JNNCE-Admission-Advt-scaled

ಇದನ್ನೂ ಓದಿ » ಹಿರಿಯರ ಪೂಜೆ ಮುಗಿಸಿ ಸಂಬಂಧಿಕರು, ಸ್ನೇಹಿತರನ್ನು ಕಳುಹಿಸಿದ ಮೇಲೆ ಮನೆಯವರಿಗೆ ಕಾದಿತ್ತು ಬಿಗ್‌ ಶಾಕ್

Sakrebyle-Elephant-Practise-for-dasara-in-Shimoga-city

Leave a Comment