ಶಿವಮೊಗ್ಗ ಹಾಪ್‌ಕಾಮ್ಸ್‌ಗೆ 15 ನಿರ್ದೇಶಕರು ಅವಿರೋಧ ಆಯ್ಕೆ, ವಿಜಯ್‌ಕುಮಾರ್‌ ಹ್ಯಾಟ್ರಿಕ್‌ ಸಾಧನೆ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ: ಜಿಲ್ಲಾ ತೋಟಗಾರಿಕೆ ಬೆಳೆಗಾರರ ಉತ್ಪನ್ನ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘಕ್ಕೆ (ಹಾಪ್‌ಕಾಮ್ಸ್) ನಿರ್ದೇಶಕರಾಗಿ 15 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂತೇಕಡೂರು ವಿಜಯಕುಮಾರ್ ಸತತ ಮೂರನೇ ಬಾರಿಗೆ ಆಯ್ಕೆಯಾದರೆ, ಡಾ.ಶರತ್ ಮರಿಯಪ್ಪ ಮೊದಲ ಪ್ರಯತ್ನದಲ್ಲಿಯೇ ಯಶಸ್ಸು ಕಂಡರು. (Hopcoms)

ಯಾರೆಲ್ಲ ಆಯ್ಕೆ ಆಗಿದ್ದಾರೆ?

ಈ ಪೈಕಿ ಶಿವಮೊಗ್ಗ ತಾಲೂಕಿನಿಂದ ಆರು ಮಂದಿ ಆಯ್ಕೆಯಾಗಿದ್ದಾರೆ. ಸಂತೇಕಡೂರಿನ ಆರ್.ವಿಜಯಕುಮಾ‌ರ್ (ದನಿ), ಶಿವಮೊಗ್ಗ ತಾಲೂಕು ಕೈದೊಟ್ಟು ಕೆ.ಎಸ್.ಚಂದ್ರೇಗೌಡ, ಬಿ.ಬೀರನಹಳ್ಳಿಯ ಎಂ.ಪಿ.ದಿನೇಶ್ ಪಟೇಲ್, ಕುಂಚೇನಹಳ್ಳಿಯ ಕೆ.ಜಿ.ನಾಗೇಶ್ ನಾಯ್ಕ, ಶೆಟ್ಟಿಹಳ್ಳಿಯ ಪರಶುರಾಮಪ್ಪ, ಶಿವಮೊಗ್ಗ ವೆಂಕಟೇಶ ನಗರದ ಡಾ. ಎಸ್.ಎಂ.ಶರತ್ ಮರಿಯಪ್ಪ, ಕಾಶಿಪುರದ ಮೋಹನ್ ಉಂಬೇಬೈಲು. ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ಭದ್ರಾವತಿ ತಾಲೂಕು ಹನುಮಂತಾಪುರದ ಹೆಚ್.ಎಸ್.ನಾಗರಾಜ, ಮತ್ತಿಘಟ್ಟದ ಆರ್.ಶ್ವೇತಾ, ಶಿಕಾರಿಪುರ ತಾಲೂಕು ದೊಡ್ಡಜೋಗಿಹಳ್ಳಿಯ ಬಿ.ಡಿ.ಭೂಕಾಂತ್, ಚುರ್ಚುಗುಂಡಿಯ ಬಿ.ಎಂ.ರತ್ನಮ್ಮ, ಸೊರಬ ತಾಲೂಕು ಕಾಸರಗುಪ್ಪೆಯ ಕೆ.ವಿ.ಗೌಡ, ಹೊಸನಗರ ತಾಲೂಕು ನಿವಣೆಯ ಹೆಚ್.ಎಸ್.ನರಸಿಂಹಗೌಡ, ಸಾಗರ ತಾಲೂಕು ಆನಂದಪುರಂನ ನಾರಾಯಣ, ತೀರ್ಥಹಳಿ ತಾಲೂಕು ಕುಣಜೆಯ ಕಿರಣ್ ಪ್ರಭಾಕರ.

ಹಾಪ್‌ಕಾಮ್ಸ್‌ನ 15 ಕ್ಷೇತ್ರಕ್ಕೆ 20 ಜನರು ನಾಮಪತ್ರ ಸಲ್ಲಿಸಿದ್ದರು. ಐವರು ನಾಮಪತ್ರ ವಾಪಸ್ ತೆಗೆದುಕೊಂಡಿದ್ದರಿಂದ ಉಳಿದವರು ಅವಿರೋಧವಾಗಿ ಆಯ್ಕೆಯಾದರು.

ಇದನ್ನೂ ಓದಿ » ದೀಪಾವಳಿ: ಶಿವಮೊಗ್ಗ, ತಾಳಗುಪ್ಪದಿಂದ ಮೆಜಸ್ಟಿಕ್‌, ಯಶವಂತಪುರ, ಕಂಟೋನ್ಮೆಂಟ್‌ಗೆ ವಿಶೇಷ ರೈಲುಗಳು

Hopcoms

Leave a Comment