ಶಿವಮೊಗ್ಗದ 8, 9, 10ನೇ ತರಗತಿ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆ, ಏನೆಲ್ಲ ಸ್ಪರ್ಧೆಗಳಿವೆ?

ಶಿವಮೊಗ್ಗ: ತ್ಯಾವರೆಕೊಪ್ಪದ ಪ್ರಾಣಿ ಸಂಗ್ರಹಾಲಯ ಹಾಗೂ ಹುಲಿ ಮತ್ತು ಸಿಂಹಧಾಮ, ಶಿವಮೊಗ್ಗದ ಪೇಸ್ ಪದವಿ ಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ 8, 9 ಮತ್ತು 10ನೇ ತರಗತಿಗಳಿಗೆ ಜಿಲ್ಲಾ ಮಟ್ಟದ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಅ.25ರಂದು ಬೆಳಗ್ಗೆ 9 ಗಂಟೆಗೆ ತೇವರಚಟ್ನಹಳ್ಳಿಯ ಪೇಸ್‌ ಪದವಿ ಪೂರ್ವ ಕಾಲೇಜಿನಲ್ಲಿ ಸ್ಪರ್ಧೆಗಳು (Competition) ನಡೆಯಲಿವೆ. (ಈ ಸುದ್ದಿಯನ್ನು ಇನ್ನು 67 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಯಾವೆಲ್ಲ ಸ್ಪರ್ಧಗಳು ನಡೆಯಲಿವೆ?

ರಸಪ್ರಶ್ನೆ: ವನ್ಯಜೀವಿಗಳು ಮತ್ತು ಸಾಮಾನ್ಯ ಜ್ಞಾನ ಕುರಿತು

ಕೃತಕ ಬುದ್ಧಿಮತ್ತೆ (AI) ಪೇಂಟಿಂಗ್‌: ಶಿವಮೊಗ್ಗ ಜಿಲ್ಲಾ ವನ್ಯಜೀವಿಗಳನ್ನು ಕುರಿತ ಚಿತ್ರಕಲೆ

ಪವರ್ ಪಾಯಿಂಟ್ ಪ್ರೆಸೆಂಟೇಶನ್: ಪರಿಸರದ ಬದಲಾವಣೆಗೆ ಕಾರಣಗಳು ಮತ್ತು ಪರಿಹಾರೋಪಾಯಗಳು

ಪೋಸ್ಟರ್ ಮೇಕಿಂಗ್ & ಪ್ರೆಸೆಂಟೇಶನ್: ಇತ್ತೀಚೆಗೆ ನಾಶವಾದ ಸಸ್ಯ ಮತ್ತು ಪ್ರಾಣಿ ಪ್ರಭೇದಗಳು

ವಿಜ್ಞಾನದ ಮಾದರಿಗಳ ಪ್ರದರ್ಶನ: ಪ್ರದರ್ಶನ ಮಾತ್ರ

ಬೆಸ್ಟ್ ಔಟ್ ಆಫ್ ವೇಸ್ಟ್: ಪ್ಲಾಸ್ಟಿಕ್, ಬಾಟಲ್, ಕಾರ್ಡ್‌ಬೋರ್ಡ್, ನ್ಯೂಸ್‌ ಪೇಪ‌ರ್, ನಾಣ್ಯ, ಸಿ.ಡಿ, ಬಟ್ಟೆ ಇತ್ಯಾದಿಗಳನ್ನು ಬಳಸಿ

ಈ ಸ್ಪರ್ಧೆಗಳಲ್ಲಿ ಪ್ರತಿ ಶಾಲೆಯಿಂದ ಇಬ್ಬರು ವಿದ್ಯಾರ್ಥಿಗಳನ್ನು ಒಳಗೊಂಡ ತಂಡಕ್ಕೆ ಅವಕಾಶ ಇರಲಿದೆ.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ

ಸಂಗೀತ, ಆಶುಭಾಷಣ, ಪ್ರಬಂಧ ಸ್ಪರ್ಧೆಗಳು

ಇನ್ನು, ಸುಗಮ ಸಂಗೀತ, ಆಶುಭಾಷಣ, ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಇದರಲ್ಲಿ ಪ್ರತಿ ಶಾಲೆಯಿಂದ ಒಬ್ಬ ವಿದ್ಯಾರ್ಥಿಗೆ ಮಾತ್ರ ಅವಕಾಶ ಇರಲಿದೆ.

ಸುಗಮ ಸಂಗೀತ ಸ್ಪರ್ಧೆ: ಕನ್ನಡ ಪರಿಸರ ಗೀತೆ

ಆಶುಭಾಷಣ ಸ್ಪರ್ಧೆ: ವಿಷಯವನ್ನು ಸ್ಥಳದಲ್ಲೇ ನೀಡಲಾಗುವುದು.

ಪ್ರಬಂಧ ಸ್ಪರ್ಧೆ: ಕೃತಕ ಬುದ್ಧಿಮತ್ತೆ v/s ಮಾನವ ಬುದ್ಧಿಮತ್ತೆ (ಕನ್ನಡದಲ್ಲಿ 2 ಪುಟದಿಂದ 4 ಪುಟಕ್ಕೆ ಮೀರದಂತೆ)

ಹೆಚ್ಚಿನ ಮಾಹಿತಿಗೆ ಸಜಯ್‌: 8088991234, ಸುನಿಲ್‌ ದತ್‌ ಜೋಶಿ: 9900631508 ಸಂಪರ್ಕಿಸಬಹುದು.

ಇದನ್ನೂ ಓದಿ » ಶಿವಮೊಗ್ಗ ಹಾಪ್‌ಕಾಮ್ಸ್‌ಗೆ 15 ನಿರ್ದೇಶಕರು ಅವಿರೋಧ ಆಯ್ಕೆ, ವಿಜಯ್‌ಕುಮಾರ್‌ ಹ್ಯಾಟ್ರಿಕ್‌ ಸಾಧನೆ

Competition

PACE-PU-COLLEGE-SHIMOGA.

Leave a Comment