ಶಿವಮೊಗ್ಗದಲ್ಲಿ ಮಳೆ ಅಬ್ಬರ, ಇಡೀ ದಿನ ಹೇಗಿರಲಿದೆ ವಾತಾವರಣ? ಗಾಳಿ, ಗುಡುಗು ಇರುತ್ತಾ?

ಶಿವಮೊಗ್ಗ: ಜಿಲ್ಲೆಯಾದ್ಯಂತ ಕಳೆದ ರಾತ್ರಿಯಿಂದ ಭಾರಿ ಮಳೆಯಾಗುತ್ತಿದೆ (Rainfall). ಇವತ್ತು ಇಡೀ ದಿನ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ➤ ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಪುನಾರಂಭವಾಗಿದೆ. ಅ.12ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಇತ್ತ ಶಿವಮೊಗ್ಗದಲ್ಲಿ ಕಳೆದ ರಾತ್ರಿಯಿಂದ ಭಾರಿ ಮಳೆ ಸುರಿಯುತ್ತಿದ್ದು, ಗುಡುಗು, ಗಾಳಿಯ ಅಬ್ಬರವು ಜೋರಿದೆ.

ನಡುರಾತ್ರಿ ಗುಡುಗು, ಗಾಳಿ, ಮಳೆ

ನಡುರಾತ್ರಿಯಲ್ಲಿ ಶಿವಮೊಗ್ಗದಲ್ಲಿ ಭಾರಿ ಗಾಳಿ, ಗುಡುಗು ಸಹಿತ ಮಳೆಯಾಗಿದೆ. ರಾತ್ರಿ 2 ಗಂಟೆ ಹೊತ್ತಿಗೆ ಶಿವಮೊಗ್ಗ ನಗರದಲ್ಲಿ ಜೋರು ಮಳೆಯಾಯಿತು. ಈ ವೇಳೆ ರಭಸವಾಗಿ ಗಾಳಿ ಬಿಸಿತು. ಇದು ಜನರಲ್ಲಿ ಆತಂಕ ಉಂಟು ಮಾಡಿತ್ತು.

ಇಡೀ ದಿನ ಸುರಿಯಲಿದೆ ವರ್ಷಧಾರೆ

ಇನ್ನು, ಶಿವಮೊಗ್ಗದಲ್ಲಿ ದಟ್ಟ ಮೋಡ ಆವರಿಸಿದ್ದು ಬಿಡುವು ನೀಡದೆ ಮಳೆ ಸುರಿಯುತ್ತಿದೆ. ಇವತ್ತು ಇಡೀ ದಿನ ಮಳೆಯಾಗಲಿದೆ. ರಾತ್ರಿ 3 ಗಂಟೆವರೆಗು ನಿರಂತರ ಮಳೆಯಾಗುವ ಸಾಧ್ಯತೆ ಇದೆ.

Rain-General-Image-youth-With-an-Umbrella

ಗಾಳಿ, ಗುಡುಗು ಇರಲಿದೆ

ಮಳೆ ಜೊತೆಗೆ ಗಾಳಿ, ಗುಡುಗು ಸಹ ಸೇರಲಿದೆ. ಶಿವಮೊಗ್ಗದಲ್ಲಿ ಗಾಳಿಯ ವೇಗ 7 ಕಿ.ಮೀ. ಇರಲಿದೆ ಎಂದು ಅಂದಾಜಿಸಲಾಗಿದೆ. ಸಂಜೆ 4 ಗಂಟೆಯ ಬಳಿ ಗಾಳಿಯ ತುಸು ಹೆಚ್ಚುವ ನಿರೀಕ್ಷೆ ಇದೆ. ಇದರ ಜೊತೆಗೆ ಗುಡುಗು ಕೂಡ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ » ಶಿವಮೊಗ್ಗ ಸೇರಿ ಐದು ಜಿಲ್ಲೆಗಳಿಗೆ ಬೆಳಗ್ಗೆ 10 ಗಂಟೆವರೆಗೆ ಅಲರ್ಟ್‌

Rainfall

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Leave a Comment

ಮುಂದಿನ ಸುದ್ದಿ ಓದಿ TRENDING

ಕಾರುಗಳಿಗೆ 30 ಪ್ರಮುಖ ಚೆಕಪ್‌ ಉಚಿತ, ಜುಲೈ 8ರವರೆಗೆ ಹಲವು ಆಫರ್‌, ಎಲ್ಲಿ? ಏನೇನೆಲ್ಲ ಆಫರ್‌ಗಳಿವೆ?