ಶಿವಮೊಗ್ಗದ ಅರಣ್ಯ ರಕ್ಷಕ ಎಂ.ಸಲೀಂಗೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಪದಕ ಪ್ರದಾನ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಬೆಂಗಳೂರು: ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ನಡೆದ 71ನೇ ವನ್ಯಜೀವಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅರಣ್ಯ ಇಲಾಖೆಯ 25 ಸಿಬ್ಬಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಮುಖ್ಯಮಂತ್ರಿ ಪದಕ’ (Medal) ಪ್ರದಾನ ಮಾಡಿದರು. ಶಿವಮೊಗ್ಗದ ಅರಣ್ಯ ರಕ್ಷಕ ಎಂ.ಸಲೀಂ ಅವರಿಗು ಪಕದ ಪ್ರದಾನ ಮಾಡಲಾಯಿತು.

ಅರಣ್ಯ ಇಲಾಖೆಯಲ್ಲಿ ಅತ್ಯುತ್ತಮ ಸೇವೆಗಾಗಿ ಶಿವಮೊಗ್ಗದ ಗಸ್ತು ಅರಣ್ಯ ಪಾಲಕ ಎಂ. ಸಲೀಂ ಅವರು 2024ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ (Medal) ಆಯ್ಕೆಯಾಗಿದ್ದರು. ಸಲೀಂ ಅವರು ತಮ್ಮ ಶೌರ್ಯ, ದಿಟ್ಟತನ ಮತ್ತು ಅರಣ್ಯ ಅಭಿವೃದ್ಧಿಯಲ್ಲಿ ಮಾಡಿದ ಮಹತ್ತರ ಕೆಲಸವನ್ನು ಪರಿಗಣಿಸಲಾಗಿದೆ. 2015ರಲ್ಲಿ ಅರಣ್ಯ ಇಲಾಖೆಗೆ ಸೇರ್ಪಡೆಗೊಂಡ ಸಲೀಂ, ಶಿವಮೊಗ್ಗ ವನ್ಯಜೀವಿ ವಲಯ ಮತ್ತು ಕೋಗಾರು ವನ್ಯಜೀವಿ ವಲಯಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ಪ್ರಸ್ತುತ ಅವರು ಉಂಬ್ಳೇಬೈಲು ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಸಾಧನೆಗೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

CM-Medal-for-forest-department-employee-M-Saleem.

ಇದನ್ನೂ ಓದಿ » ಭಾರತೀಯ ವೈದ್ಯಕೀಯ ಸಂಘದ ಶಿವಮೊಗ್ಗ ಶಾಖೆಗೆ ನೂತನ ಅಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ

Medal

Leave a Comment