ಮೆಗ್ಗಾನ್‌ ಆಸ್ಪತ್ರೆ ಮುಂದೆ ಎರಡು ದಿನ ಧರಣಿ ಸತ್ಯಾಗ್ರಹ, ಕಾರಣವೇನು?

ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸಬೇಕು ಎಂದು ಒತ್ತಾಯಿಸಿ ಅ.15 ಮತ್ತು 16ರಂದು ಮೆಗ್ಗಾನ್ ಬೋಧನಾ ವೈದ್ಯಕೀಯ ಕಾಲೇಜು ಮುಂದೆ ಧರಣಿ ಸತ್ಯಾಗ್ರಹ (Sathyagraha) ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಬಣದ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್ ತಿಳಿಸಿದರು.

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ್‌, ಶಿವಮೊಗ್ಗ ಸೇರಿ ನೆರೆಹೊರೆಯ ಜಿಲ್ಲೆಯ ಬಡವರಿಗೆ ಮೆಗ್ಗಾನ್ ಆಸ್ಪತ್ರೆ ಸಂಜಿವೀನಿಯಾಗಿದೆ. ಆದರೆ ಆಸ್ಪತ್ರೆ ಆಡಳಿತ ವ್ಯವಸ್ಥೆಯಿಂದ ಈಗ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ. ಬಡ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ವೈದ್ಯರು ಕೂಡ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದರು.

ಮೆಗ್ಗಾನ್‌ ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸಬೇಕು, ಪ್ರತ್ಯೇಕವಾಗಿ ಜಿಲ್ಲಾ ಆಸ್ಪತ್ರೆ ಮಾಡಬೇಕು ಎಂದು ಆಗ್ರಹಿಸಿ ಅ.15ರ 10.30 ರಿಂದ ಅ.16ರ ಸಂಜೆ 4 ಗಂಟೆಯವರೆಗೆ ಧರಣಿ ನಡೆಸಲಿದ್ದೇವೆ ಎಂದು ತಿಳಿಸಿದರು.

160125 mc gann hospital general image

ಸುದ್ದಿಗೋಷ್ಠಿಯಲ್ಲಿ ಕರವೇ ಮುಖಂಡರಾದ ಮಧು.ಎಸ್, ಮಂಜು, ಶೈಲೇಶ್, ಲೋಕೇಶ್, ಗೀತಾ, ರವಿಕುಮಾ‌ರ್, ಪ್ರಶಾಂತ್, ಗೀತಾ ಸೇರಿ ಮತ್ತಿತರರು ಇದ್ದರು.

ಇದನ್ನೂ ಓದಿ » ಶಿವಮೊಗ್ಗ KSRTC ಬಸ್‌ ನಿಲ್ದಾಣದಲ್ಲಿ ಮಹಿಳೆ ಅಸ್ವಸ್ಥ, ಮೆಗ್ಗಾನ್‌ ಆಸ್ಪತ್ರೆಯಲ್ಲಿ ಸಾವು

Sathyagraha

160125-mc-gann-hospital-general-image.webp

Leave a Comment