ಶಿವಮೊಗ್ಗ KSRTC ಬಸ್‌ ನಿಲ್ದಾಣದಲ್ಲಿ ಮಹಿಳೆ ಅಸ್ವಸ್ಥ, ಮೆಗ್ಗಾನ್‌ ಆಸ್ಪತ್ರೆಯಲ್ಲಿ ಸಾವು

ಶಿವಮೊಗ್ಗ: KSRTC ಬಸ್‌ ನಿಲ್ದಾಣದಲ್ಲಿ ಅಸ್ವಸ್ಥರಾಗಿದ್ದ ಮಹಿಳೆಯೊಬ್ಬರು ಮೆಗ್ಗಾನ್‌ ಆಸ್ಪತ್ರೆಗೆ ಕರೆದೊಯ್ದಿದ್ದು ಪರೀಕ್ಷಿಸಿದ ವೈದ್ಯರು ಆಕೆ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಮಹಿಳೆಯ ಗುರುತು ಗೊತ್ತಾಗದ ಹಿನ್ನೆಲೆ ವಾರಸುದಾರರ ಪತ್ತೆಗೆ ದೊಡ್ಡಪೇಟೆ ಠಾಣೆ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೃತ ಮಹಿಳೆ 35 ರಿಂದ 42 ವರ್ಷ ವಯಸ್ಸಿನವರು. ಸುಮಾರು 5 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ದುಂಡನೆಯ ಮುಖ ಹಾಗೂ ದೃಢವಾದ ಮೈಕಟ್ಟು ಹೊಂದಿದ್ದಾರೆ. ತಲೆಯಲ್ಲಿ ಸುಮಾರು 8 ಇಂಚು ಉದ್ದದ ಕಪ್ಪು ಬಿಳಿ ಬಣ್ಣದ ತಲೆ ಕೂದಲು, ಬಲಗೈನ ಒಳಭಾಗದಲ್ಲಿ ಏ ರುದ್ರಮ್ಮ, ಹಾಗೂ ತಿಮ್ಳೇಶ್ ಓ ಖ ಎಂಬ ಹಚ್ಚೆ ಗುರುತು ಇದೆ. ಮೃತರ ಎರಡು ಕಣ್ಣಿನ ಸುತ್ತ ಚರ್ಮ ಕಪ್ಪಾಗಿದ್ದು, ಮೈಮೇಲೆ ನೇರಳೆ ಮತ್ತು ಹಸಿರು ಬಣ್ಣದ ಡಿಸೈನ್ ಇರುವ ಪಾಲೀಸ್ಟರ್ ಸೀರೆ, ನೀಲಿ ಬಣ್ಣದ ಜಾಕೇಟ್, ಕಪ್ಪು ಬಣ್ಣದ ಲಂಗ ತೊಟ್ಟಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮೃತರ ವಾರಸುದಾರರ ಸುಳಿವು ದೊರತಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಯ ದೂ.ಸಂ: 08182-261414 ಅಥವಾ 99616882544 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

KSRTC-Bus-Stand-in-Shimoga

ಇದನ್ನೂ ಓದಿ » ಕಾರಿನಲ್ಲಿ ಬಂದು ಹೊಟೇಲ್‌ನಲ್ಲಿ ಊಟ ಕೇಳಿ ಮಾಲೀಕನತ್ತ ಮಚ್ಚು ಬೀಸಿದ ವ್ಯಕ್ತಿ

KSRTC

KSRTC-Bus-Stand-in-Shimoga

Leave a Comment