NEWS HIGHLIGHTS
ಶಿವಮೊಗ್ಗ: ಜನಶತಾಬ್ಬಿ (Jan Shatabdi) ರೈಲಿನಲ್ಲಿ ಮಂಗಳವಾರ ರಾತ್ರಿ ಪ್ರಯಾಣ ಮಾಡಿದ ಯುವತಿಯೊಬ್ಬರು ಬೋಗಿಯಲ್ಲೇ ಬಿಟ್ಟು ಹೋಗಿದ್ದ 1.24 ಲಕ್ಷ ರೂ. ಮೌಲ್ಯದ ಉತ್ಪನ್ನಗಳ ಬ್ಯಾಗನ್ನು ರೈಲ್ವೆ ಪೊಲೀಸರು ಸುರಕ್ಷಿತವಾಗಿ ವಾಪಸ್ ಮಾಡಿದ್ದಾರೆ.
➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.ಬೆಂಗಳೂರಿಂದ ಶಿವಮೊಗ್ಗಕ್ಕೆ ಬಂದ ಯುವತಿಯು ಬೋಗಿಯಲ್ಲೇ ಬ್ಯಾಗ್ ಮರೆತು ಹೋಗಿದ್ದರು. ಪ್ರಯಾಣಿಕರು ಇಳಿದು ಹೋದ ಬಳಿಕ ರೈಲ್ವೆ ರಕ್ಷಣಾ ದಳದ ಸಿಬ್ಬಂದಿ ಬೋಗಿಗಳನ್ನು ಪರಿಶೀಲಿಸುವ ಸಮಯದಲ್ಲಿ ಬ್ಯಾಗ್ ಪತ್ತೆಯಾಗಿತ್ತು.
ಬ್ಯಾಗ್ನಲ್ಲಿ ₹1.12 ಲಕ್ಷದ ಆಪಲ್ ಲ್ಯಾಪ್ಟಾಪ್, ₹10,000 ಮೌಲ್ಯದ ಕಾಸ್ಮೆಟಿಕ್ಸ್, ₹2,000 ನಗದು ಸೇರಿದಂತೆ ಒಟ್ಟು 1.24 ರೂ. ಮೌಲ್ಯದ ವಸ್ತುಗಳಿದ್ದವು. ಬ್ಯಾಗ್ ಪರಿಶೀಲನೆ ನಡೆಸಿ ಅದರ ವಾರಸುದಾರರನ್ನು ಪತ್ತೆ ಮಾಡಿ ಠಾಣೆಗೆ ಕರೆಸಿ ವಾಪಸ್ ನೀಡಿದ್ದಾರೆ.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಬಸ್ ಹತ್ತಿದ ಕೆಲವೇ ಕ್ಷಣದಲ್ಲಿ ಚನ್ನಗಿರಿಯ ವ್ಯಕ್ತಿಗೆ ಕಾದಿತ್ತು ಶಾಕ್, ಆಗಿದ್ದೇನು?
