ಶಿವಮೊಗ್ಗ ಲೈವ್
ಕುಂಸಿ: ಮಾರಕಾಸ್ತ್ರದಿಂದ ಚುಚ್ಚಿ ವೃದ್ಧೆಯೊಬ್ಬರನ್ನು (Woman) ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಶಿವಮೊಗ್ಗ ತಾಲೂಕು ಕುಂಸಿಯ ರಥಬೀದಿಯ ಮನೆಯಲ್ಲಿ ಘಟನೆ ಸಂಭವಿಸಿದೆ.
ಬಸಮ್ಮ (65) ಮೃತರು. ಮನೆಯಲ್ಲಿ ವೃದ್ಧೆ ಒಬ್ಬರೆ ವಾಸವಾಗಿದ್ದರು. ಶಿವಮೊಗ್ಗದಲ್ಲಿ ವಾಸವಾಗಿರುವ ಪುತ್ರ ಗುರುವಾರ ಮನೆಗೆ ಬಂದು ಬಾಗಿಲು ಬಡಿದರು ತೆಗೆದಿರಲಿಲ್ಲ. ಹೆಂಚು ತೆಗೆದು ಪರಿಶೀಲಿಸಿದಾಗ ಬಸಮ್ಮ ಅವರ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ಕುತ್ತಿಗೆ ಕೊಯ್ದು, ಹೊಟ್ಟೆ ಭಾಗದಲ್ಲಿ ಹಲವೆಡೆ ಇರಿದಿರುವುದು ಗೊತ್ತಾಗಿದೆ.
ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕುಂಸಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಇಬ್ಬರ ಮೇಲೆ ಮಾರಕಾಸ್ತ್ರಗಳಿಂದ ದಾಳಿ, ಒಬ್ಬನ ಸ್ಥಿತಿ ಗಂಭೀರ
